ಭಾರತವು ಆಹಾರ ಸಂಸ್ಕರಣಾ ಉದ್ಯಮದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿದೆ. ಮಸಾಲೆಗಳ ಅತಿದೊಡ್ಡ ಉತ್ಪಾದಕ, ಗ್ರಾಹಕ ಮತ್ತು ರಫ್ತುದಾರ ರಾಷ್ಟ್ರ ಎನಿಸಿಕೊಂಡಿದೆ. ಆಹಾರ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳ ಎರಡನೇ ಅತಿದೊಡ್ಡ ಉತ್ಪಾದಕ ಮತ್ತು ವಿಶ್ವದ ಅತಿದೊಡ್ಡ ಹಾಲಿನ ಉತ್ಪಾದಕ ಎಂದು ಹೆಸರುವಾಸಿಯಾಗಿದೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಅಭಿಯಾನದಂತಹ ಉಪಕ್ರಮಗಳೊಂದಿಗೆ, ಸರ್ಕಾರವು ದೇಶದಲ್ಲಿನ ಕಿರು ಆಹಾರ ಸಂಸ್ಕರಣಾ ಘಟಕಗಳಿಗೆ ಮತ್ತಷ್ಟು ಉತ್ತೇಜನ ನೀಡಲು ನಿರ್ಧರಿಸಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಾರಂಭಿಸಿದ “ಸ್ಥಳೀಯರಿಗೆ ಧ್ವನಿ” ಅಭಿಯಾನದಿಂದ ಸ್ಫೂರ್ತಿ ಪಡೆದು, ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (PMFME) ಯೋಜನೆಯನ್ನು ಜೂನ್ 29, 2020 ರಂದು ಭಾರತದ ಎಲ್ಲಾ ಕಿರು ಘಟಕಗಳಿಗೆ ಸಹಾಯಧನ ಪ್ರಾರಂಭಿಸಲಾಯಿತು.
PMFME ಯೋಜನೆಯ ಬಗ್ಗೆ
PMFME ಎಂಬುದು ಕೇಂದ್ರೀಯ ಅನುದಾನಿತ ವಲಯದ ಯೋಜನೆಯಾಗಿದ್ದು, ದೇಶದ ಕಿರು ಆಹಾರ ಸಂಸ್ಕರಣಾ ಘಟಕಗಳಿಗೆ ಹಣಕಾಸು, ತಾಂತ್ರಿಕ ಮತ್ತು ವ್ಯವಹಾರ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಆಹಾರ ಸಂಸ್ಕರಣಾ ಉದ್ಯಮದ ಅಸಂಘಟಿತ ವಿಭಾಗದಲ್ಲಿ ಹೊಸ ಮತ್ತು ಅಸ್ತಿತ್ವದಲ್ಲಿರುವ ವೈಯಕ್ತಿಕ ಕಿರು ಉದ್ಯಮಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ವಲಯದ ಕಾನೂನುಬದ್ಧಗೊಳಿಸುವಿಕೆಯನ್ನು ಉತ್ತೇಜಿಸುವುದು PMFME ಯೋಜನೆಯ ಗುರಿಯಾಗಿದೆ. PMFME ಯೋಜನೆಗಾಗಿ ಕೇಂದ್ರ ಸರ್ಕಾರ 10,000 ಕೋಟಿ ರೂ.ಗಳ ಅನುದಾನವನ್ನು ಮೀಸಲಿಟ್ಟಿದೆ. PMFME ಯೋಜನೆಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು PMFME ಯೋಜನೆ?
ಭಾರತ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ದೇಶದಲ್ಲಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಮೇಲ್ದರ್ಜೆಗೇರಿಸುವಿಕೆಗೆ ಹಣಕಾಸು, ತಾಂತ್ರಿಕ ಮತ್ತು ವ್ಯವಹಾರ ಬೆಂಬಲವನ್ನು ಒದಗಿಸಲು ಕೇಂದ್ರ ಪ್ರಾಯೋಜಿತ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (PMFME) ಯೋಜನೆಯನ್ನು ಜಾರಿಗೆ ತಂದಿದೆ. 10 ಲಕ್ಷ ರೂ. ಗರಿಷ್ಠ ಮಿತಿಯೊಂದಿಗೆ ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ 35% ಸಾಲ ಸಂಬಂಧಿ ಸಬ್ಸಿಡಿ ಮತ್ತು ಹೊಸ ಘಟಕ ಸ್ಥಾಪನೆಗೆ ಗರಿಷ್ಠ ಮಿತಿಯೊಂದಿಗೆ ಸಾಮಾನ್ಯ ಮೂಲಸೌಕರ್ಯವನ್ನು ಒದಗಿಸಲಾಗುತ್ತದೆ. ರೈತ ಉತ್ಪಾದಕ ಸಂಸ್ಥೆಗಳು (FPOಗಳು), ಸ್ವಸಹಾಯ ಗುಂಪುಗಳು (SHGಗಳು) ಮತ್ತು ಉತ್ಪಾದಕರ ಸಹಕಾರ ಸಂಘಗಳಂತಹ ಕೃಷಿ ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ ಗುಂಪುಗಳನ್ನು ಬೆಂಬಲಿಸಲು ಈ ಯೋಜನೆ ವಿಶೇಷ ಒತ್ತು ನೀಡಿದೆ. PMFME ಯೋಜನೆಯನ್ನು ಕಿರು ಉದ್ಯಮಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಮತ್ತು ಈ ಉದ್ಯಮಗಳ ಉನ್ನತೀಕರಣ ಮತ್ತು ನಿಯಮಬದ್ಧಗೊಳಿಸುವಿಕೆಯನ್ನು ಬೆಂಬಲಿಸುವಲ್ಲಿ ಗುಂಪುಗಳು ಮತ್ತು ಸಹಕಾರಿ ಸಂಸ್ಥೆಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.
PMFME ಯೋಜನೆಯ ಗುರಿ ಹಾಗೂ ಉದ್ದೇಶಗಳು
ಆಹಾರ ಸಂಸ್ಕರಣಾ ಕೈಗಾರಿಕೆಯ ಹಾಲಿ ಅಸಂಘಟಿತ ವಲಯದಲ್ಲಿರುವ ಕಿರು ಉದ್ದಿಮೆಗಳ ಸ್ಪರ್ಧಾತ್ಮಕತೆಯನ್ನು ವೃದ್ಧಿಸುವುದು ಹಾಗೂ ವಲಯದ ನಿಯಮಬದ್ಧಗೊಳಿಸುವಿಕೆಯನ್ನು ಪ್ರೋತ್ಸಾಹಿಸುವುದು.
ರೈತ ಉತ್ಪಾದಕರ ಸಂಸ್ಥೆಗಳು (ಎಫ್ಪಿಒಗಳು), ಸ್ವಸಹಾಯ ಗುಂಪುಗಳು (ಎಸ್‌ಹೆಚ್‌ಜಿಗಳು) ಹಾಗೂ ಉತ್ಪಾದಕರ ಸಹಕಾರ ಸಂಘಗಳಿಗೆ ಉತ್ಪನ್ನಗಳ ಮೌಲ್ಯ ವರ್ಧನೆಗೆ ಬೆಂಬಲ ಒದಗಿಸುವುದು.
ಹಾಲಿ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳು, ಎಫ್ ಪಿಒಗಳು, ಸ್ವಸಹಾಯ ಗುಂಪುಗಳು ಹಾಗೂ ಸಹಕಾರಿಗಳ ಸಾಲ ಸೌಲಭ್ಯಗಳನ್ನು ಹೆಚ್ಚಿಸುವುದು;
ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಅನ್ನು ಬಲಪಡಿಸುವ ಮೂಲಕ ಸಂಘಟಿತ ಸರಬರಾಜು ಸರಪಳಿಯೊಂದಿಗೆ ಏಕೀಕರಣಗೊಳಿಸುವುದು
ಈಗಿರುವ 2,00,000 ಉದ್ದಿಮೆಗಳನ್ನು ಔಪಚಾರಿಕ ಚೌಕಟ್ಟಿನೊಳಗೆ ಸೇರಿಸಲು ಬೆಂಬಲ ಒದಗಿಸುವುದು
ಸಾಮಾನ್ಯ ಸಂಸ್ಕರಣಾ ಸೌಲಭ್ಯ, ಪ್ರಯೋಗಾಲಯಗಳು, ದಾಸ್ತಾನು ಶೇಖರಣೆ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಹಾಗೂ ಇನ್‌ಕ್ಯೂಬೇಷನ್ ಸೇವೆಗಳಂತಹ ಸಾಮಾನ್ಯ ಸೇವೆಗಳ ದೊರೆಯುವಿಕೆಯನ್ನು ಹೆಚ್ಚಿಸುವುದು
ಸಂಸ್ಥೆಗಳನ್ನು ಬಲಪಡಿಸುವುದು, ಆಹಾರ ಸಂಸ್ಕರಣಾ ವಲಯದಲ್ಲಿ ಸಂಶೋಧನೆ ಹಾಗೂ ತರಬೇತಿಯನ್ನು ಬಲಪಡಿಸುವುದು
ಉದ್ದಿಮೆಗಳಿಗೆ ವೃತ್ತಿಪರ ಹಾಗೂ ತಾಂತ್ರಿಕ ಬೆಂಬಲ ದೊರೆಯುವಿಕೆಯನ್ನು ಹೆಚ್ಚಿಸುವುದು
PMFMPE ಯೋಜನೆಗೆ ಯಾರೆಲ್ಲಾ ಅರ್ಹರು?
ರೈತ ಉತ್ಪಾದಕ ಸಂಸ್ಥೆ (FPO)
ಸ್ವ-ಸಹಾಯ ಗುಂಪುಗಳು
ಸಹಕಾರಿ ಸಂಘಗಳು
ಅಸ್ತಿತ್ವದಲ್ಲಿರುವ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳು
ವ್ಯಕ್ತಿಗಳು ಅಥವಾ ಗುಂಪುಗಳಿಗೆ ಹೊಸ ಘಟಕಗಳು, ಒಂದು ಜಿಲ್ಲೆ ಒಂದು ಉತ್ಪನ್ನ (ODOP) ಗಾಗಿ ಮಾತ್ರ ಬೆಂಬಲಿತವಾಗಿರುತ್ತದೆ.
ಕನಿಷ್ಠ ವಿದ್ಯಾರ್ಹತೆ ಇಲ್ಲ
ಅರ್ಜಿದಾರರು ಉದ್ಯಮದ ಮಾಲೀಕತ್ವದ ಹಕ್ಕನ್ನು / ಪಾಲುದಾರಿಕೆ ಸಂಸ್ಥೆಯನ್ನು ಹೊಂದಿರಬೇಕು
PMFME ಅರ್ಜಿ ನಮೂನೆ
ನೀವು PMFME ಯೋಜನೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅರ್ಜಿ ಸಲ್ಲಿಸಬಹುದು. ಯೋಜನೆಯ ಪ್ರಯೋಜನಗಳನ್ನು ಆಯ್ಕೆ ಮಾಡಲು ನಾಲ್ಕು ವಿಭಿನ್ನ ರೀತಿಯ ಅರ್ಜಿ ನಮೂನೆಗಳಿವೆ. ಆಫ್‌ಲೈನ್ ಅರ್ಜಿಗಳ ಸಂದರ್ಭದಲ್ಲಿ, FPC, ಸಹಕಾರಿ ಸಂಘಗಳು, ಸಾಮಾನ್ಯ ಮೂಲಸೌಕರ್ಯ ಮತ್ತು SHG ಗಳಿಗೆ ಪ್ರತ್ಯೇಕ ನಮೂನೆಗಳಿವೆ.
ಅಧಿಕೃತ PMFME ವೆಬ್‌ಸೈಟ್







