ಔರಾದ 18 ಆಗಸ್ಟ್ 2025: ಔರಾದ(ಬಿ) ಪಟ್ಟಣದ ಹೊರವಲಯದಲ್ಲಿರುವ ಕ್ರೀಡಾಂಗಣಕ್ಕೆ ವಿಶ್ವರತ್ನ ಸಂವಿಧಾನ ಶಿಲ್ಲಿ ಡಾ| ಬಿ.ಆರ್.ಅಂಬೇಡ್ಕರ ರವರ ಹೆಸರು ನಾಮಕರಣ ಮಾಡಬೇಕೆಂದು ಔರಾದ ತಾಲುಕಿನ ವಿಚಾರವಂತರು, ಪ್ರಗತಿಪರಚಿಂತಕರು ಹಾಗೂ ಸಮಸ್ತ ಡಾ| ಬಾಬಾ ಸಾಹೇಬ್ ಅಂಬೇಡ್ಕರ ರವರ ಅನುಯಾಯಿಗಳು ಕೂಡಿ ತಿರ್ಮಾನ ತೆಗೆದುಕೊಂಡು ತಮ್ಮ ಅವಗಾಹನಕ್ಕೆ ತರುತ್ತಿದೆವೆ. ತಹಸೀಲ್ದಾರರಿಗೆ ನಮ್ಮ ಮನವಿಯನ್ನು ಸ್ವೀಕರಿಸಿ ಸಂವಿಧಾನದ ಪಿತಾಮಹಾ ಬಿ.ಆರ್.ಅಂಬೇಡ್ಕರ ರವರ ಹೆಸರು ಕ್ರಿಡಾಂಗಣಕ್ಕೆ ನಾಮಕರಣ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಔರಾದ ತಾಲೂಕ ವತಿಯಿಂದ ಸಂಘದ ಶ್ರೀ ಪ್ರಕಾಶ ಭಂಗಾರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ದಿನೇಶ ಕೆ ಶಿಂದೆ. ತಾಲೂಕಾ ಸಂಚಾಲಕ
ಔರಾದ(ಬಿ) ತಾಲೂಕಾ ಸಂಘಟನಾ ಸಂಚಾಲಕರು.
ಶ್ರೀ ಪ್ರವೀಣ ಕಾರಂಜೆ, ಶ್ರೀ ಸುಂದರ ಮೇತ್ರ,ಶ್ರೀ ಕಾಂತೇಶ ಭಾಲ್ಕೆ.
ಶ್ರೀ ರವಿ ಎಸ್.ಯರನಳ್ಳಿ, ಶ್ರೀ ರಾಹುಲ ಬೋರೆ,ಶ್ರೀ ಅಮಿತ ಶಿಂದೆ ಮನವಿಯನ್ನು ನೀಡಿದರು









