ಹೆಸರು: ಬಿ.ಎಂ.ಮೇಘನಾ ಊರು: ಶಿವಮೊಗ್ಗ ವಿದ್ಯಾರ್ಹತೆ: ಬಿ ಎ
ಹಿನ್ನೆಲೆ: ಮೇಘನಾ ಶಿವಮೊಗ್ಗದ ಡಿವಿಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಎ.ಎಸ್.ವತ್ಸಲಾ ಮತ್ತು ವಕೀಲ ಬಿ.ಜಿ.ಮೋಹನ್ ಅವರ ಪುತ್ರಿ. ಶಿವಮೊಗ್ಗದ ಮಂದಾರ ಜ್ಞಾನದಾಯಿನಿ ಶಾಲೆಯಲ್ಲಿ 1ರಿಂದ 10ನೇ ತರಗತಿ ಓದಿದ್ದು, ಪದವಿಪೂರ್ವ ಶಿಕ್ಷಣವನ್ನು ಜಾವಳ್ಳಿಯ ಅರಬಿಂದೋ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದಿದ್ದಾರೆ.
ಅಭಿಪ್ರಾಯ: 5ನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿರುವ ಮೇಘನಾ, 2008-09ರಲ್ಲಿ ಶಿವಮೊಗ್ಗಕ್ಕೆ ಬಂದಿದ್ದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಚಿಣ್ಣರನ್ನು ಉದ್ದೇಶಿಸಿ ಮಾತನಾಡುವಾಗ ಬದುಕಿನಲ್ಲಿ ಚಿಕ್ಕ ಗುರಿ ಇಟ್ಟುಕೊಳ್ಳುವುದು ಅಪರಾಧ ಎಂದು ಹೇಳಿದ್ದರು. ಮನೆಗೆ ಬಂದವಳೇ ‘ಚಿಕ್ಕ ಗುರಿ, ದೊಡ್ಡ ಗುರಿ ಅಂದರೇನು? ಎಂದು ಅಮ್ಮನ ಬಳಿ ಕೇಳಿ ತಿಳಿದುಕೊಂಡೆ. ಆಗ ಯುಪಿಎಸ್‌ಸಿ ಪರೀಕ್ಷೆ ಬರೆದು ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳುವ ಕನಸು ಹುಟ್ಟಿತ್ತು. ಅದು ಈಗ ನನಸಾಗಿದೆ’ ಎಂದು ‘ಪತ್ರಕರ್ತರ’ ಎದುರು ಹರ್ಷ ವ್ಯಕ್ತಪಡಿಸಿದರು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಯಶಸ್ಸು ಪಡೆದಿರುವ ಇವರು, ಭರತನಾಟ್ಯ, ಸಂಗೀತ ಹಾಗೂ ಗಮಕ ಗಾಯನದ ಜೊತೆಗೆ ಶಿವಮೊಗ್ಗದ ‘ಹೊಂಗಿರಣ’ ಸಂಸ್ಥೆಯ ಮೂಲಕ ರಂಗ ಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದಾರೆ
ಬಿ.ಎಂ.ಮೇಘನಾ
‘ಎನ್‌ಸಿಆರ್‌ಟಿ ಪಠ್ಯ ಓದಿನಿಂದ ಆಸಕ್ತಿ’
ಹೆಸರು: ಎಂ.ಆರ್. ನಿಖಿಲ್ ಊರು: ಮೈಸೂರು ವಿದ್ಯಾರ್ಹತೆ:
ಹಿನ್ನೆಲೆ: ಮೈಸೂರಿನ ಕುವೆಂಪುನಗರದ ಐಶ್ವರ್ಯ ಲೇಔಟ್ ನಿವಾಸಿ, ಪೌರಾಡಳಿತ ಇಲಾಖೆ ನಿವೃತ್ತ ಪೌರಾಯುಕ್ತ ರಮೇಶ್ ಹಾಗೂ ಶ್ರೀರಂಗಪಟ್ಟಣ ಬಿಇಒ ಕಚೇರಿಯ ಶಿಕ್ಷಣ ಸಂಯೋಜಕಿ ಬಿ,ಕೆ. ಪ್ರತಿಮಾ ದಂಪತಿ ಪುತ್ರ. ಕೌಟಿಲ್ಯ ಶಾಲೆಯಲ್ಲಿ ಪ್ರೌಢಶಿಕ್ಷಣ, ಕಾವೇರಿ ಕಾಲೇಜಿನಲ್ಲಿ ಪಿಯು, ಎಸ್‌ಜೆಸಿಇ ಕಾಲೇಜಿನಲ್ಲಿ ಬಿ.ಇ. ಪದವಿ.
ಐದನೇ ಪ್ರಯತ್ನದಲ್ಲಿ ಯಶಸ್ಸು. ಭೂಗೋಳ ಶಾಸ್ತ್ರ ಐಚ್ಛಿಕ ವಿಷಯ. 2022-23ನೇ ಸಾಲಿನ ಕೆಎಎಸ್ ಪರೀಕ್ಷೆಯಲ್ಲಿ ನಾಲ್ಕನೇ ಬ್ಯಾಂಕ್ ವಿಜೇತ. ಸದ್ಯ ಬೆಂಗಳೂರಿನಲ್ಲಿ ಸಹಾಯಕ ಕಾರ್ಮಿಕ ಆಯುಕ್ತ.
ಅಭಿಪ್ರಾಯ: ಎಂಜಿನಿಯರಿಂಗ್ ನಾಲ್ಕನೇ ವರ್ಷದಲ್ಲಿರುವಾಗ ಎನ್‌ಸಿಆರ್‌ಟಿ ಪಠ್ಯಪುಸ್ತಕಗಳ ಓದಿನಿಂದ ಸಿದ್ಧತೆ ಶುರುವಾಯಿತು. ಹಿಂದಿನ ಎರಡು ಬಾರಿ ಸಂದರ್ಶನದ ಹಂತ ತಲುಪಿದ್ದೆ. ಕೆಎಎಸ್ ಉತ್ತೀರ್ಣನಾದ ಬಳಿಕ ಉದ್ಯೋಗದ ಜೊತೆಗೇ ತಯಾರಿ ಮುಂದುವರಿಸಿದ್ದೆ. ಪೋಷಕರ ಜೊತೆಗೆ ಧ್ರುವಕುಮಾರ್ ಹಿರೇಮಠ ಅಂತಹವರ ಮಾರ್ಗದರ್ಶನ ನೆರವಾಯಿತು. ನಿತ್ಯ 8-10 ಗಂಟೆ ಓದುತ್ತಿದ್ದೆ. ಹಿಂದಿನ ಪರೀಕ್ಷೆಗಳ ಅನುಭವ ಸಹಾಯಕ್ಕೆ ಬಂತು. ಪಠ್ಯದ ಜೊತೆಗೆ ಆನ್‌ಲೈನ್ ಓದು ಸಹ ಇತ್ತು.
ఎం.ఆరా. ನಿಖಿಲ
‘ಐಪಿಎಸ್ ಅಧಿಕಾರಿಯಾಗುವ ಆಸೆ’
ಹೆಸರು: ಸಂಪ್ರೀತ್ ಸಂತೋಷ್ ಊರು: ಮಂಡ್ಯ
ಹಿನ್ನೆಲೆ: 2023-24ನೇ ಸಾಲಿನ ಯುಪಿಎಸ್‌ಸಿ ಫಲಿತಾಂಶದಲ್ಲಿ 868ನೇ ಬ್ಯಾಂಕ್ ಪಡೆದು ಭಾರತೀಯ ಕಂದಾಯ ಸೇವೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ಹೈದರಾಬಾದ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಸಾಲಿನಲ್ಲಿ ಫಲಿತಾಂಶವನ್ನು ಮತ್ತಷ್ಟು ವೃದ್ಧಿಸಿಕೊಂಡಿದ್ದಾರೆ. ತಂದೆ ಸಂತೋಷ್ ಕುಮಾರ್ ಸಹಕಾರ ಇಲಾಖೆ ಅಧಿಕಾರಿಯಾಗಿದ್ದರು.
ಅಭಿಪ್ರಾಯ: ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದೆ. ಭಾರತೀಯ ಆಡಳಿತ ಸೇವೆ, ಪೊಲೀಸ್ ಸೇವೆ ಸೇರಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದೆ. ಮೊದಲ ಪ್ರಯತ್ನದಲ್ಲಿ ನಿರೀಕ್ಷಿತ ಅಂಕಗಳು ಬರಲಿಲ್ಲ. ಈಗ ಐಪಿಎಸ್ ಅಧಿಕಾರಿಯಾಗುವ ನಿರೀಕ್ಷೆ ಮೂಡಿದೆ.
ಸಂಪ್ರೀತ್
ಆರನೇ ಪ್ರಯತ್ನದಲ್ಲಿ ಯಶಸ್ಸು
ಹೆಸರು: ಇಂದ್ರಾರ್ಚಿತಾ ಊರು: ಕುಂದಾಪುರದ ಬೋಳಂಬಳ್ಳಿ (ಹೈದರಾಬಾದ್‌ನಲ್ಲಿ ನೆಲಸಿದ್ದಾರೆ)
ಹಿನ್ನೆಲೆ: ಹೈದರಾಬಾದ್‌ನ ಉದ್ಯಮಿ ರಾಘವೇಂದ್ರ ರಾವ್, ಮಮತಾ ದಂಪತಿ ಪುತ್ರಿ. ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೆ ಹೈದರಾಬಾದ್‌ನಲ್ಲೇ ಕಲಿತವರು. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಯುಪಿಎಸ್‌ಸಿಯಲ್ಲಿ ಆರನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಅಭಿಪ್ರಾಯ: ‘ಚಿಕ್ಕಂದಿನಿಂದಲೇ ನಾಗರಿಕ ಸೇವಾ ಅಧಿಕಾರಿಯಾಗಬೇಕೆಂಬ ಕನಸಿತ್ತು. ಪರೀಕ್ಷೆಗಾಗಿ ದಿನದಲ್ಲಿಷ್ಟು, ವಾರದಲ್ಲಿಷ್ಟು ಸಿಲೆಬಸ್ ಓದಿ ಪೂರ್ತಿಗೊಳಿಸಬೇಕೆಂಬ ಗುರಿ ಹಾಕಿಕೊಳ್ಳುತ್ತಿದ್ದೆ. ಅದಕ್ಕಾಗಿ ದಿನದಲ್ಲಿ 8ರಿಂದ 10 ಗಂಟೆ ಓದುತ್ತಿದ್ದೆ. ಪರೀಕ್ಷೆ ಹತ್ತಿರ ಬರುವಾಗ ದಿನದಲ್ಲಿ 10 ಗಂಟೆ ಓದುತ್ತಿದ್ದೆ.
ಇಂದ್ರಾರ್ಚಿತಾ
‘ಮರ್ತೆಗಳು ಓದುವುರಿಂದ ದೊಡ್ಡ ಪರಿಣಾಮ
ಹೆಸರು: ತನಕ ಡಿ. ಆನಂದ್ ಊರು: ಮೈಸೂರು ವಿದ್ಯಾರ್ಹತೆ:
ಹಿನ್ನೆಲೆ: ಮೈಸೂರಿನ ಶ್ರೀರಾಂಪುರದ ನಿವಾಸಿ, ದಿ. ಕೆ.ಎ.ದಿವಾಕರ್ ಹಾಗೂ ಗೃಹಿಣಿ ಆಶಾಲತಾ ದಂಪತಿ ಪುತ್ರ. ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಲ್ಲಿ ಪಿಯುವರೆಗೆ. ಎಸ್‌ಜೆಸಿಇ ಕಾಲೇಜಿನಲ್ಲಿ ಬಿ.ಇ. ಪದವಿ. ಆರನೇ ಪ್ರಯತ್ನದಲ್ಲಿ ಯಶಸ್ಸು. ಸೋಶಿಯಾಲಜಿ ಐಚ್ಛಿಕ ವಿಷಯ ಓದು. 2 ಬಾರಿ ಸಂದರ್ಶನ ಎದುರಿಸಿದ್ದರು. ಸದ್ಯ ಮೈಸೂರಿನ ನವೋದಯ ಫೌಂಡೇಶನ್ ಸಂಸ್ಥೆಯ ನವೋ- ಪ್ರಮತಿ ತರಬೇತಿ ಸಂಸ್ಥೆಯಲ್ಲಿ ಬೋಧಕ.
ಅಭಿಪ್ರಾಯ: ಮೈಸೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅಂಧ ವ್ಯಕ್ತಿ ಕೆಂಪಹೊನ್ನಯ್ಯ ಅವರು ಯುಪಿಎಸ್‌ಸಿಯಲ್ಲಿ 340ನೇ ಸ್ಥಾನಗಳಿಸಿದ್ದು ಹೆಚ್ಚು ಪ್ರೇರೇಪಿಸಿತ್ತು. ಕೋವಿಡ್ ಲಾಕ್‌ಡೌನ್ ವೇಳೆ ದೃಢ ನಿರ್ಧಾರ ಮಾಡಿ ಹೆಚ್ಚಿನ ಅಧ್ಯಯನದಲ್ಲಿ ತೊಡಗಿದೆ. ನಿತ್ಯ 6 ಗಂಟೆ ಓದುತ್ತಿದ್ದೆ. ಮುಖ್ಯ ಪರೀಕ್ಷೆ ತಯಾರಿ ವೇಳೆ 10ರಿಂದ 12 ಗಂಟೆಗಳಿಗೂ ತಲುಪುತ್ತಿತ್ತು. ತರಬೇತಿ ನಿರತರೊಂದಿಗೆ ಚರ್ಚೆ, ಪತ್ರಿಕೆಯ ಓದು ದೊಡ್ಡ ಪರಿಣಾಮವನ್ನು ಬೀರಿದೆ ಎಂದು ಹೇಳಿದರು.







