70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸುಲಭವಾಗಿ ಆರೋಗ್ಯ ಸೇವೆಗಳನ್ನು ಒದಗಿಸಲು, ಕೇಂದ್ರ ಸರ್ಕಾರ ಆಯುಷ್ಮಾನ್ ಆಯಪ್ ಮೂಲಕ “ಆಯುಷ್ಮಾನ್ ವಯೋ ವಂದನಾ ಕಾರ್ಡ್” ಅನ್ನು ಪರಿಚಯಿಸಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಅಡಿಯಲ್ಲಿ, ಈ ಕಾರ್ಡ್ ಹೊಂದಿರುವ ಹಿರಿಯ ನಾಗರಿಕರಿಗೆ ವರ್ಷಕ್ಕೆ ರೂ 5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ. ವಯಸ್ಸು ಹೆಚ್ಚಾಗುತ್ತಿದ್ದಂತೆ ಆರೋಗ್ಯ ಸಮಸ್ಯೆಗಳು ಸಹಜವಾದದ್ದಾಗಿರುವುದರಿಂದ, 70 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಆದಾಯದ ಯಾವುದೇ ನಿರ್ಬಂಧವಿಲ್ಲದೆ, ಅರ್ಹರಾದ ಹಿರಿಯ ನಾಗರಿಕರು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. “ಆಯುಷ್ಮಾನ್ ವಯೋ ವಂದನಾ ಕಾರ್ಡ್” ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗಾಗಿ ಮಹತ್ವದ ಹೆಜ್ಜೆಯಾಗಿದೆ.
ಏನಿದು ಆಯುಷ್ಮಾನ್ ವಯೋ ವಂದನಾ ಕಾರ್ಡ್?
ಕೇಂದ್ರ ಸರ್ಕಾರ 2023ರ ಅಕ್ಟೋಬರ್‌ನಲ್ಲಿ ಆಯುಷ್ಮಾನ್ ವಯೋ ವಂದನಾ ಕಾರ್ಡ್ ಅನ್ನು ಪರಿಚಯಿಸಿತು. ಇದರ ಉದ್ದೇಶ, ದೇಶದ 70 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಮಗ್ರ ಆರೋಗ್ಯ ರಕ್ಷಣೆಯನ್ನು ಒದಗಿಸುವುದಾಗಿದೆ. ಈ ಕಾರ್ಡ್ ಹೊಂದಿರುವವರು ಯಾವುದೇ ಆದಾಯ ಮಿತಿ ಇಲ್ಲದೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚವನ್ನು ಉಚಿತವಾಗಿ ಪಡೆಯಬಹುದು.ಇದು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಫಲಾನುಭವಿ ಹಿರಿಯರು ತಮ್ಮ ಹಣವನ್ನು ವೈದ್ಯಕೀಯ ವೆಚ್ಚಕ್ಕೆ ಖರ್ಚು ಮಾಡುವ ಅಗತ್ಯವಿಲ್ಲದೆ ಉತ್ತಮ ಚಿಕಿತ್ಸೆ ಪಡೆಯಲು ನೆರವಾಗುತ್ತದೆ.
ಈ ಯೋಜನೆಯು ಮೊದಲಾಗಿ 2018ರ ಸೆಪ್ಟೆಂಬರ್ 23ರಂದು ಪ್ರಾರಂಭವಾಯಿತು ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಇದನ್ನು ಅನುಷ್ಠಾನಗೊಳಿಸುತ್ತಿದೆ.2024ರ ಸೆಪ್ಟೆಂಬರ್ 11ರಂದು ಕೇಂದ್ರ ಸರ್ಕಾರ AB PM-JAY ಯೋಜನೆಯನ್ನು ಎಲ್ಲಾ ವಯಸ್ಸಿನವರಿಗೆ ವಿಸ್ತರಿಸುವುದಾಗಿ ಅನುಮೋದನೆ ನೀಡಿದೆ. ಇದರಿಂದಾಗಿ, 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ, ಅವರ ಆದಾಯವನ್ನು ಲೆಕ್ಕಿಸದೆ, 5 ಲಕ್ಷ ರೂಪಾಯಿವರೆಗೆ ಉಚಿತ ಆರೋಗ್ಯ ವಿಮೆಯ ಸೌಲಭ್ಯ ಲಭ್ಯವಾಗಲಿದೆ. ಈ ಕ್ರಮವು ಸುಮಾರು 4.5 ಕೋಟಿ ಕುಟುಂಬಗಳು ಮತ್ತು 6 ಕೋಟಿ ಹಿರಿಯ ನಾಗರಿಕರಿಗೆ ಲಾಭ ನೀಡಲಿದೆ.
ಆಯುಷ್ಮಾನ್ ವಯೋ ವಂದನಾ ಕಾರ್ಡ್ ಪಡೆಯಲು ಅಗತ್ಯವಿರುವ ದಾಖಲೆಗಳು (Documents):
ಆಯುಷ್ಮಾನ್ ವಯೋ ವಂದನಾ ಕಾರ್ಡ್‌ಗಾಗಿ ನೋಂದಾಯಿಸಿಕೊಳ್ಳುವ ವೇಳೆ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು:
ಆಧಾರ್ ಕಾರ್ಡ್ (Aadhaar Card)
ಜನನ ಪ್ರಮಾಣ ಪತ್ರ
ವಾಸದ ಪ್ರಮಾಣ ಪತ್ರ (Proof of Residence):
ರೇಶನ್ ಕಾರ್ಡ್,
ಪಾಸ್‌ಪೋರ್ಟ್ ಸೈಸ್ ಫೋಟೋ (Passport Size Photo)
ಮೊಬೈಲ್ ಸಂಖ್ಯೆ (Mobile Number):
ಅರ್ಹತಾ ಮಾನದಂಡಗಳು:
ವಯೋಮಿತಿ:ಅರ್ಜಿ ಸಲ್ಲಿಸುವ ವ್ಯಕ್ತಿಯು 70 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿರಬೇಕು.
ಪೌರತ್ವ:ಅರ್ಹ ವ್ಯಕ್ತಿಯು ಭಾರತದ ನಾಗರಿಕರಾಗಿರಬೇಕು.
ಆದಾಯ ಮಿತಿ ಇಲ್ಲ:ಈ ಯೋಜನೆಗೆ ಯಾವುದೇ ಆದಾಯದ ಮಿತಿ ಇಲ್ಲ. ಯಾವುದೇ ಆದಾಯ ವರ್ಗದವರು ಅರ್ಜಿ ಸಲ್ಲಿಸಬಹುದು.
ಆಧಾರ್ ಕಡ್ಡಾಯ:ಅರ್ಜಿ ಸಲ್ಲಿಸುವ ವ್ಯಕ್ತಿಯು ಆಧಾರ್ ಕಾರ್ಡ್ ಹೊಂದಿರಬೇಕು.
ವಾಸದ ದಾಖಲೆ:ಅರ್ಜಿ ಸಲ್ಲಿಸುವ ವ್ಯಕ್ತಿಯು ಭಾರತದಲ್ಲಿ ವಾಸಿಸುತ್ತಿರುವುದನ್ನು ತೋರಿಸುವ ದಾಖಲೆ ಹೊಂದಿರಬೇಕು (ಉದಾ: ವೋಟರ್ ಐಡಿ, ರೇಶನ್ ಕಾರ್ಡ್, utility bills).
ಇತರ ಆರೋಗ್ಯ ಯೋಜನೆಗಳ ಲಾಭಪಡೆಯದಿರುವುದು :ಕೆಲವೊಂದು ರಾಜ್ಯಗಳಲ್ಲಿ, ಅರ್ಜಿದಾರರು ಈಗಾಗಲೇ ಇನ್ನೊಂದು ಆರೋಗ್ಯ ವಿಮಾ ಯೋಜನೆಯ ಲಾಭ ಪಡೆಯುತ್ತಿರದಿರಬೇಕು
ಆಯುಷ್ಮಾನ್ ವಯೋ ವಂದನಾ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ
“Ayushman Bharat App” ಅನ್ನು ಹುಡುಕಿ ಮತ್ತು ಡೌನ್‌ಲೋಡ್ ಮಾಡಿ.
ಆಯಪ್ ತೆರೆ ಮತ್ತು “Beneficiary” ಅಥವಾ “Operator” ಎಂದು ತೋರಿಸುವ ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಕ್ಯಾಪ್ಚಾ ಕೋಡ್, ಮೊಬೈಲ್ ನಂಬರ್ ಹಾಕಿ, OTP ಮೂಲಕ ಲಾಗಿನ್ ಮಾಡಿ.
ನಿಮ್ಮ ರಾಜ್ಯದ ಹೆಸರು, ಆಧಾರ್ ಕಾರ್ಡ್ ವಿವರ ಮುಂತಾದ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
ಫಲಾನುಭವಿ ಮಾಹಿತಿಯು ಇದ್ದರೆ, ಅದನ್ನು ಆಯ್ಕೆಮಾಡಿ. ಇಲ್ಲದಿದ್ದರೆ OTP ಮೂಲಕ e-KYC ಮೂಲಕ ಮುಂದುವರೆಯಿರಿ.ನಿಮ್ಮ ಮಾಹಿತಿ ಸರಿಯಾಗಿ ನಮೂದಿಸಿ
ಫಲಾನುಭವಿಯ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ.
ಫಲಾನುಭವಿ ಯಾವ ವರ್ಗಕ್ಕೆ ಸೇರುತ್ತಾರೆ ಎಂಬುದು ಮತ್ತು ಅವರ ಪ್ರದೇಶದ ಪಿನ್‌ಕೋಡ್ ನಮೂದಿಸಿ.
ಕುಟುಂಬದ ಎಲ್ಲ ಸದಸ್ಯರ ಹೆಸರು, ಸಂಬಂಧ, ವಯಸ್ಸು ಇತ್ಯಾದಿ ವಿವರಗಳನ್ನು ನಮೂದಿಸಿ ಮತ್ತು ಅರ್ಜಿ ಸಲ್ಲಿಸಿ.
e-KYC ಪೂರ್ಣಗೊಂಡು ಅರ್ಜಿ ಅನುಮೋದನೆಯಾದ ನಂತರ, ಆಯುಷ್ಮಾನ್ ವಯೋ ವಂದನಾ ಕಾರ್ಡ್ ಡಿಜಿಟಲ್ ರೂಪದಲ್ಲಿ ಡೌನ್‌ಲೋಡ್ ಮಾಡಬಹುದು.
Source: Karunadasuddhi







