Home » ದೇಶ » ಇಎಸ್‌ಐ ಕಾರ್ಡ್‌ ಇದ್ದವರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಶೂನ್ಯ ಬಿಲ್ ಚಿಕಿತ್ಸೆ ಪಡೆಯುವ ಸೌಲಭ್ಯ?

ಇಎಸ್‌ಐ ಕಾರ್ಡ್‌ ಇದ್ದವರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಶೂನ್ಯ ಬಿಲ್ ಚಿಕಿತ್ಸೆ ಪಡೆಯುವ ಸೌಲಭ್ಯ?

ಇಎಸ್‌ಐ ಕಾರ್ಡ್‌ದಾರರಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡುವ ಪ್ರಾಯೋಗಿಕ ಪ್ರಯತ್ನವನ್ನು ಭಾರತದ ರಾಜ್ಯಧಾನಿಯಲ್ಲಿ ನಡೆಸಲಾಗಿದೆ. ಈ ಸೌಲಭ್ಯವನ್ನು ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಿಸುವ ನಿರೀಕ್ಷೆಯಿದೆ. ಆ ನಂತರ ಯಾವುದೇ ಖರ್ಚಿಲ್ಲದೆ ಆಯುಷ್ಮಾನ್‌ ಭಾರತ್‌’ ಯೋಜನೆಯಡಿ ನೋಂದಣಿಯಾದ ಖಾಸಗಿ ಆಸ್ಪತ್ರೆಗಳಲ್ಲೂಇಎಸ್‌ಐ ಕಾರ್ಡ್‌ದಾರರು ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಬೆಂಗಳೂರು:”ಆಯುಷ್ಮಾನ್‌ ಭಾರತ್‌’ ಯೋಜನೆಯಡಿ ನೋಂದಣಿಯಾದ ಖಾಸಗಿ ಆಸ್ಪತ್ರೆಗಳಲ್ಲೂಇಎಸ್‌ಐ ಕಾರ್ಡ್‌ದಾರರು ಶೂನ್ಯ ಬಿಲ್‌ ವ್ಯವಸ್ಥೆಯಡಿ ಚಿಕಿತ್ಸೆ ಅವಕಾಶ ಕಲ್ಪಿಸಲು ಪ್ರಯತ್ನ ನಡೆದಿದೆ,” ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೇಂದ್ರ ಸಚಿವರಾಗಿ ಒಂದು ವರ್ಷದ ಅಧಿಕಾರ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಶುಕ್ರವಾರ ಅವರು ಪತ್ರಿಕಾಗೋಷ್ಠಿಯಲ್ಲಿಮಾತನಾಡಿ,”ರೈತರು, ಅಸಂಘಟಿತ ಹಾಗೂ ಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ದೇಶದ ಎಲ್ಲನಾಗರಿಕರು ಮುಕ್ತವಾಗಿ ಭವಿಷ್ಯ ನಿಧಿ ಯೋಜನೆಯಡಿ ಪಿಂಚಣಿ ಪಡೆಯಲು ನೋಂದಣಿಗೆ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ,” ಎಂದರು.

ಕರ್ನಾಟಕ
ಸುದ್ದಿ
ನಗರ
ಐಪಿಎಲ್
ವಾಣಿಜ್ಯ
ಸಿನಿಮಾ
ಜೀವನ ಶೈಲಿ
ಜ್ಯೋತಿಷ್ಯ
ಬಿಗ್‌ಬಾಸ್
ಸರಕಾರಿ ಯೋಜನೆ
ಬೆಂಗಳೂರು ಸೇವೆಗಳು
ಸಂಕ್ಷಿಪ್ತ
VK ಗ್ಯಾಲರಿ
ವಿಡಿಯೋ
ಟಿವಿ
ಕ್ರೀಡೆ
ಚುನಾವಣೆ

ಮುಖಪುಟ
ವಿಡಿಯೋ
ಫೋಟೋ

ನಗರ ಆಯ್ಕೆ ಮಾಡಿ
kannada NewsNewskarnatakaGood News For Esi Card Holders Under Ayushman Bharat, Treatment Will Be Available At Private Hospitals
ESI ಕಾರ್ಡ್‌ದಾರರಿಗೆ ಗುಡ್‌ನ್ಯೂಸ್: ಆಯುಷ್ಮಾನ್‌ ಭಾರತ್‌ನಡಿ ಖಾಸಗಿ ಆಸ್ಪತ್ರೆಗಳಲ್ಲೂ ಸಿಗುತ್ತೆ ಖರ್ಚಿಲ್ಲದೆ ಚಿಕಿತ್ಸೆ!: ಎಲ್ಲೆಲ್ಲಿ ಸೌಲಭ್ಯ ಇರಲಿದೆ?
ಇಎಸ್‌ಐ ಕಾರ್ಡ್‌ದಾರರಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡುವ ಪ್ರಾಯೋಗಿಕ ಪ್ರಯತ್ನವನ್ನು ದೆಹಲಿಯಲ್ಲಿ ನಡೆಸಲಾಗಿದೆ. ಈ ಸೌಲಭ್ಯವನ್ನು ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಿಸುವ ನಿರೀಕ್ಷೆಯಿದೆ. ಆ ನಂತರ ಯಾವುದೇ ಖರ್ಚಿಲ್ಲದೆ ಆಯುಷ್ಮಾನ್‌ ಭಾರತ್‌’ ಯೋಜನೆಯಡಿ ನೋಂದಣಿಯಾದ ಖಾಸಗಿ ಆಸ್ಪತ್ರೆಗಳಲ್ಲೂಇಎಸ್‌ಐ ಕಾರ್ಡ್‌ದಾರರು ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Follow

Contributed by: Keerthi Prasad
Curated by: ಮಮತ.ಜಿ
Updated: 31 May 2025, 9:13 am|Vijaya Karnataka
ಹೈಲೈಟ್ಸ್‌:
ಇಎಸ್‌ಐ ಕಾರ್ಡ್‌ದಾರರಿಗೆ ಸರ್ಕಾರದಿಂದ ಸಿಹಿಸುದ್ದ
ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಶೂನ್ಯ ಬಿಲ್‌ ಚಿಕಿತ್ಸೆ
ಈಗಾಗಲೇ ಪ್ರಾಯೋಗಿಕ ಪ್ರಯತ್ನವನ್ನು ದೆಹಲಿಯಲ್ಲಿ ನಡೆಸಲಾಗಿದೆ

AYUSHMAN
ಇಎಸ್‌ಐ ಕಾರ್ಡ್‌ದಾರರೂ ಖಾಸಗಿ ಆಸ್ಪತ್ರೆಗಳಲ್ಲೂ ಶೂನ್ಯ ಬಿಲ್ ಚಿಕಿತ್ಸೆ ಪಡೆಯುವ ಸೌಲಭ್ಯ(ಸಾಂದರ್ಭಿಕ ಚಿತ್ರ) (ಗ್ಯಾಲರಿ- Vijaya Karnataka Web)
ಬೆಂಗಳೂರಿನಲ್ಲಿ ಫ್ಲಾಟ್‌ಗಳು ಮಾರಾಟಕ್ಕಿವೆ (ಬೆಲೆಗಳನ್ನು ನೋಡಿ)
Flats Sale | search ads
|
Sponsored
ಬೆಂಗಳೂರು:”ಆಯುಷ್ಮಾನ್‌ ಭಾರತ್‌’ ಯೋಜನೆಯಡಿ ನೋಂದಣಿಯಾದ ಖಾಸಗಿ ಆಸ್ಪತ್ರೆಗಳಲ್ಲೂಇಎಸ್‌ಐ ಕಾರ್ಡ್‌ದಾರರು ಶೂನ್ಯ ಬಿಲ್‌ ವ್ಯವಸ್ಥೆಯಡಿ ಚಿಕಿತ್ಸೆ ಅವಕಾಶ ಕಲ್ಪಿಸಲು ಪ್ರಯತ್ನ ನಡೆದಿದೆ,” ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೇಂದ್ರ ಸಚಿವರಾಗಿ ಒಂದು ವರ್ಷದ ಅಧಿಕಾರ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಶುಕ್ರವಾರ ಅವರು ಪತ್ರಿಕಾಗೋಷ್ಠಿಯಲ್ಲಿಮಾತನಾಡಿ,”ರೈತರು, ಅಸಂಘಟಿತ ಹಾಗೂ ಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ದೇಶದ ಎಲ್ಲನಾಗರಿಕರು ಮುಕ್ತವಾಗಿ ಭವಿಷ್ಯ ನಿಧಿ ಯೋಜನೆಯಡಿ ಪಿಂಚಣಿ ಪಡೆಯಲು ನೋಂದಣಿಗೆ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ,” ಎಂದರು.
  by TaboolaSponsored Links
You May Like
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಆಯುರ್ವೇದವನ್ನು ತೆಗೆದುಕೊಳ್ಳಿ
slimo advance weight loss
ಸಂಬಂಧಿತ ಸುದ್ದಿ
ದೇಶದ ಕಿರಿಯ ವಯಸ್ಸಿನ ಸಂಸದೆಯೊಂದಿಗೆ ಹಸಮಣೆ ಏರಲು ಸಜ್ಜಾದ ರಿಂಕು ಸಿಂಗ್;‌ ನಿಶ್ಚಿತಾರ್ಥ, ಮದುವೆ ಯಾವಾಗ?
‘ನನ್ನ ಮನೆ ಮೇಲೆ ಕಲ್ಲು ಹೊಡೆದಿದ್ರು, ಪ್ರಿಂಟ್ ಸುಟ್ಟಾಕಿದ್ರು’; ಕಷ್ಟಕಾಲದಲ್ಲಿ ರವಿಚಂದ್ರನ್ ಬೆನ್ನಿಗೆ ನಿಂತಿದ್ದ ಅಣ್ಣಾವ್ರು!
IPL 2025: ಮಹತ್ವದ ಪಂದ್ಯದಲ್ಲಿ ಮುಂಬಯಿ- ಪಂಜಾಬ್‌ ಮುಖಾಮುಖಿ; ಕ್ವಾಲಿಫೈಯರ್‌ 2ನಲ್ಲಿ ಕಿಂಗ್‌ ಯಾರು?

ಖಾಸಗಿ ಆಸ್ಪತ್ರೆಗಳಲ್ಲೂಇಎಸ್‌ಐ ಕಾರ್ಡ್‌ದಾರರಿಗೆ ಚಿಕಿತ್ಸೆ
”ಇಎಸ್‌ಐ ಕಾರ್ಡ್‌ದಾರರು ಇಎಸ್‌ಐ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯುವ ವ್ಯವಸ್ಥೆ ಇತ್ತು. ಆದರೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ನೋಂದಾಯಿಸಿಕೊಂಡ ಖಾಸಗಿ ಆಸ್ಪತ್ರೆಗಳಲ್ಲೂಇಎಸ್‌ಐ ಕಾರ್ಡ್‌ದಾರರಿಗೆ ಚಿಕಿತ್ಸೆ ಕಲ್ಪಿಸುವ ಪ್ರಾಯೋಗಿಕ ಪ್ರಯತ್ನ ದಿಲ್ಲಿಯಲ್ಲಿ ನಡೆದಿದೆ. ಶೀಘ್ರವೇ ದೇಶಾದ್ಯಂತ ಈ ಸೌಲಭ್ಯ ವಿಸ್ತರಿಸಲು ಪ್ರಯತ್ನ ನಡೆದಿದೆ,” ಎಂದು ಹೇಳಿದರು.

”2017ರಿಂದ ಈವರೆಗೆವರೆಗೆ ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ವ್ಯಾಪ್ತಿಗೆ 7.1 ಕೋಟಿ ಮಂದಿ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಅಷ್ಟು ಪ್ರಮಾಣದಲ್ಲಿಹೊಸ ಉದ್ಯೋಗ ಸೃಷ್ಟಿಯಾದಂತಾಗಿದೆ. ಅದೇರೀತಿ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಭವಿಷ್ಯನಿಧಿ ಯೋಜನೆಯಡಿ ಪಿಂಚಣಿ ಪಡೆಯಲು ನೋಂದಣಿಗೆ ಅವಕಾಶ ಕೊಡುವ ದೃಷ್ಟಿಯಿಂದ ಶೀಘ್ರದಲ್ಲೇ ಹೊಸ ಯೋಜನೆ ಘೋಷಣೆಯಾಗಲಿದೆ. ಸದ್ಯ ಯಾರು ಬೇಕಾದರೂ ಇಪಿಎಫ್‌ಒ ಪಾವತಿಸಿ ಸೌಲಭ್ಯ ಪಡೆಯಲು ಅವಕಾಶವಿಲ್ಲ,” ಎಂದು ತಿಳಿಸಿದರು.

”ಬ್ರಿಟಿಷರ ಕಾಲದಲ್ಲಿರೂಪುಗೊಂಡಿದ್ದ 29 ಕಾಯಿದೆಗಳ ಆಧಾರದಲ್ಲೇ ದೇಶದ ಕಾರ್ಮಿಕ ವಲಯ ನಡೆಯುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ ಎಲ್ಲ29 ಕಾಯಿದೆಗಳ ಅಂಶಗಳನ್ನು ಒಳಗೊಂಡ 4 ಕಾರ್ಮಿಕ ಸಂಹಿತೆಗಳನ್ನು (ಲೇಬರ್‌ ಕೋಡ್‌) ಜಾರಿಗೊಳಿಸಲು ಪ್ರಯತ್ನ ನಡೆದಿದೆ. ಈಗಾಗಲೇ ಕೆಲವು ಅನುಷ್ಠಾನಕ್ಕೂ ಬಂದಿವೆ. ಅಸಂಘಟಿತ ಕಾರ್ಮಿಕರಿಗೂ ಭವಿಷ್ಯ ನಿಧಿ ಪಿಂಚಣಿ, ಆರೋಗ್ಯ ಸೌಲಭ್ಯ ಕೊಡಲು ಪ್ರಯತ್ನಿಸಲಾಗುತ್ತಿದೆ,” ಎಂದು ಹೇಳಿದರು.

6.29 ಕೋಟಿ ಎಂಎಸ್‌ಎಂಇ ನೋಂದಣಿ
”ಇ-ಶ್ರಮ್‌ ಪೋರ್ಟಲ್‌ ಆರಂಭಿಸಿ ದೇಶದಲ್ಲಿ60 ಕೋಟಿ ಅಸಂಘಟಿತ ಕಾರ್ಮಿಕರನ್ನು ಸೇರಿ ಒಟ್ಟು 80 ಕೋಟಿ ಕಾರ್ಮಿಕರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಈವರೆಗೆ 30 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದಾರೆ. ಗಿಗ್‌ ಕಾರ್ಮಿಕರು ಸೇರಿದಂತೆ ಹೊಸಬಗೆಯ ಉದ್ಯೋಗದ ಕಾರ್ಮಿಕರಿಗೂ ಇದರ ನೆರವು ಸಿಗಲಿದೆ. ಕಳೆದ ವರ್ಷ ಆರಂಭಿಸಿದ ‘ಉದ್ಯಮ ಪೋರ್ಟಲ್‌’ನಡಿ 6.36 ಕೋಟಿ ಎಂಎಸ್‌ಎಂಇಗಳು ನೋಂದಣಿಯಾಗಿದ್ದು, 26 ಕೋಟಿ ಜನರಿಗೆ ಉದ್ಯೋಗ ನೀಡಿವೆ,” ಎಂದು ತಿಳಿಸಿದರು.

ಪೀಣ್ಯದಲ್ಲಿಎನ್‌ಎಸ್‌ಐಸಿ ಟೆಕ್ನಿಕಲ್‌ ಸರ್ವಿಸ್‌ ಸೆಂಟರ್‌
”ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯಾದಲ್ಲೇ ಅತಿ ದೊಡ್ಡ ಅಂದರೆ 16,000 ಎಂಎಸ್‌ಎಂಇ ಕೈಗಾರಿಕಾ ಕೇಂದ್ರವಾಗಿದೆ. ಹಾಗಾಗಿ ಪೀಣ್ಯದಲ್ಲೇ ‘ಎನ್‌ಎಸ್‌ಐಸಿ ಟೆಕ್ನಿಕಲ್‌ ಸರ್ವಿಸ್‌ ಸೆಂಟರ್‌’ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಕೃತಕ ಬುದ್ಧಿಮತ್ತೆ (ಎಐ), ಏರೋನಾಟಿಕಲ್ಸ್‌, ರಕ್ಷಣೆ ಸೇರಿದಂತೆ ಭವಿಷ್ಯದ ಸುಧಾರಿತ ತಂತ್ರಜ್ಞಾನಗಳಿಗೆ ಪೂರಕವಾದ ತರಬೇತಿ ನೀಡಲು ನಿರ್ಧರಿಸಲಾಗಿದೆ. ರಾಜ್ಯ ಸರಕಾರ ಎರಡು ದಿನಗಳ ಹಿಂದಷ್ಟೇ ಜಮೀನು ಹಸ್ತಾಂತರಿಸಿದ್ದು, ಎರಡು ವರ್ಷಗಳಲ್ಲಿಕೇಂದ್ರ ನಿರ್ಮಾಣವಾಗಲಿದೆ,” ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This