Home » ರಾಜ್ಯ » ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2025-26 ಸಾಲಿನ ಸಾಲ-ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2025-26 ಸಾಲಿನ ಸಾಲ-ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನ ವಿವಿಧ ಯೋಜನೆಗಳಡಿ ಮಹಿಳೆಯರಿಗೆ ಸಾಲ–ಸೌಲಭ್ಯ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಡಿ.15 ಕೊನೆಯ ದಿನವಾಗಿದೆ.
ಯೋಜನೆಗಳು:
ಉದ್ಯೋಗಿನಿ ಯೋಜನೆ:

ವಯೋಮಿತಿ 18 ರಿಂದ 55 ವರ್ಷಗಳೊಳಗಿರುವ ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕ್ ಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ 2025-26ನೇ ಸಾಲಿನ ವಿವಿಧ ಕಲ್ಯಾಣ ಹಾಗೂ ಸ್ವಯಂ ಉದ್ಯೋಗ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದೆ.
ಸಾಲ–ಸೌಲಭ್ಯ (ಸಹಾಯಧನ)
ಪರಿಶಿಷ್ಟ ಜಾತಿ/ಪಂಗಡ (SC/ST):
ಆದಾಯ ಮಿತಿ: ₹2 ಲಕ್ಷ
ಘಟಕ ವೆಚ್ಚ: ₹1 ಲಕ್ಷ – ₹3 ಲಕ್ಷ
ಸಹಾಯಧನ: 50%

ಸಾಮಾನ್ಯ ವರ್ಗ:
ಆದಾಯ ಮಿತಿ: ₹1.50 ಲಕ್ಷ
ಘಟಕ ವೆಚ್ಚ: ಗರಿಷ್ಠ ₹3 ಲಕ್ಷ
ಸಹಾಯಧನ: 30%

ವಿಶೇಷ ಯೋಜನೆಗಳು

1. ಚೇತನ ಯೋಜನೆ
ದಮನಿತ ಮಹಿಳೆಯರಿಗೆ
ಆದಾಯೋತ್ಪಾದಕ ಚಟುವಟಿಕೆಗಳಿಗೆ ₹30,000 ಪ್ರೋತ್ಸಾಹಧನ
ವಯೋಮಿತಿ: 18 ವರ್ಷ ಮೇಲ್ಪಟ್ಟು

2. ಧನಶ್ರೀ ಯೋಜನೆ
HIV ಸೋಂಕಿತ ಮಹಿಳೆಯರಿಗೆ
ಸ್ವಯಂ ಉದ್ಯೋಗಕ್ಕೆ ₹30,000 ಪ್ರೋತ್ಸಾಹಧನ
ವಯೋಮಿತಿ: 18 – 60 ವರ್ಷ

3. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ
ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗಳಿಗೆ
ಆದಾಯೋತ್ಪಾದಕ ಚಟುವಟಿಕೆಗಳಿಗೆ ₹30,000 ಪ್ರೋತ್ಸಾಹಧನ

4. ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ

1993–94 ಹಾಗೂ 2007–08ರ ಸಮೀಕ್ಷೆಯಲ್ಲಿ ಗುರುತಿಸಿರುವ ಫಲಾನುಭವಿಗಳಿಗೆ
ಆದಾಯೋತ್ಪಾದಕ ಚಟುವಟಿಕೆಗಳಿಗೆ ₹30,000 ಪ್ರೋತ್ಸಾಹಧನ
ಅರ್ಜಿ ಪ್ರಕ್ರಿಯೆ – ಮುಖ್ಯ ಸೂಚನೆಗಳು
ಎಲ್ಲ ಅರ್ಜಿದಾರರು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಕೊಂಡಿರಬೇಕು.

ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಯೋಜನೆಗಳಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಆಫ್‌ಲೈನ್ ಅರ್ಜಿಗಳನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಅಥವಾ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕರ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು.

ಉದ್ಯೋಗಿನಿ ಯೋಜನೆ ಸೇವಾಸಿಂಧು ಪೋರ್ಟಲ್‌ನಲ್ಲಿ ಲಭ್ಯ.

ಸರ್ಕಾರದ ವಿವೇಚನಾ ಕೋಟಾ ಅಥವಾ ನಿಗಮದ ವಿವೇಚನಾ ಕೋಟಾ ಅಡಿ ಸೌಲಭ್ಯ ಬಯಸುವವರು:
ಸಚಿವರು / ಶಾಸಕರು / ನಿಗಮದ ಅಧ್ಯಕ್ಷರ ಶಿಫಾರಸು ಪತ್ರ ಪಡೆಯಬೇಕು ನಂತರ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು.ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಸಹ ಅರ್ಜಿ ಸಲ್ಲಿಸಬಹುದು.
ಹಿಂದಿನ ವರ್ಷಗಳಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವವರಿಗೆ ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಸಂಪರ್ಕಿಸಲು
ನಗರದ ಎಸ್.ಪಿ ವೃತ್ತದ ಬಳಿಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿ
ಮತ್ತು
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕರ ಕಚೇರಿ

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This