ನವದೆಹಲಿ : ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಒಟ್ಟು 18,174 ಹುದ್ದೆಗಳನ್ನು ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಎಕ್ಸಾಮಿನೇಷನ್ (CGL) ಮೂಲಕ ಭರ್ತಿ ಮಾಡಲು ಅಂತಿಮಗೊಳಿಸಿದೆ. ಅಭ್ಯರ್ಥಿಗಳು ssc.gov.in ವೆಬ್ಸೈಟ್ ಮೂಲಕ ಯಲ್ಲಾ ಹುದ್ದೆವಾರು ಖಾಲಿ ಹುದ್ದೆಗಳನ್ನ ಪರಿಶೀಲಿಸಬಹುದು.
ಹಿಂದಿನದಕ್ಕಿಂತ ಈ ಬಾರಿ ಹೆಚ್ಚಿನ ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಈ ಹಿಂದೆ 17,727 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಬಾರಿ 18,174 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ
ಅರ್ಹತೆಗಳು..!
ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚುವರಿ ಶೈಕ್ಷಣಿಕ ಅರ್ಹತೆಗಳನ್ನ ಪೋಸ್ಟ್ ವಾರು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳನ್ನು ಎರಡು ಹಂತದ (ಶ್ರೇಣಿ -1 ಮತ್ತು ಶ್ರೇಣಿ -2) ಪರೀಕ್ಷೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.







