ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ 1770 ಟ್ರೇಡ್ ಹಾಗೂ ಟೆಕ್ನೀಷಿಯನ್ ತರಬೇತುದಾರರ ಹುದ್ದೆಗಳಿಗೆ ನೇಮಕ ಪ್ರಕಟಣೆ ಹೊರಡಿಸಿದೆ. ಯಾವುದೇ ಪರೀಕ್ಷೆಗಳನ್ನು ನಡೆಸದೇ ಕೇವಲ ದಾಖಲೆಗಳ ಪರಿಶೀಲನೆ ನಡೆಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನೋಟಿಫಿಕೇಶನ್ ಚೆಕ್ ಮಾಡಲು ಲಿಂಕ್, ಹುದ್ದೆಗಳಿಗೆ ವೇತನ ಎಷ್ಟು, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ, ಇತರೆ ಮಾಹಿತಿಗಳನ್ನು ತಿಳಿದು, ಆಸಕ್ತರು ಅರ್ಜಿ ಸಲ್ಲಿಸಿ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ – IOCL ಭರ್ಜರಿ ಜಾಬ್ ನೋಟಿಫಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ. ತನ್ನ ಘಟಕಗಳಲ್ಲಿನ ಆಪರೇಟಿಂಗ್, ಫಿಟ್ಟರ್, ಬಾಯ್ಲರ್, ಡಾಟಾ ಎಂಟ್ರಿ, ಅಕೌಂಟಂಟ್, ಮೆಕ್ಯಾನಿಕಲ್, ಕೆಮಿಕಲ್, ಇಲೆಕ್ಟ್ರಿಕಲ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಟ್ರೇಡ್ ಹಾಗೂ ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಐಟಿಐ / ಪಿಯುಸಿ / ಡಿಪ್ಲೊಮ / ಬಿಎ, ಬಿಎಸ್ಸಿ, ಬಿಕಾಂ ಅರ್ಹತೆ ಪಡೆದಿದ್ದಲ್ಲಿ, ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ಮಾಸಿಕ ಆಕರ್ಷಕ ಸಂಬಳವನ್ನು ನೀಡಲಾಗುತ್ತದೆ. 2025-26ನೇ ಸಾಲಿನ ತರಬೇತುದಾರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಈ ನೇಮಕ ಪ್ರಕ್ರಿಯೆ ಮೂಲಕ ನಿಯೋಜಿಸಿಕೊಳ್ಳಲಾಗುತ್ತದೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ವಯಸ್ಸಿನ ಅರ್ಹತೆ
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ಒಬಿಸಿ / ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅಪ್ರೆಂಟಿಸ್ ಅವಧಿ : 12 ತಿಂಗಳು.
ಅಪ್ರೆಂಟಿಸ್ ಅಭ್ಯರ್ಥಿಗಳಿಗೆ 1960 ಅಪ್ರೆಂಟಿಸ್ ಕಾಯ್ದೆ ಅನ್ವಯ ಮಾಸಿಕ ಸ್ಟೈಫಂಡ್ Rs.7000- 15000 ವರೆಗೆ ಐಒಸಿಎಲ್ ನೀಡಲಿದೆ.
ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸಗಳು:https://www.iocrefrecruit.in/iocrefrecruit/index







