ರಾಯಚೂರು, ಡಿಸೆಂಬರ್: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ 2025-26ನೇ ಸಾಲಿನಲ್ಲಿ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ವಿವಿಧ ವೃತ್ತಿ ಆಧಾರಿತ ಕಿಟ್ಗಳ ವಿತರಣೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅಧಿಕಾರಿಗಳ ಪ್ರಕಾರ, ಈ ಯೋಜನೆಯಡಿ ಒಟ್ಟು 500 ಕಿಟ್ಗಳನ್ನು ವಿತರಿಸಲಾಗುತ್ತಿದ್ದು, ಅವುಗಳ ವಿವರ ಹೀಗಿವೆ:
ಮಹಿಳೆಯರಿಗಾಗಿ ಬ್ಯೂಟಿ ಪಾರ್ಲರ್ ಕಿಟ್ಸ್ – 150
ಪುರುಷ/ಮಹಿಳೆಯರಿಗೆ ಮೊಬೈಲ್ ರಿಪೇರಿ ಕಿಟ್ಸ್ – 200
ಬಿದಿರು-ಬೆತ್ತದ ಉತ್ಪನ್ನಗಳ ತಯಾರಿಕೆ (ಹ್ಯಾಂಡಿಕ್ರಾಫ್ಟ್)
ಪುರುಷ/ಮಹಿಳೆಯರಿಗೆ ದೋಭಿ (ಲಾಂಡ್ರಿ) ಕಿಟ್ಸ್ – 150
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
ಜನ್ಮ ದಿನಾಂಕ ನಮೂದಿರುವ ದಾಖಲೆ – ಅಂಕಪಟ್ಟಿ ಅಥವಾ TC
ಕನಿಷ್ಠ 7ನೇ ತರಗತಿ ತೇರ್ಗಡೆ
(ಬಿದಿರು ಬೆತ್ತದ ಉತ್ಪನ್ನ ತಯಾರಿಕೆ/ದೋಭಿ ಕಿಟ್ಸ್ಗೆ ಶೈಕ್ಷಣಿಕ ಅರ್ಹತೆ ಅಗತ್ಯವಿಲ್ಲ)
ಜಾತಿ ಪ್ರಮಾಣ ಪತ್ರ (ಪ.ಜಾತಿ, ಪಂ.ಪಂಗಡ, ಅಲ್ಪಸಂಖ್ಯಾತರಿಗೆ ಮಾತ್ರ)
ವಿಕಲಚೇತನ/ವಿಧವೆ ಪ್ರಮಾಣ ಪತ್ರ (ಅಗಿದ್ದಲ್ಲಿ)
ಚಾಲ್ತಿಯಲ್ಲಿರುವ ಪಡಿತರ ಚೀಟಿ (BPL/Antyodaya) ಮತ್ತು ಆಧಾರ್ ಕಾರ್ಡ್
ಪಾಸ್ಪೋರ್ಟ್ ಗಾತ್ರದ ಫೋಟೋ
ವೃತ್ತಿ ದೃಢೀಕರಣ ಪತ್ರ (ಲೇಬರ್ ಕಾರ್ಡ್) / PDO ನೀಡಿದ ದೃಢೀಕರಣ ಪತ್ರ
ಅರ್ಹ ಅಭ್ಯರ್ಥಿಗಳು https://raichur.nic.in ಈ ವೆಬ್ಸೈಟ್ ಮೂಲಕ ಡಿಸೆಂಬರ್ 31 ರೊಳಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಸಂಪರ್ಕ ವಿವರ:
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು (ಗ್ರಾಮೀಣ ಕೈಗಾರಿಕೆ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ್, ಹೈದರಾಬಾದ್ ರಸ್ತೆ, ರಾಯಚೂರು ಇವರನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು.
ಈ ಕುರಿತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್







