Home » ರಾಜ್ಯ » ಜಿಲ್ಲಾ ಉದ್ಯಮ ಕೇಂದ್ರದಿಂದ ಕುಶಲಕರ್ಮಿಗಳಿಗೆ 500 ಕಿಟ್‌ಗಳ ವಿತರಣೆಗೆ ಅರ್ಜಿ ಆಹ್ವಾನ

ಜಿಲ್ಲಾ ಉದ್ಯಮ ಕೇಂದ್ರದಿಂದ ಕುಶಲಕರ್ಮಿಗಳಿಗೆ 500 ಕಿಟ್‌ಗಳ ವಿತರಣೆಗೆ ಅರ್ಜಿ ಆಹ್ವಾನ

ರಾಯಚೂರು, ಡಿಸೆಂಬರ್: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ 2025-26ನೇ ಸಾಲಿನಲ್ಲಿ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ವಿವಿಧ ವೃತ್ತಿ ಆಧಾರಿತ ಕಿಟ್‌ಗಳ ವಿತರಣೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಅಧಿಕಾರಿಗಳ ಪ್ರಕಾರ, ಈ ಯೋಜನೆಯಡಿ ಒಟ್ಟು 500 ಕಿಟ್‌ಗಳನ್ನು ವಿತರಿಸಲಾಗುತ್ತಿದ್ದು, ಅವುಗಳ ವಿವರ ಹೀಗಿವೆ:

ಮಹಿಳೆಯರಿಗಾಗಿ ಬ್ಯೂಟಿ ಪಾರ್ಲರ್ ಕಿಟ್ಸ್ – 150

ಪುರುಷ/ಮಹಿಳೆಯರಿಗೆ ಮೊಬೈಲ್ ರಿಪೇರಿ ಕಿಟ್ಸ್ – 200

ಬಿದಿರು-ಬೆತ್ತದ ಉತ್ಪನ್ನಗಳ ತಯಾರಿಕೆ (ಹ್ಯಾಂಡಿಕ್ರಾಫ್ಟ್)

ಪುರುಷ/ಮಹಿಳೆಯರಿಗೆ ದೋಭಿ (ಲಾಂಡ್ರಿ) ಕಿಟ್ಸ್ – 150


ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

ಜನ್ಮ ದಿನಾಂಕ ನಮೂದಿರುವ ದಾಖಲೆ – ಅಂಕಪಟ್ಟಿ ಅಥವಾ TC

ಕನಿಷ್ಠ 7ನೇ ತರಗತಿ ತೇರ್ಗಡೆ
(ಬಿದಿರು ಬೆತ್ತದ ಉತ್ಪನ್ನ ತಯಾರಿಕೆ/ದೋಭಿ ಕಿಟ್ಸ್‌ಗೆ ಶೈಕ್ಷಣಿಕ ಅರ್ಹತೆ ಅಗತ್ಯವಿಲ್ಲ)

ಜಾತಿ ಪ್ರಮಾಣ ಪತ್ರ (ಪ.ಜಾತಿ, ಪಂ.ಪಂಗಡ, ಅಲ್ಪಸಂಖ್ಯಾತರಿಗೆ ಮಾತ್ರ)

ವಿಕಲಚೇತನ/ವಿಧವೆ ಪ್ರಮಾಣ ಪತ್ರ (ಅಗಿದ್ದಲ್ಲಿ)

ಚಾಲ್ತಿಯಲ್ಲಿರುವ ಪಡಿತರ ಚೀಟಿ (BPL/Antyodaya) ಮತ್ತು ಆಧಾರ್ ಕಾರ್ಡ್

ಪಾಸ್‌ಪೋರ್ಟ್ ಗಾತ್ರದ ಫೋಟೋ

ವೃತ್ತಿ ದೃಢೀಕರಣ ಪತ್ರ (ಲೇಬರ್ ಕಾರ್ಡ್) / PDO ನೀಡಿದ ದೃಢೀಕರಣ ಪತ್ರ


ಅರ್ಹ ಅಭ್ಯರ್ಥಿಗಳು https://raichur.nic.in ಈ ವೆಬ್‌ಸೈಟ್ ಮೂಲಕ ಡಿಸೆಂಬರ್ 31 ರೊಳಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸಂಪರ್ಕ ವಿವರ:

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು (ಗ್ರಾಮೀಣ ಕೈಗಾರಿಕೆ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ್, ಹೈದರಾಬಾದ್ ರಸ್ತೆ, ರಾಯಚೂರು ಇವರನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು.

ಈ ಕುರಿತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This