Home » ಬೀದರ ಜಿಲ್ಲೆ » ಔರಾದ : ವಸತಿನಿಲಯ ಪ್ರಾರಂಭಕ್ಕೆ ಒತ್ತಾಯ

ಔರಾದ : ವಸತಿನಿಲಯ ಪ್ರಾರಂಭಕ್ಕೆ ಒತ್ತಾಯ

ಔರಾದ್ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಸತಿ ನಿಲಯ ಪ್ರಾರಂಭಿಸುವಂತೆ ರಾಷ್ಟ್ರೀಯ ಅಹಿಂದ ಸಂಘಟನೆ ಯುವ ಘಟಕ ಒತ್ತಾಯಿಸಿದೆ.

ಅಹಿಂದ ಸಂಘಟನೆ ಯುವ ಘಟಕದ ರಾಜ್ಯಾಧ್ಯಕ್ಷ ಲಕ್ಷ್ಮಣ ದೇವಕತೆ ಹಾಗೂ ಪದಾಧಿಕಾರಿಗಳು ಈ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ವಿಸ್ತೀರ್ಣಾಧಿಕಾರಿಗೆ ಮನವಿ ಸಲ್ಲಿಸಿದ್ದು, ಕಾಲೇಜು ಆವರಣದಲ್ಲಿ ವಸತಿ ನಿಲಯ ಕಟ್ಟಡ ಪೂರ್ಣಗೊಂಡರು ವಸತಿ ನಿಲಯ ಪ್ರಾರಂಭಕ್ಕೆ ಹಿಂದೇಟು ಹಾಕಲಾಗುತ್ತಿದೆ ಎಂದು ದೂರಿದರು.

ಕಾಲೇಜು ಆವರಣದಲ್ಲಿ ವಸತಿ ನಿಲಯ ಪ್ರಾರಂಭ ಮಾಡಿದ್ದಲ್ಲಿ
ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯ ಎಂದ ಅವರು, ಕಾಲೇಜು ಪಟ್ಟಣದ ಹೊರವಲಯದಲ್ಲಿ 2 ಕಿ.ಮೀ. ಅಂತರದಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ವಸತಿ ನಿಲಯ ಪ್ರಾರಂಭಿಸುವಂತೆ ಪತ್ರದ ಮೂಲಕ ಅಹಿಂದ ಸಂಘಟನೆ ಮನವಿ ಮಾಡಿದೆ. ಪ್ರಮುಖರಾದ ಅಹಿಂದ ಸಂಘಟನೆ ಸಚಿನ ಮೇತ್ರೆ, ರಾಜಕುಮಾರ ಮುದಾಳೆ ಸೇರಿದಂತೆ ಯುವ ಘಟಕದ ಪದಾಧಿಕಾರಿಗಳು ಇದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This