Home » ರಾಜ್ಯ » Gruha Lakshmi Scheme: ‘ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡಲ್ಲ’

Gruha Lakshmi Scheme: ‘ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡಲ್ಲ’

ರಾಯಚೂರು, ಜೂನ್‌ 27: ರಾಜ್ಯ ಸರ್ಕಾರ ತನಗೆ ತಾನು ಆತ್ಮಾವಲೋಕನ ಮಾಡಬೇಕು. ಗ್ಯಾರಂಟಿಯನ್ನು ಕೊಡ್ತೀನಿ ಅಂತ ಹೇಳಿದ್ರು, ತಿಂಗಳು ತಿಂಗಳು ಹಣ ಜಮೆ ಮಾಡ್ತಿನಿ ಅಂದಿದ್ರು. ಆದರೆ ರಾಜ್ಯದ ಗೌರವಾನ್ವಿತ ಉಪ ಮುಖ್ಯಂತ್ರಿಗಳು ನಾಲ್ಕೈದು ಕಡೆ ಏನ್ ಹೇಳಿದ್ರು. ರೀ ನಾವೇನ್ ತಿಂಗಳು ತಿಂಗಳು ಕೊಡ್ತಿವಿ ಅಂತ ಹೇಳಿದ್ವಾ..? ಯಾವಾಗ್ಲೋ ಬರ್ತದಪ್ಪ..ಕಾಯಬೇಕಪ್ಪ ಅಂತ ಹೇಳಿದ್ದಾರೆ ಎಂದು ಡಿಕೆ ಶಿವಕುಮಾರ್‌ ಅವರ ವಿರುದ್ಧ ಜೆಡಿಎಸ್‌ ಯುವ ಘಟನದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದರು.

ಯಾವುದಾದರೂ ಚುನಾವಣೆ ಬಂದ್ರೆ ಬಾಕಿ ಇರುವ ತಿಂಗಳದ ಗ್ಯಾರಂಟಿಯ ಹಣ ಖಾತೆಗೆ ಆಗ್ತಾರೆ. ಮೂರು ಉಪ ಚುನಾವಣೆ ಬಂದಾಗ ಆ ಮೂರು ಕ್ಷೇತ್ರಗಳಿಗೆ ಮಾತ್ರ ಒಂದೇ ಸಲ ನಾಲ್ಕು ತಿಂಗಳು ದುಡ್ಡು ಹಾಕ್ತಾರೆ. ಈಗ ಮುಂದೆ ತಾ.ಪಂ ಹಾಗೂ ಜಿ.ಪಂ ಚುನಾವಣೆ ಬರೋ ವರೆಗೂ ಜನ ಕಾಯಬೇಕು. ಕಾಂಗ್ರೆಸ್ ಅವರಿಗೆ ನಾಲಿಗೆ ಮೇಲೆ ಬದ್ದರಿಲ್ಲ ಎಂದು ಕಿಡಿಕಾರಿದರು.

ಕನ್ನಡ ನಾಡಿನ ನಿಜವಾದ ಭಗೀರಥ ಮಾಜಿ ಪ್ರಧಾನಿ ದೇವೇಗೌಡರು. ನೀರಾವರಿ ವಿಚಾರಕ್ಕೆ ಸಂಬಂಧಿಸಿದಂತೆ ನಾರಾಯಣಪುರ ಕಾಲವೇ ನಿರ್ಮಾಣ ಮಾಡುವುದಕ್ಕೆ ದೇವೇಗೌಡರು ಮುಖ್ಯಮಂತ್ರಿ ಆದಂತಹ ಸಂದರ್ಭದಲ್ಲಿ ಕೈಗೊಂಡಂತಹ ತೀರ್ಮಾನ. ಈಗಲೂ ಕೂಡ ಶಾಶ್ವತವಾಗಿ ಉಳಿದುಕೊಂಡಿದೆ. ದೇವೇಗೌಡರು 1 ಲಕ್ಷ 14 ಸಾವಿರ ಹೆಕ್ಟರ್ ನೀರಾವರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.1996 – 97 ರಲ್ಲಿ ನೆನೆಗುದಿಗೆ ಬಿದ್ದ ನೀರಾವರಿ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದರು. 19 ಸಾವಿರ ಕೋಟಿ ನೀರಾವರಿಗೆ ಯೋಜನೆಗೆ ಕಾಯಕಲ್ಪ ಕೊಟ್ಟವರು. ಹಾಗಾಗಿ ಜಿಲ್ಲೆಯಲ್ಲಿ ಜೆಡಿಎಸ್ ಭದ್ರವಾಗಿದೆ ಅಂದ್ರೆ ಅದೇ ಕಾರಣ ಎಂದರು.

ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಮಾತನಾಡಿದ ಅವರು, ಸ್ಥಳಿಯ ಚುನಾವಣೆಗಳು ಕಾರ್ಯಕರ್ತರ ಮೇಲೆ ಅವಲಂಬಿತವಾಗಿರುತ್ತದೆ. ವಿಧಾನಸಭಾ ಚುನಾವಣೆಗೆ ಇನ್ನು ಮೂರು ವರ್ಷ ಇದೆ. ಡಿಸೆಂಬರ್ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತೆ. ಜಿ.ಪಂ, ತಾಪಂ ಚುನಾವಣೆ ನಡೆಸಲು ಸರ್ಕಾರ ಮನಸ್ಸು ಮಾಡಿಲ್ಲ. ಇದರ ದೃಷ್ಟಿಯಿಂದ ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದು ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

ರಾಜ್ಯ ಸರ್ಕಾರದಲ್ಲಿ ಹಿರಿಯ ಶಾಸಕರೇ ಅನುದಾನ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಅಭಿವೃದ್ಧಿ ಮಾಡದೆ ಜನರಿಗೆ ನಾವು ಮುಖ ತೋರಿಸಲಾಗುತ್ತಿಲ್ಲ. ಒಂದು ಚರಂಡಿ ನಿರ್ಮಿಸಲಾಗುತ್ತಿಲ್ಲ. ಈ ಸರ್ಕಾರದಲ್ಲಿ ನಮ್ಮ ಶಾಸಕರು ಯಾವುದೇ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ. ಕ್ಷೇತ್ರದ ಜನರಿಗೆ ಕೈಲಾದ ಸೇವೆ ಮಾಡಬೇಕೆಂದು ಶ್ರಮಿಸುತ್ತಿದ್ದಾರೆ. ಯಾವ ಕಾರಣಕ್ಕೂ ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಯಾವುದೇ ಒಂದು ಭಾಗಕ್ಕೆ ಸೀಮಿತವಾದ ಪಕ್ಷವಲ್ಲ ಇದು. ರಾಜ್ಯದ ಏಳೂವರೆ ಕೋಟಿ ಕನ್ನಡಿಗರು ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಪಕ್ಷ ಬಲಿಷ್ಠವಾಗಿದೆ. ಜೆಡಿಎಸ್ ಪಕ್ಷ ಹೋರಾಟದಿಂದ ಬಂದಿದೆ ಅದನ್ನು ನಾನು ಮುಂದುವರಿಸುತ್ತೇನೆ ಎಂದು ಹೇಳಿದರು.

ಕಳೆದ ಒಂದು ವಾರದಿಂದ ಕಾಂಗ್ರೆಸ್ ಹಿರಿಯ ಶಾಸಕರೇ ಅಸಮಾಧಾನ ಹೊರಹಾಕಿದ್ದಾರೆ. ಕ್ಷೇತ್ರದ ಜನಕ್ಕೆ ನಾವು ಹೇಗೆ ಮುಖ ತೋರ್ಸೋದು ರಸ್ತೆ ಅಭಿವೃದ್ಧಿ ಆಗ್ತಿಲ್ಲ. ಆಸ್ಪತ್ರೆಯಲ್ಲಿ ಡಾಕ್ಟರ್ ಗಳಿಗೆ ವೇತನ ನೀಡುವುದಕ್ಕೂ ಸರ್ಕಾರದ ಕಡೆಯಿಂದ ಆಗ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವಿದ್ದೀವಿ ಎಂದು ನಿಖಿಲ್‌ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

Source :  Oneindia

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This