Home » ಉದ್ಯೋಗ » ಅತಿಥಿ ಶಿಕ್ಷಕರ ವಿವಿಧ ಹುದ್ದೆಗಳಿಗೆ ಜೂ.24 ರಂದು ವಾಕ್ ಇನ್ ಇಂಟರ್‌ವ್ಯೂ

ಅತಿಥಿ ಶಿಕ್ಷಕರ ವಿವಿಧ ಹುದ್ದೆಗಳಿಗೆ ಜೂ.24 ರಂದು ವಾಕ್ ಇನ್ ಇಂಟರ್‌ವ್ಯೂ

ಬಳ್ಳಾರಿ: ತಾಲ್ಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ವಿವಿಧ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಜೂ.24 ರಂದು ಬೆಳಿಗ್ಗೆ 9 ಗಂಟೆಗೆ ಇದೇ ಶಾಲೆಯಲ್ಲಿ ವಾಕ್ ಇನ್ ಇಂಟರ್ ವ್ಯೂ ಏರ್ಪಡಿಸಲಾಗಿದೆ.

ಅರ್ಹ ಅನುಭವವುಳ್ಳ 21 ರಿಂದ 60 ವರ್ಷ ವಯೋಮಿತಿಯೊಳಗಿನ ನವೋದಯ, ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಉಪನ್ಯಾಸ ಮಾಡಿದ ಅನುಭವವುಳ್ಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಜೀವಶಾಸ್ಚ್ರ ಶಿಕ್ಷಕ- 1, ಇಂಗ್ಲೀಷ್ ಶಿಕ್ಷಕ- 1, ದೈಹಿಕ ಶಿಕ್ಷಕ(ಮಹಿಳೆ)-2 ಮತ್ತು ವಸತಿ ನಿಲಯಪಾಲಕ-1.

ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ಶೈಕ್ಷಣಿಕ ದಾಖಲೆಗಳೊಂದಿಗೆ ನಿಗಧಿಪಡಿಸಿದ ದಿನದಂದು ಸಂದರ್ಶನಕ್ಕೆ ಹಾಜರಾಗಬಹುದು. ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ ಎಂದು ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This