Home » ಬೀದರ ಜಿಲ್ಲೆ » ಔರಾದ ತಾಲೂಕಿನಲ್ಲಿ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ಘಟಕ ರಚನೆ
ಪ್ರವೀಣ ಕಾರಂಜೆ ಅಧ್ಯಕ್ಷರಾಗಿ ನೇಮಕ

ಔರಾದ ತಾಲೂಕಿನಲ್ಲಿ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ಘಟಕ ರಚನೆ
ಪ್ರವೀಣ ಕಾರಂಜೆ ಅಧ್ಯಕ್ಷರಾಗಿ ನೇಮಕ

ಬೀದರ್‌ ಜಿಲ್ಲೆಯ ಔರಾದ ತಾಲೂಕಿನಲ್ಲಿ 18 ಡಿಸೆಂಬರ್ 2025  ರಂದು ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ತಾಲೂಕು ಘಟಕವನ್ನು ಅಧಿಕೃತವಾಗಿ ರಚಿಸಲಾಗಿದ್ದು, ಪ್ರವೀಣ ಕಾರಂಜೆ ಅವರನ್ನು ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಔರಾದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ರಾಜ್ಯಾಧ್ಯಕ್ಷ ದಿಲೀಪಕುಮಾರ ವರ್ಮಾ ಅವರ ನೇತೃತ್ವದಲ್ಲಿ ನೂತನ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಔರಾದ ತಾಲೂಕು ಘಟಕದ ನೂತನ ಪದಾಧಿಕಾರಿಗಳು
ಗೌರವಾಧ್ಯಕ್ಷ: ಸಂಪತಕುಮಾರ ಸಕ್ಪಾಲ್,ತಾಲೂಕು ಅಧ್ಯಕ್ಷ: ಪ್ರವೀಣ ಕಾರಂಜೆ,ಉಪಾಧ್ಯಕ್ಷ: ಸಂತೋಷ ಸೂರ್ಯವಂಶಿ
ಪ್ರಧಾನ ಕಾರ್ಯದರ್ಶಿ: ದಿನೇಶ ಶಿಂಧೆ,ಖಜಾಂಚಿ: ಸುಂದರ ಮೇತ್ರೆ
ಕಾರ್ಯದರ್ಶಿ: ಸಿದ್ಧಾರ್ಥ ಭೋಸ್ಲೆ,ಸಹ ಕಾರ್ಯದರ್ಶಿ: ಗಂಗಾರಾಮ,ಜಂಟಿ ಕಾರ್ಯದರ್ಶಿ: ಪ್ರೇಮ ಘೋಡಬೋಲೆ
ಸಂಘಟನಾ ಕಾರ್ಯದರ್ಶಿಗಳು: ಅಮೀತ ಶಿಂಧೆ, ಸತ್ಯಪಾಲ ವಾಘಮಾರೆ, ಗಂಗಾಧರ ಸೂರ್ಯವಂಶಿ, ಸತೀಶ ಸೂರ್ಯವಂಶಿ, ರಾಹುಲ್ ಸೋನಕಾಂಬಳೆ, ಕಾಂತೇಶ ಭಾಲ್ಕೆ, ರಾಹುಲ್ ಭೋರೆ, ಸುಮೀತ್ ಶಿಂಧೆ ಹಾಗೂ ಉತ್ತಮ ಗಾಯಕವಾಡ.
ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ದಿಲೀಪಕುಮಾರ ವರ್ಮಾ, “ಸಂಘಟನೆಯ ತತ್ವ–ಸಿದ್ಧಾಂತಗಳಿಗೆ ಅನುಗುಣವಾಗಿ ಘಟಕವನ್ನು ಬಲಪಡಿಸಿ, ಜನಪರ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಬೇಕು. ದಲಿತರು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ರಾಹುಲ್ ಖಂದಾರೆ, ಸುಭಾಷ ಲಾಧಾ, ಸುನೀಲ ಮಿತ್ರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This