ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನಡೆಸಲು ರಾಜ್ಯ ಸರಕಾರವು ಸಚಿವರನ್ನು ನೇಮಿಸಿದೆ.
ತುಮಕೂರು – ಡಾ| ಜಿ. ಪರಮೇಶ್ವರ್, ಗದಗ – ಎಚ್. ಕೆ., ಪಾಟೀಲ್, ಬೆಂಗಳೂರು ಗ್ರಾಮಾಂತರ – ಕೆ.
ಎಚ್. ಮುನಿಯಪ್ಪ, ಬೆಂಗಳೂರು ದಕ್ಷಿಣ (ರಾ ಮನಗರ)- ರಾಮಲಿಂಗಾರೆಡ್ಡಿ, ವಿಜಯಪುರ- ಎಂ. ಬಿ. ಪಾಟೀಲ್, ಚಿಕ್ಕಮಗಳೂರು – ಕೆ. ಜೆ. ಜಾರ್ಜ್, ದಕ್ಷಿಣ ಕನ್ನಡ – ದಿನೇಶ್ ಗುಂಡೂರಾವ್, ಮೈಸೂರು – ಡಾ| ಎಚ್. ಸಿ. ಮಹಾದೇವಪ್ಪ, ಬೆಳಗಾವಿ- ಸತೀಶ್ ಜಾರಕಿಹೊಳಿ, ಬಳ್ಳಾರಿ – ಕೃಷ್ಣ ಭೈರೇಗೌಡ, ಕಲಬುರಗಿ – ಪ್ರಿಯಾಂಕ್ ಖರ್ಗೆ, ಹಾವೇರಿ – ಶಿವಾನಂದ ಪಾಟೀಲ್, ವಿಜಯನಗರ – ಜಮೀರ್ ಅಹ್ಮದ್ ಖಾನ್, ಯಾದಗಿರಿ – ಶರಣಬಸಪ್ಪ ದರ್ಶನಾಪುರ, ಬೀದರ್ – ಈಶ್ವರ ಖಂಡ್ರೆ, ಮಂಡ್ಯ – ಎನ್. ಚಲುವರಾಯಸ್ವಾಮಿ, ದಾವಣಗೆರೆ – ಎಸ್. ಎಸ್. ಮಲ್ಲಿಕಾರ್ಜುನ್, ಧಾರವಾಡ – ಸಂತೋಷ್ ಲಾಡ್, ರಾಯಚೂರು – ಡಾ| ಶರಣ ಪ್ರಕಾಶ್ ಪಾಟೀಲ್, ಬಾಗಲಕೋಟೆ – ಆರ್. ಬಿ. ತಿಮ್ಮಾಪುರ, ಚಾಮರಾಜನಗರ – ಕೆ. ವೆಂಕಟೇಶ್, ಕೊಪ್ಪಳ- ಶಿವರಾಜ ತಂಗಡಗಿ, ಚಿತ್ರದುರ್ಗ – ಡಿ. ಸುಧಾಕರ್, ಉಡುಪಿ – ಲಕ್ಷ್ಮೀ ಹೆಬ್ಬಾಳ್ಕರ್, ಹಾಸನ – ಕೆ. ಎನ್. ರಾಜಣ್ಣ, ಕೋಲಾರ – ಬೈರತಿ ಸುರೇಶ್, ಉತ್ತರ ಕನ್ನಡ – ಮಂಕಾಳ ವೈದ್ಯ, ಶಿವಮೊಗ್ಗ – ಮಧು ಬಂಗಾರಪ್ಪ. ಚಿಕ್ಕಬಳ್ಳಾಪುರ – ಡಾ| ಎಂ. ಸಿ. ಸುಧಾಕರ್, ಕೊಡಗು – ಎನ್. ಎಸ್. ಭೋಸರಾಜು ಧ್ವಜಾರೋಹಣ ನಡೆಸಲಿದ್ದಾರೆ.
ಅನಾರೋಗ್ಯ ಮತ್ತಿತರ ಕಾರಣಗಳಿಂದ ಧ್ವಜಾರೋಹಣಕ್ಕೆ ನಿಯೋಜಿಸಿರುವ ಸಚಿವರು ಕಾರ್ಯಕ್ರಮಕ್ಕೆ ಗೈರಾದರೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸುವಂತೆ ಸೂಚಿಸಲಾಗಿದೆ.







