Home » ಉದ್ಯೋಗ » ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶೀಘ್ರ 16,500 ಶಿಕ್ಷಕರ ನೇಮಕ : ಸಚಿವ ಮಧು ಬಂಗಾರಪ್ಪ

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶೀಘ್ರ 16,500 ಶಿಕ್ಷಕರ ನೇಮಕ : ಸಚಿವ ಮಧು ಬಂಗಾರಪ್ಪ

ಬೆಂಗಳೂರು : ಉದ್ಯೋಗಾಕಾಂಕ್ಷೆಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾದ ನಂತರ 16, 500 ಶಿಕ್ಷಕರ ನೇಮಕ ಮಾಡುತ್ತೇವೆ. ಆದರ್ಶ ಶಾಲೆಗಳಲ್ಲಿ ಈ ವರ್ಷದಿಂದಲೇ ಪಿಯುಸಿ ಕಾಲೇಜು ಆರಂಭಿಸಲು ಅನುಮತಿ ನೀಡಲಾಗಿದೆ.

ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಈ ವರ್ಷವೇ ಕೆಲವು ಬದಲಾವಣೆ ಮಾಡುತ್ತೇವೆ. ಒಂದೂವರೆ ಎರಡು ತಿಂಗಳಲ್ಲಿ ಎಲ್ಲ ಗೊತ್ತಾಗಲಿದೆ. ಸರಕಾರಿ ಶಾಲೆಯಲ್ಲೇ 25 ಸಾವಿರ ಮಕ್ಕಳಿಗೆ ಸಿಇಟಿ ಮತ್ತು ನೀಟ್ ತರಬೇತಿ ಕೊಡುತ್ತಿದ್ದೇವೆ. ಆಸಕ್ತ ಎಲ್ಲ ವಿದ್ಯಾರ್ಥಿಗಳಿಗೂ ಸಿಇಟಿ ಮತ್ತು ನೀಟಿ ತರಬೇತಿ ಕೊಡಿ ಅಂತ ಹೇಳಿದ್ದೇನೆ ಎಂದು ಹೇಳಿದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This