ಬೆಂಗಳೂರು: ಸಾರಿಗೆ (RTO) ಇಲಾಖೆಯಲ್ಲಿ ವಾಹನಗಳ Data Anomalies / Duplicate Data ಸಮಸ್ಯೆಗಳನ್ನು ಸರಿಪಡಿಸುವ ಸಂಬಂಧ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅಧಿಕಾರ ವಿಕೇಂದ್ರೀಕರಣ ಮಾಡಿ ಆದೇಶ ಹೊರಡಿಸಿದೆ. ಇದರಿಂದ ವಾಹನ ಮಾಲೀಕರಿಗೆ ಬಹುದಿನಗಳಿಂದ ಇದ್ದ ದೊಡ್ಡ ಸಮಸ್ಯೆಗೆ ಪರಿಹಾರ ದೊರಕಿದೆ.
ಇದುವರೆಗೆ ರಾಜ್ಯದ ಯಾವುದೇ ಭಾಗದಲ್ಲಿ ವಾಹನಗಳ ಡೇಟಾ ದೋಷಗಳು ಅಥವಾ ಡುಪ್ಲಿಕೇಟ್ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ವಾಹನ ಮಾಲೀಕರು ಬೆಂಗಳೂರು ಕೇಂದ್ರ ಕಚೇರಿಗೆ ಬರುವ ಅನಿವಾರ್ಯತೆ ಇತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆ, ಸಮಯ ನಷ್ಟ ಹಾಗೂ ಅನಗತ್ಯ ವಿಳಂಬ ಉಂಟಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಸರ್ಕಾರಕ್ಕೆ ಲಭಿಸಿದ್ದವು.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ತುರ್ತು ಕ್ರಮಕ್ಕೆ ಸೂಚನೆ ನೀಡಿದರು. ಸಚಿವರ ಸೂಚನೆಯಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಪಡೆದು, ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸುವ ಉದ್ದೇಶದಿಂದ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ.
6 ವಿಭಾಗೀಯ ಕಚೇರಿಗಳಿಗೆ ಅಧಿಕಾರ
RTO ಸೇವೆಗಳನ್ನು ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ, ರಾಜ್ಯಾದ್ಯಂತ ಇರುವ 6 ವಿಭಾಗೀಯ ಜಂಟಿ ಸಾರಿಗೆ ಆಯುಕ್ತರ (Joint Commissioners of Transport) ಕಚೇರಿಗಳಿಗೆ ದಾಖಲೆಗಳನ್ನು ಪರಿಶೀಲಿಸಿ ಇತ್ಯರ್ಥಗೊಳಿಸುವ ಅಧಿಕಾರ ನೀಡಲಾಗಿದೆ.
ರಾಜ್ಯದ ಅಧೀನದಲ್ಲಿರುವ 67 ಉಪಸಾರಿಗೆ ಆಯುಕ್ತರು, ಹಿರಿಯ/ಪ್ರಾದೇಶಿಕ/ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ದಿನಂಪ್ರತಿ ವಾಹನಗಳ Data Anomalies ಸರಿಪಡಿಸುವ ಸಂಬಂಧ VAHAN-4 ತಂತ್ರಾಂಶದ ಮೂಲಕ State Admin Application for Approval/Ticket ಗಳು ಸಲ್ಲಿಕೆಯಾಗುತ್ತಿವೆ.
Duplicate Data ಸಮಸ್ಯೆ ಏಕೆ ಉಂಟಾಗುತ್ತದೆ?
VAHAN-1 ತಂತ್ರಾಂಶದಲ್ಲಿ ನೋಂದಣಿಯಾದ ವಾಹನವನ್ನು ಮತ್ತೊಬ್ಬರು ಖರೀದಿಸಿದಾಗ, ಮೂಲ RTO ಕಚೇರಿಯಿಂದ ಇತರೆ RTO ಕಚೇರಿಗಳಿಗೆ ತೀರುವಳಿ (Transfer) ಮೂಲಕ ಹೋದ ಸಂದರ್ಭಗಳಲ್ಲಿ,
ಒಂದು ಕಚೇರಿಯಲ್ಲಿ ವಾಹನ ತೀರುವಳಿ ನೀಡಲಾಗಿದೆ ಎಂದು
ಮತ್ತೊಂದು ಕಚೇರಿಯಲ್ಲಿ ವಾಹನ ಸಕ್ರಿಯವಾಗಿದೆ ಎಂದು
ವಾಹನ್ ತಂತ್ರಾಂಶದಲ್ಲಿ ಡುಪ್ಲಿಕೇಟ್ ಡೇಟಾ ತೋರಿಸುತ್ತಿತ್ತು.
ಈ ಕಾರಣದಿಂದಾಗಿ ವಾಹನ ಮಾಲೀಕರು VAHAN-4 ತಂತ್ರಾಂಶದಲ್ಲಿ ಯಾವುದೇ ಮುಂದಿನ ವ್ಯವಹಾರಗಳನ್ನು (ಮಾಲೀಕತ್ವ ಬದಲಾವಣೆ, ವಿಳಾಸ ತಿದ್ದುಪಡಿ, ಹೈಪೋಥೆಕೆಶನ್, ಇತ್ಯಾದಿ) ನಡೆಸಲು ಸಾಧ್ಯವಾಗುತ್ತಿರಲಿಲ್ಲ.
ಸ್ಥಳೀಯ ಮಟ್ಟದಲ್ಲೇ ಇತ್ಯರ್ಥ
ಈಗ ರಾಜ್ಯದೊಳಗಿನ (Within State) Duplicate Vehicle Records ಗಳನ್ನು ಸಂಬಂಧಪಟ್ಟ ವಿಭಾಗದ ಜಂಟಿ ಸಾರಿಗೆ ಆಯುಕ್ತರ ಕಚೇರಿಗಳಲ್ಲಿಯೇ ಪರಿಶೀಲಿಸಿ, ಅಗತ್ಯ ದಾಖಲೆಗಳ ಆಧಾರದಲ್ಲಿ ಇತ್ಯರ್ಥಗೊಳಿಸಲು ಅಧಿಕಾರ ನೀಡಲಾಗಿದೆ.
ಸಾರ್ವಜನಿಕರಿಗೆ ಲಾಭ
ಬೆಂಗಳೂರು ಕೇಂದ್ರ ಕಚೇರಿಗೆ ಓಡಾಡುವ ಅಗತ್ಯ ಇಲ್ಲ
ಕಡಿಮೆ ಸಮಯದಲ್ಲಿ ಸಮಸ್ಯೆ ಪರಿಹಾರ
ವಿಳಂಬ ಹಾಗೂ ಅನಗತ್ಯ ವೆಚ್ಚ ತಪ್ಪು
RTO ಸೇವೆಗಳು ಜನರಿಗೆ ಇನ್ನಷ್ಟು ಸುಲಭ
ಈ ಕ್ರಮದಿಂದ ರಾಜ್ಯದ ಸಾವಿರಾರು ವಾಹನ ಮಾಲೀಕರಿಗೆ ದೊಡ್ಡ ಮಟ್ಟದ ನೆಮ್ಮದಿ ದೊರೆಯಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.







