22 ಮೇ ರಂದು ನಡೆದ ಛಲವಾದಿ ಮಹಾಸಭಾ ಸಂಘಟನೆಯ ಜಿಲ್ಲಾ ಅಧ್ಯಕ್ಷ ಇಂದು ಔರಾದ ನಲ್ಲಿ ಪತ್ರಿಕಾ ಗೋಷ್ಠಿ ನಡೆಸುವ ಮುಖಾಂತರ ಒಳಮಿಷಲಾತಿ ಬಗ್ಗೆ ಈಗಾಗಲೇ ರಾಜ್ಯದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಒಳಮೀಸಲಾತಿಯ ಜಾತಿ ಸಮೀಕ್ಷೆ ನಡೆಯುತ್ತಲಿದೆ. ಆದರೆ ಬಹಳ ಸಮರ್ಪಕವಾಗಿ ಸಮೀಕ್ಷೆ ನಡೆಯುತ್ತಿಲ್ಲ. ಬಹಳಕಡೆ, ಸರ್ವರ ಸಮಸ್ಯೆ ಇದ್ದು, ಅಧಿಕಾರಿಗಳ ನಿರ್ಲಕ್ಷದಿಂದ ಕೂಡಿದೆ. ಇದು ಕೂಡಲೇ ಮೇಲಾಧಿಕಾರಿಗಳ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು.
ನಮ್ಮ ಜನಾಂಗದ ಯುವಕರು ಮನೆ ಮನೆಗೆ ಹೋಗಿ ಯಾವ ರೀತಿ ಸಮೀಕ್ಷೆ ನಡೆಯುತ್ತಿದೆ ಎಲ್ಲಿ ಸಮಸ್ಯೆಯಾಗಿದೆ ಅವರ ಹೆಸರು ಮತ್ತು ಮನೆಯ ವಿಳಾಸ ಚುನಾವಣೆ ಬೂತ್ ನಂಬರ ತೆಗೆದು ಮೇಲಾಧಿಕಾರಿಗಳಿಗೆ ವಿನಂತಿಸಿ ಸರಿಪಡಿಸುವ ಜವಾಬ್ದಾರಿ ಆಯಾ ಹಳ್ಳಿ ಜನಾಂಗದ ನಾಯಕರುಗಳು ಕೂಡಲೇ ಬಗೆಹರಿಸಬೇಕು.
ಇತ್ತಿಚೀಗೆ ರಾಜ್ಯದಲ್ಲಿ ಕೇಳಲಾರಂಭಿಸಿದ ವಿಷಯ “ಬೇಡ ಜಂಗಮ” ಎಂಬ ಹೆಸರಿನಲ್ಲಿ ಎರಡು ವಿಭಿನ್ನ ಗುಂಪುಗಳು ತಮ್ಮನ್ನು Sechedule Caste ಎಂದು ಗುರುತಿಸಿಕೊಳ್ಳುತ್ತವೆ. ಒಂದು ಗುಂಪು ತೆಲುಗು ಭಾಷೆಯ ಬಡಗ ಜಂಗಮರು (Budga Jangam) ಇನ್ನೊಂದು ಲಿಂಗಾಯತ ಸಮುದಾಯದ ಜಂಗಮರು ಇದರಿಂದಾಗಿ ನಕಲಿ ಪ್ರಮಾಣ ಪತ್ರಗಳ ಸಮಸ್ಯೆ ಉಂಟಾಗಿದೆ.
ಡಾ. ಎಲ್ ಹನುಮಂತಯ್ಯಾ ಅವರು ನಕಲಿ ಬೇಡ ಜಂಗಮ ಪ್ರಮಾಣ ಪತ್ರಗಳ ಸಮಸ್ಯೆ 1980ರ ದಶಕದಿಂದಲೇ ಆರಂಭವಾಗಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ಬೇಡ ಜಂಗಮ ಮತ್ತು ಬಡಗ ಜಂಗಮ ಸಮುದಾಯಗಳ ಜನಸಂಖ್ಯೆ 2011 ರಿಂದ 2025 ರವರೆಗೆ 60,000/- ರೀಮದ 3 ಲಕ್ಷಕ್ಕೆ ಏರಿಕೆಯಾಗಿದೆ. ಇದು ಶೇ. 400 ರಿಂದ 500 ರಷ್ಟು ವೃದ್ಧಿಯಾಗಿದೆ.
ಬೇಡ ಜಂಗಮ ನಕಲಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ ನಕಲಿ ಬೇಡ ಜಂಗಮ ಪ್ರಮಾಣ ಪತ್ರಗಳನ್ನು ಅಮಾನ್ಯಗೊಳಿಸಿ ಸರ್ಕಾರಕ್ಕೆ ಕ್ರಮಕೈಗೊಳ್ಳುವಂತೆ ನಿರ್ದೇಶಿಸಿದೆ.
ಒಂದು ಪ್ರಕರಣದಲ್ಲಿ ಸಂಬಂಧಿತ ವ್ಯಕ್ತಿಯು ಲಿಂಗಾಯತ ಸಮುದಾಯದವನು ಎಂಬುದು ಪತ್ತೆ ಹಚ್ಚಿದ ಬಳಿಕ Sechedule Caste ಪ್ರಮಾಣ ಪತ್ರವನ್ನು ರದ್ದುಪಡಿಸಲು ಆದೇಶ ನೀಡಲಾಗಿದೆ.
ಜೋಕ್ಷಣಾ ಪ್ರಾಜೆಕ್ಟ್ ಎಂಬ ಸಂಸ್ಥೆಯ ವರದಿ ಪ್ರಕಾರ ಕರ್ನಾಟಕದಲ್ಲಿ ಬುಡಗ ಜಂಗಮ ಅಥವಾ ಬೇಡ ಬುಡಗ ಜಂಗಮ ಸಮುದಾಯದ ಜನಸಂಖ್ಯೆ 147000 ಎಂದು ಅಂದಾಜಿಸಲಾಗಿದೆ.
2024-25ನೇ ಸಾಲಿನಲ್ಲಿ ಸರ್ಕಾರವು ಬೇಡ ಜಂಗಮ ಮತ್ತು ಬಡಗ ಜಂಗಮರ ನಡುವೆ ಸ್ಪಷ್ಟ ಬೋಧನೆ ಮಾಡಲು ಉಚ್ಚ ಮಟ್ಟದ ಸಮಿತಿ ರಚನೆ ಮಾಡಿದೆ. ಯಾವುದಾದರೂ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಘಟನೆ ತಮ್ಮ ಗಮನಕ್ಕೆ ಬಂದರೆ ತಕ್ಷಣ ಈ ಸಮಿತಿಯ ಗಮನಕ್ಕೆ ತರಬೇಕು. ಪರಿಶೀಲನೆಗೆ ಒಳಪಡಿಸುವಂತೆ ಒತ್ತಾಯಿಸಬೇಕು.
ಕೆಲವರ ವಿರುದ್ಧ ಪೋರ್ಜರಿ (Forgery) ಮತ್ತು ಚುಟುಕು ಅಪರಾಧಗಳು (IPC 420, 468, 471)) ಅಡಿಯಲ್ಲಿ ಪ್ರಕರಣಗಳು ದಾಖಲಾಗಿ, ಶಿಕ್ಷೆ ವಿಧಿಸಲಾಗಿದೆ.
(1988 ರಿಂದ 2023ರ ವರೆಗೆ ಕರ್ನಾಟಕದಲ್ಲಿ 1097 ನಕಲಿ ಜಾತಿ ಪ್ರಮಾಣ ಪತ್ರಗಳ ಪ್ರಕರಣಗಳು ದಾಖಲಾಗಿದೆ. ಇವುಗಳಲ್ಲಿ 86 ಪ್ರಕರಣಗಳಲ್ಲಿ ಲಿಂಗಾಯತ ಸಮುದಾಯದವರು ತಮ್ಮನ್ನು ಬೇಡ ಜಂಗಮ Sechedule Caste (SC) ಎಂದು ತೋರಿಸಿಕೊಂಡು ಸೌಲಭ್ಯಗಳನ್ನು ಪಡೆದುಕೊಂಡಿರುವುದಾಗಿ ವರದಿಯಾಗಿದೆ.
ಈ ರೀತಿಯ ನಕಲಿ ಪ್ರಮಾಣ ಪತ್ರಗಳ ಮೂಲಕ ಅನೇಕರು ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಇದು ನಿಜವಾದ ಬೇಡ ಜಂಗಮ ಸಮುದಾಯದ ಸದಸ್ಯರಿಗೆ ಅನ್ಯಾಯವಾಗುತ್ತದೆ.
ಇಷ್ಟೆ ಅಲ್ಲಾ ಕರ್ನಾಟಕದಲ್ಲಿ ಬಹುಸಂಖ್ಯಾತ ಬಾಹುವುಳ್ಳ ಹೊಂದಿರುವ ಲಿಂಗಾಯತ ಸಮುದಾಯದವರು ಕ್ರಮೇಣ ಬೇಡ ಜಂಗಮ ನಕಲಿ ಪ್ರಮಾಣ ಪತ್ರ ಪಡೆಯುವವರ ಜನಸಂಖ್ಯೆ ಪ್ರತಿ ವರ್ಷ ವೃದ್ಧಿಯಾಗುತ್ತಿದ್ದು, ನಿಜವಾಗಿ Sechedule Caste (SC) ಪಟ್ಟಿಯಲ್ಲಿರುವ ಹೊಲೆಯ ಹಾಗೂ ಮಾದಿಗ ಸಮುದಾಯಗಳು ಸಾಮಾಜಿಕ ನ್ಯಾಯದ ಪರಿಕಲ್ಪನೆಯಿಂದ ಅನ್ಯಾಯಕ್ಕೆ ಒಳಗಾಗಬೇಕಾಗಿದೆ.
ಮುಂದುವರೆದು ಕರ್ನಾಟಕದ ಎಲ್ಲಾ ಹೊಲೆಯ ಹಾಗೂ ಮಾದಿಗ ಸಂಘಟನೆಗಳು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಇಂದು ರಾಜ್ಯಾದ್ಯಾಂತ ಹೋರಾಟಕ್ಕೆ ಇಳಿಯಬೇಕಾಗುತ್ತದೆ.
ದೇವೇಂದ್ರ ಕುಮಾರ ಸೋನಿ. ಜಿಲ್ಲಾ ಉಪಾಧ್ಯಕ್ಷರು, ಬೀದರ ವೈಜನಾಥ ಸಾಗರ, ನಿರ್ದೇಶಕರು, ಛಲವಾದಿ ಮಹಾಸಭೆ ಬೀದರ
ಪ್ರದೀಪ ಜಂಜೀರೆ ಅಧ್ಯಕ್ಷರು, ಛಲವಾದಿ ಮಹಾಸಭಾ ಬೀದರ
ಸಂತೋಷ ಶಿಂಧೆ, ತಾಲೂಕಾ ಅಧ್ಯಕ್ಷರು ಒಳಮೀಸಲಾತಿ ಸಮನ್ವಯ ಸಮಿತಿ ಔರಾದ (ಬಾ) ದೇವರಾಜ ಆರ್ಯ, ನಿರ್ದೇಶಕರು, ಛಲವಾದಿ ಮಹಾಸಭೆ ಬೀದರ ಭರತ ಕಾಂಬ್ಳೆ, ಜಿಲ್ಲಾಧ್ಯಕ್ಷರು, ಆಲ್ ಇಂಡಿಯಾ ಪ್ಯಾಂಥರ ಸೇನಾ ಬೀದರ










