ನವದೆಹಲಿ: ರೆಲ್ವೇ ನೇಮಕಾತಿ ಮಂಡಳಿಗಳು (RRB) ಗ್ರೂಪ್-ಡಿ (ಹಂತ-1) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯ ಮೂಲಕ 22,000ಕ್ಕೂ ಹೆಚ್ಚು ತಾತ್ಕಾಲಿಕ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ 2026 ಜನವರಿ 31ರಿಂದ ಆರಂಭವಾಗಲಿದ್ದು, ಅಭ್ಯರ್ಥಿಗಳು 2026 ಮಾರ್ಚ್ 2ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು:
https://www.rrbapply.gov.in/#/auth/landing
ಪ್ರಮುಖ ದಿನಾಂಕಗಳು
ಅಧಿಸೂಚನೆ ಪ್ರಕಟ ದಿನಾಂಕ: 30 ಜನವರಿ 2026
ಆನ್ಲೈನ್ ಅರ್ಜಿ ಆರಂಭ: 31 ಜನವರಿ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2 ಮಾರ್ಚ್ 2026
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 2 ಮಾರ್ಚ್ 2026
ಪರೀಕ್ಷೆ ದಿನಾಂಕ: ಶೀಘ್ರವೇ ಪ್ರಕಟಿಸಲಾಗುವುದು
ಪ್ರವೇಶ ಪತ್ರ: ಪರೀಕ್ಷೆಗೆ ಮುನ್ನ
ಫಲಿತಾಂಶ: ನಂತರ ಅಪ್ಡೇಟ್ ಮಾಡಲಾಗುವುದು
ಅರ್ಜಿ ಶುಲ್ಕ ವಿವರ
ಜನರಲ್ / ಒಬಿಸಿ / ಇಡಬ್ಲ್ಯುಎಸ್: ₹500 (+18% GST)
ಎಸ್ಸಿ / ಎಸ್ಟಿ / ಪಿಡಬ್ಲ್ಯುಡಿ / ಮಾಜಿ ಸೈನಿಕರು: ₹250 (+18% GST)
ಶುಲ್ಕ ಪಾವತಿ ವಿಧಾನ:
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಮೊಬೈಲ್ ವಾಲೆಟ್ ಮೂಲಕ ಪಾವತಿ ಮಾಡಬಹುದು.
ಒಟ್ಟು ಹುದ್ದೆಗಳ ವಿವರ
ಒಟ್ಟು ಹುದ್ದೆಗಳು: 22,000ಕ್ಕೂ ಅಧಿಕ
ಜನರಲ್: 9235
ಇಡಬ್ಲ್ಯುಎಸ್: 2237
ಒಬಿಸಿ: 5217
ಎಸ್ಸಿ: 3231
ಎಸ್ಟಿ: 1726
ಹುದ್ದೆಗಳ ಹೆಸರುಗಳು
ಪಾಯಿಂಟ್ಸ್ಮ್ಯಾನ್-ಬಿ, ಸಹಾಯಕ (ಟ್ರ್ಯಾಕ್ ಮಿಷಿನ್), ಸಹಾಯಕ (ಬ್ರಿಡ್ಜ್), ಟ್ರ್ಯಾಕ್ ಮೈಂಟೇನೆನ್ಸ್ ಜ್ಯೂನಿಯರ್, ಸಹಾಯಕ ಪಿ-ವೇ, ಸಹಾಯಕ (ಸಿ&ಡಬ್ಲ್ಯು), ಸಹಾಯಕ ಟಿಆರ್ಡಿ, ಸಹಾಯಕ (ಎಸ್ &ಟಿ), ಸಹಾಯಕ ಲೋಕೋ ಶೆಡ್ (ಡೀಸೆಲ್/ಎಲೆಕ್ಟ್ರಿಕಲ್), ಸಹಾಯಕ ಆಪರೇಶನ್ಸ್ (ಎಲೆಕ್ಟ್ರಿಕಲ್), ಸಹಾಯಕ ಟಿಎಲ್ & ಎಸಿ, ಸಹಾಯಕ ವರ್ಕ್ಶಾಪ್ ಮೆಕಾನಿಕಲ್ ಸೇರಿದಂತೆ ಹಲವು ಹುದ್ದೆಗಳು ಸೇರಿವೆ.
ವಯೋಮಿತಿ
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 36 ವರ್ಷ
ವಿದ್ಯಾರ್ಹತೆ
NCVT/SCVT ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ತರಗತಿ ಪೂರ್ಣಗೊಳಿಸಿರುವವರು ಅಥವಾ
NCVT ನೀಡುವ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (NAC) ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ
RRB ಗ್ರೂಪ್-ಡಿ ನೇಮಕಾತಿಗೆ ಆಯ್ಕೆ ಹಂತಗಳು:
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1)
ದೈಹಿಕ ಸಾಮರ್ಥ್ಯ ಪರೀಕ್ಷೆ (PET)
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಹೆಚ್ಚಿನ ಮಾಹಿತಿ
ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್ ಪರಿಶೀಲಿಸಬೇಕು.
ಮಾಹಿತಿ ಲಿಂಕ್: https://sarkariresult.com.cm/railway-rrb-group-d-level-1-recruitment-2026-online/







