Home » ರಾಜ್ಯ » ಡಿಗ್ರಿ ಕೋರ್ಸ್ ಗಳಲ್ಲಿ ಸ್ಪೆಷಲೈಜ್ ಕೋರ್ಸ್‌ಗಳಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ.

ಡಿಗ್ರಿ ಕೋರ್ಸ್ ಗಳಲ್ಲಿ ಸ್ಪೆಷಲೈಜ್ ಕೋರ್ಸ್‌ಗಳಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ.

ಬೆಂಗಳೂರು: ಪದವಿ ಶಿಕ್ಷಣ ಪಡೆಯುವಾಗ ಸಾಂಪ್ರದಾಯಿಕ ವಿಷಯಗಳನ್ನು ಹೊರತುಪಡಿಸಿ ಆಧು ನಿಕ ಜಗತ್ತಿನ ಉದ್ಯೋಗ ಕ್ಷೇತ್ರದಲ್ಲಿನ ಸಾಧ್ಯತೆಗಳಿಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಪರಿಪಾಠ ಈ ಬಾರಿಯೂ ಮುಂದುವರಿದಿದೆ.

ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಪದವಿ ದಾಖಲಾತಿ ಪ್ರಕ್ರಿಯೆ ಅಂತಿಮ ಘಟಕ್ಕೆ ತಲುಪಿದ್ದು ಸದ್ಯ ಉದ್ಯೋಗಾವಕಾಶ ಹೆಚ್ಚಿದೆ ಎಂದು ಭಾವಿಸಿರುವ, ಸರ್ಟಿಫಿಕೇಟ್ ಕೋರ್ಸ್‌ಗೆ ಅವಕಾಶವಿರುವ ಸ್ಪೆಷಲೈಜ್ ಕೋರ್ಸ್‌ಗಳಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ವಿದ್ಯಾರ್ಥಿಗಳು ಪದವಿ ಜತೆಜತೆಗೆ ವಿವಿಧ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಸೇರುವ ಲೆಕ್ಕಾಚಾರ ಹಾಕಿಕೊಂಡು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಪದವಿ ಶಿಕ್ಷಣದಲ್ಲಿ ಬಿಕಾಂ, ಬಿಬಿಎ ಮತ್ತು ಬಿಸಿಎ ಟ್ರೆಂಡ್‌ ನಲ್ಲಿದೆ. ಬಿಎಸ್ಸಿ ಯಲ್ಲಿ ತಂತ್ರಜ್ಞಾನ ಆಧಾರಿತ ಕೋರ್ಸ್‌ಗಳಿಗೆ ಭಾರಿ ಬೇಡಿಕೆಯಿದೆ. ಆದರೆ, ಬಿ.ಕಾಂ ಮತ್ತು ಬಿ.ಎಸ್ಸಿಯ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಬೇಡಿಕೆ ಕುಸಿದಿದೆ. ಇನ್ನು ಬಿ.ಎಯಲ್ಲಿ ಮನಶಾಸ್ತ್ರ ವಿಷ ಯಕ್ಕೆ ಮಾತ್ರ ಹೆಚ್ಚಿನ ಉತ್ಸಾಹವಿದೆ. ಕೆಲವೆಡೆ ಆರ್ಥಶಾಸ್ತ್ರ ಸಹ ತಕ್ಕ ಮಟ್ಟಿನ ಬೇಡಿಕೆ ಉಳಿಸಿಕೊಂಡಿದೆ.

ಸಾಮಾನ್ಯ ಬಿ.ಕಾಂ.ಗಿಂತಲೂ ಅಸೋಸಿಯೇಷನ್‌ ಆಫ್ ಚಾರ್ಟರ್ಡ್‌ ಸರ್ಟಿಫೈಡ್ಡ್ ಅಕೌಂಟೆಂಟ್ಸ್‌ (ಎ.ಸಿ.ಸಿ.ಎ), ಚಾರ್ಟರ್ಡ್‌ ಮ್ಯಾನೇಜ್‌ಮೆಂಟ್‌ ಅಕೌಂಟೆಂಟ್ಸ್‌ (ಸಿ.ಎಂ.ಎ), ರಿಟೈಲ್‌ ಬ್ಯಾಂಕಿಂಗ್‌ ಮುಂತಾದ ಸ್ಪೆಷಲೈಜೆಷನ್‌ ವಿಷಯಗಳನ್ನು ಹೊಂದಿರುವ ಬಿ.ಕಾಂ. ಪದವಿಗೆ ಹೆಚ್ಚಿನ ಪ್ರಾಮುಖ್ಯತೆ ಲಭಿಸಿದೆ. ಜತೆಗೆ ಫಿನ್‌ಟೆಕ್‌, ಡಿಜಿಟಲ್‌ ಬ್ಯಾಂಕಿಂಗ್‌ ಮತ್ತು ಬ್ಯುಸಿನೆಸ್‌ ಅನಾಲಿಟಿಕ್ಸ್‌ ಕೋರ್ಸ್‌ಗಳಲ್ಲಿ ಬಿ.ಕಾಂ ಪದವಿ ಪಡೆವ ಉತ್ಸಾಹ ಕಂಡು ಬರುತ್ತಿದೆ.

ಇನ್ನು ಬಿ.ಕಾಂ ಜತೆಗೆ ಬಿ.ಬಿ.ಎ.ಗೂ ಆಸಕ್ತಿಯಿದ್ದು ಬಿ.ಬಿ.ಎ.ಯ ಹೆಲ್ತ್‌ ಕೇರ್‌ ಮ್ಯಾನೇಜ್‌ಮೆಂಟ್‌, ಫಿನ್‌ಟೆಕ್‌ ಮತ್ತು ಡಿಜಿಟಲ್‌ ಫೈನಾನ್ಸ್‌ ವಿಭಾಗದ ಕೋರ್ಸ್‌ಗಳು ಹೆಚ್ಚು ಜನಪ್ರಿಯವಾಗಿವೆ. ಇನ್ನು ವಿಜ್ಞಾನ ವಿಭಾಗದಲ್ಲಿಯೂ ತಂತ್ರಜ್ಞಾನ ಆಧಾರಿತ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಬಿ.ಟೆಕ್‌, ಬಯೋಟೆಕ್‌ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಬಿ.ಟೆಕ್‌ನಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ಮಷಿನ್‌ ಲರ್ನಿಂಗ್‌ ಕೋರ್ಸ್‌ ಹೆಚ್ಚು ಜನಪ್ರಿಯವಾಗಿದೆ. ಇನ್ನು ಸೈಬರ್‌ ಸೆಕ್ಯುರಿಟಿ, ಇಂಟರ್ನೆಟ್‌ ಆಫ್ ಥಿಂಗ್ಸ್‌ ವಿಷಯಗಳನ್ನು ಹೊಂದಿರುವ ಬಿಸಿಎ ಕೋರ್ಸ್‌ಗೆ ಭರ್ಜರಿ ಬೇಡಿಕೆಯಿದೆ. ಡೇಟಾ ಸೈನ್ಸ್‌, ಸೈಬರ್‌ ಸೆಕ್ಯುರಿಟಿ ಕೋರ್ಸ್‌ಗಳ ಸೀಟ್‌ಗಳು ಶೀಘ್ರ ಭರ್ತಿಯಾಗಿವೆ.

ಇನ್ನು ಸಿಇಟಿ ಫ‌ಲಿತಾಂಶ ಬಂದಿದ್ದರೂ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟಗೊಂಡಿಲ್ಲ. ಕೌನ್ಸೆ ಲಿಂಗ್‌ ಪ್ರಕ್ರಿಯೆ ಆರಂಭಗೊಂಡಿಲ್ಲ. ಇದರಿಂದಾಗಿ ಎಂಜಿನಿಯರಿಂಗ್‌ ನಲ್ಲಿ ಬಹು ಬೇಡಿಕೆ ಇರುವ ಕಂಪ್ಯೂಟರ್‌ ಸಂಬಂಧಿತ ಎಂಜಿನಿಯರಿಂಗ್‌ ಕೋರ್ಸ್‌ ಆಕಾಂಕ್ಷಿಗಳು ತಮ್ಮ ಆಯ್ಕೆಯ ಎಂಜಿನಿಯರಿಂಗ್‌ ಸೀಟ್‌ ಸಿಗದೆ ಹೋದರೆ ಎಂಬ ಆತಂಕದಿಂದ ಕಂಪ್ಯೂಟರ್‌ ಸಂಬಂಧಿ ವಿಷಯಗಳ ಪದವಿಗೆ ದಾಖಲಾಗುತ್ತಿದ್ದಾರೆ.

ಇನ್ನು ಕಲಾ ವಿಷಯದಲ್ಲಿ ದ್ವಿತೀಯ ಪಿಯುಸಿ ಫ‌ಲಿತಾಂಶವೇ ಕಡಿಮೆ ಇದೆ. ಕಲಾ ವಿಷಯದಲ್ಲಿ ಮನಶಾಸ್ತ್ರ ವಿಷಯಕ್ಕೆ ಉತ್ತಮ ಬೇಡಿಕೆಯಿದೆ. ಅರ್ಥಶಾಸ್ತ್ರ ಸಹ ತಕ್ಕ ಮಟ್ಟಿನ ಮನ್ನಣೆ ಉಳಿಸಿಕೊಂಡಿದೆ. ಕಾನೂನು ಪದವಿ ಪಡೆಯಲು ಕೆಲ ಕಾಲೇಜುಗಳಲ್ಲಿ ಹೆಚ್ಚಿನ ಉತ್ಸಾಹ ಕಂಡು ಬರುತ್ತಿದೆ.

ಬೆಂವಿವಿಗೆ ಸಂಬಂಧಿಸಿದ ಕಾಲೇಜುಗಳಲ್ಲಿ ಬಿ.ಕಾಂ, ಬಿ.ಸಿ.ಎ ಕೋರ್ಸ್‌ ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆರ್ಥಿಕ ಕ್ಷೇತ್ರದಲ್ಲಿ ಅಕೌಂಟೆನ್ಸಿಗೆ ಇರುವ ಮಾನ್ಯತೆ ಬಿ.ಕಾಂನ ಜನಪ್ರಿಯತೆಗೆ ಕಾರಣ. ಬಿ. ಎಸ್ಸಿಯಲ್ಲಿಯೂ ತಂತ್ರಜ್ಞಾನ ಆಧಾರಿತ ಕೋರ್ಸ್‌ಗಳು ಹೆಚ್ಚು ಮನ್ನಣೆ ಪಡೆದಿದೆ. ಕಲಾ ವಿಷಯ ತನ್ನ ಪ್ರಾಮುಖ್ಯತೆ ಇಳಿಮುಖವಾಗಿದ್ದು ಕಲಾ ವಿಷಯಗಳ ಜತೆ ಕೌಶಲ್ಯವನ್ನು ಮಿಳಿತಗೊಳಿಸುವ ಅಗತ್ಯವಿದೆ. ● ಪ್ರೊ. ಎಸ್‌.ಎಂ.ಜಯಕರ್‌, ಕುಲಪತಿ, ಬೆಂಗಳೂರು ವಿವಿ

ಪದವಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಸಂಬಂಧಿ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದೇ ವೇಳೆ ಸೆಮಿಕಂಡಕ್ಟರ್‌ ಇಂಡಸ್ಟ್ರಿ ಮತ್ತು ಇಂಡಸ್ಟ್ರಿ 4.0 ಕಾರಣಗಳಿಂದ ಇಲೆಕ್ಟ್ರಾನಿಕ್ಸ್‌, ಕಮ್ಯುನಿಕೇಷನ್‌, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಕಡೆ ಒಲವು ಕಂಡುಬಂದಿದೆ. ಕಲಾ ವಿಷಯಗಳಿಗೆ ಭಿನ್ನ ಮತ್ತು ಹೊಸ ದೃಷ್ಟಿಕೋನದ ಅಗತ್ಯವಿದೆ.  ● ಪ್ರೊ.ಕೆ.ಎ ನ್‌.ಸುಬ್ರಮಣ್ಯ, ಪ್ರಾಂಶುಪಾಲ, ಆರ್‌.ವಿ.ಕಾಲೇಜ್‌ ಆಫ್ ಎಂಜಿನಿಯರಿಂಗ್‌

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This