Home » ಬೀದರ ಜಿಲ್ಲೆ » ಆಸ್ಪತ್ರೆಗೆ ಭೇಟಿ ನಿಡಿ ಭೀಮಣ್ಣಾ ಖಂಡ್ರೆ ಅವರ ಆರೋಗ್ಯ ವಿಚಾರಿಸಿದ ಮೋಜಾಬಾಯಿ ಕಲ್ವಾಡಿಕರ್

ಆಸ್ಪತ್ರೆಗೆ ಭೇಟಿ ನಿಡಿ ಭೀಮಣ್ಣಾ ಖಂಡ್ರೆ ಅವರ ಆರೋಗ್ಯ ವಿಚಾರಿಸಿದ ಮೋಜಾಬಾಯಿ ಕಲ್ವಾಡಿಕರ್

ಬೀದರ : ಕರ್ನಾಟಕ ಸರ್ಕಾರದ ಅರಣ್ಯ ಹಾಗೂ ಪರಿಸರ ಸಚಿವರಾದ ಶ್ರೀ ಈಶ್ವರ ಖಂಡ್ರೆ ಸರ್ ಅವರ ತಂದೆಯಾದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಾಜಿ ಸಚಿವರಾದ ಶ್ರೀ ಭೀಮಣ್ಣಾ ಖಂಡ್ರೆ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರಸ್ತುತ ಬೀದರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವಿಷಯ ತಿಳಿದು ಕನಾ೯ಟಕ ಲೇಬರ್ ಸೊಸೈಟಿಯ ಅಧ್ಯಕ್ಷರಾದ ಶ್ರೀಮತಿ ಮೌಜಾಬಾಯಿ ಕಲವಾಡಿಕರ್ ಹಾಗೂ ಇದೇ ಸಂಸ್ಥೆಯ ಸಕ್ರಿಯ ಸದಸ್ಯರಾದ ಶ್ರೀಮತಿ ಜ್ಯೋತಿ ಆನಂದ ಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಶ್ರೀ ಭೀಮಣ್ಣಾ ಖಂಡ್ರೆ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದರು. ವೈದ್ಯರಿಂದ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದು, ಅವರು ಶೀಘ್ರವಾಗಿ ಸಂಪೂರ್ಣ ಗುಣಮುಖರಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಮೌಜಾಬಾಯಿ ಕಲವಾಡಿಕರ್ ಅವರು, “ಶ್ರೀ ಭೀಮಣ್ಣಾ ಖಂಡ್ರೆ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿಯೂ, ಸಾರ್ವಜನಿಕ ಜೀವನದಲ್ಲಿ ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾದ ಹಿರಿಯ ನಾಯಕರಾಗಿದ್ದಾರೆ. ಅವರ ಸೇವೆ ಸಮಾಜಕ್ಕೆ ಅಪಾರವಾದದ್ದು. ಅವರು ಶೀಘ್ರವೇ ಆರೋಗ್ಯವಂತರಾಗಿ ಪುನಃ ಕುಟುಂಬ ಹಾಗೂ ಸಮಾಜದ ಮಧ್ಯೆ ಸಕ್ರಿಯರಾಗಲಿ” ಎಂದು ಹೇಳಿದರು.
ಶ್ರೀಮತಿ ಜ್ಯೋತಿ ಆನಂದ ಸ್ವಾಮಿ ಅವರು ಕೂಡ, ಹಿರಿಯ ನಾಯಕನ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಪ್ರಾರ್ಥನೆ ಸಲ್ಲಿಸಿ, ಖಂಡ್ರೆ ಕುಟುಂಬಕ್ಕೆ ಧೈರ್ಯ ತುಂಬಿದರು.
ಆಸ್ಪತ್ರೆ ಭೇಟಿಯ ವೇಳೆ ಖಂಡ್ರೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಭೇಟಿ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲೆಯ ಹಲವಾರು ಗಣ್ಯರು, ರಾಜಕೀಯ ಮತ್ತು ಸಾಮಾಜಿಕ ಮುಖಂಡರು ಶ್ರೀ ಭೀಮಣ್ಣಾ ಖಂಡ್ರೆ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿರುವುದು ಗಮನಾರ್ಹವಾಗಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This