ಬೆಂಗಳೂರು:- ಇತ್ತೀಚೆಗೆ 2024-25ನೇ ಸಾಲಿನ SSLC ಫಲಿತಾಂಶ ಬಿಡುಗಡೆಗೊಂಡಿತು. ಇದರಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಇಂತಹ ವಿದ್ಯಾರ್ಥಿಗಳು ಹಾಗೂ ಎಸ್ಎಸ್ಎಲ್ಸಿಯಲ್ಲಿ ನಡೆಯುವ 3 ಪರೀಕ್ಷೆಗಳಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ.
ಎಸ್ಎಸ್ಎಲ್ಸಿಯಲ್ಲಿ ಫೇಲಾದ ವಿದ್ಯಾರ್ಥಿಗಳು ಇಚ್ಛೆಪಟ್ಟರೆ ಎಲ್ಲಾ ಮಕ್ಕಳಂತೆ ಶಾಲೆಗೆ ಹೋಗಿ ಮತ್ತೆ ಕಲಿಯುವ ಅವಕಾಶ ನೀಡಿದೆ. ಈ ಮೂಲಕ ಇದೇ ವರ್ಷದಿಂದ ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ ನೀಡಿದೆ
ನಿಯಮಗಳೇನು?
* ಎಸ್ಎಸ್ಎಲ್ಸಿಯಲ್ಲಿ ನಡೆಯೋ 3 ಪರೀಕ್ಷೆಯಲ್ಲಿ ಫೇಲ್ ಆಗೋ ವಿದ್ಯಾರ್ಥಿ ಮತ್ತೆ ಶಾಲೆಗೆ ಹೋಗಿ ಕಲಿಯಬಹುದು.
* ಸರ್ಕಾರಿ ಶಾಲೆಯಲ್ಲಿ ಮಾತ್ರ ಈ ಅವಕಾಶ ಸಿಗಲಿದೆ
* ಮತ್ತೆ ಓದೋಕೆ ಇಷ್ಟಪಡುವ ವಿದ್ಯಾರ್ಥಿ ಶಾಲೆಗೆ ಹೋಗಿ ಮಾಹಿತಿ ಕೊಟ್ಟು ಮರು ದಾಖಲಾತಿ ಆಗಬೇಕು.
* ಶಾಲೆಯಲ್ಲಿ ಸಾಮಾನ್ಯ ವಿದ್ಯಾರ್ಥಿಯಂತೆ ದಾಖಲಾತಿ ಆಗಬೇಕು.
* ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತುಗಳನ್ನ ಮತ್ತೆ ದಾಖಲಾತಿ ಆಗುವ ವಿದ್ಯಾರ್ಥಿಗೆ ಕೊಡಲಾಗುತ್ತದ
* ಬೇರೆ ಮಕ್ಕಳಂತೆ ತರಗತಿಯಲ್ಲಿ ಕೂತು ಪಾಠ ಕೇಳಬಹುದು
ಹೀಗಾಗಿ ಮಕ್ಕಳು ಫೇಲಾಗಿದ್ದೀನಿ ಅಂತ ಚಿಂತೆ ಬಿಟ್ಟು. ಸರ್ಕಾರದ ಈ ಸವಲತ್ತು ಸದುಪಯೋಗ ಪಡಿಸಿಕೊಳ್ಳಿ.







