ಔರಾದ(ಬಿ) ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಶಿಂಧೆ ಸುಧೀರ್ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆದ ಡಿ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 225ನೇ ರ್ಯಾಂಕ್ ಪಡೆದಿದ್ದು ಪ್ರಾಂಶುಪಾಲರು ಡಾ. ಸಂಜುಕುಮಾರ್ ಡಿ ಅವರು ಅಭಿನಂದನೆ ವ್ಯಕ್ತಪಡಿಸಿದರು.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದು 40ಕ್ಕು ಅಧಿಕ ವಿದ್ಯಾರ್ಥಿಗಳು MNC ಗಳಲ್ಲಿ ಕೆಲಸ ಪಡಿದಿದ್ದಾರೆ. ಡಿ ಸಿಇಟಿ ಯಲ್ಲಿ ಸಾಧನೆಗೈದಿದ್ದಾರೆ ಇದು ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗಿ ಹೊರಹೊಮ್ಮಲಿದೆ ಎಂದು ಮೆಕ್ಯಾನಿಕಲ್ ವಿಭಾಗಾಧಿಕಾರಿ ಶ್ರೀ ವಿಜಯಶೆಟ್ಟಿ ಅವರು ಸಂಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಸ್ತುತ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಆಲ್ಟರ್ನೇಟ್ ಎನರ್ಜಿ ಎಂಜಿನಿಯರಿಂಗ್, ಆಟೋಮೇಶನ್ ಮತ್ತು ರೊಬೊಟಿಕ್ಸ್ ಎಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟೀಸ್ (ಕನ್ನಡ) ವಿಭಾಗ ಲಭ್ಯವಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂಸ್ಥೆಯ ಸದುಪಯೋಗ ಪಡೆದು ಕಾಲೇಜಿನಲ್ಲಿ ದಾಖಲಾತಿ ಪಡೆಯಬೇಕು ಎಂದು ವಿಭಾಗಾಧಿಕಾರಿಗಳಾದ ಶ್ರೀ ಕಾಳೆ ಹಣಮಂತ ಅವರು ನುಡಿದರು.
ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಾಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷವಾಗಿದ್ದು, MNC ಗಳಲ್ಲಿ ವಿದ್ಯಾರ್ಥಿಗಳು ಕೆಲಸ ಪಡೆಯುತ್ತಿರುವುದಲ್ಲಿ ಸಂಸ್ಥೆಯ ಅತಿಥಿ ಉಪನ್ಯಾಸಕರ ಪಾತ್ರ ಮಹತ್ವದಾಗಿದೆ. ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉದ್ಯಾಗ ಮತ್ತು ಉನ್ನತ ತಾಂತ್ರಿಕ ಶಿಕ್ಷಣದ ಪೂರಕ ವಾತಾವರಣ ಕಲ್ಪಿಸಲಾಗಿದ್ದು ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಈಗಾಗಲೇ ಅಡ್ಮಿಷನ್ ಪ್ರಕ್ರಿಯೆ ಪ್ರಾರಂಭವಾಗಿದ್ದು ಕೆಲವೇ ಸೀಟುಗಳು ಖಾಲಿ ಇದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕಾಗಿದೆ ಪ್ರಾಂಶುಪಾಲರಾದ ಡಾ|| ಸಂಜೀವಕುಮಾರ.ಡಿ ಅವರು ತಿಳಿಸಿರುತ್ತಾರೆ.







