Home » ಬೀದರ ಜಿಲ್ಲೆ » ಭಂಡಾರಕುಮಟಾ: ಗ್ರಾಮ ಸ್ವರಾಜ್ ಯೋಜನೆಯ ಅನುದಾನ ದುರ್ಬಳಕೆ, ಮಾಜಿ ಅಧ್ಯಕ್ಷ ಮತ್ತು ನಿವೃತ್ತಿ ಪಿಡಿಒ ಜೈಲು.

ಭಂಡಾರಕುಮಟಾ: ಗ್ರಾಮ ಸ್ವರಾಜ್ ಯೋಜನೆಯ ಅನುದಾನ ದುರ್ಬಳಕೆ, ಮಾಜಿ ಅಧ್ಯಕ್ಷ ಮತ್ತು ನಿವೃತ್ತಿ ಪಿಡಿಒ ಜೈಲು.

ಬೀದರ್: ಗ್ರಾಮ ಸ್ವರಾಜ್ ಯೋಜನೆಯ ಅನುದಾನ ದುರ್ಬಳಕೆ ಮಾಡಿಕೊಂಡು ಸರ್ಕಾರವನ್ನು ವಂಚಿಸಿರುವುದು ರುಜುವಾತಾದ ಕಾರಣ ಔರಾದ ಬಿ ತಾಲ್ಲೂಕಿನ ಭಂಡಾರ ಕುಮಟಾ ಗ್ರಾಮ ಪಂಚಾಯಿತಿಯ ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಮಾಜಿ ಅಧ್ಯಕ್ಷೆಗೆ ನಗರದ ಜಿಲ್ಲಾ ಪ್ರಧಾನ ಮತ್ತು ಸೆಶೆನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿ.ಎಮ್. ಆನಂದಶೆಟ್ಟಿ ಅವರು ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ನಿವೃತ್ತ ಪಿಡಿಒ ಅಶೋಕ ನರಸಿಂಗ್‌ರಾವ್ ಸೋಲಂಕೆಗೆ ಗರಿಷ್ಠ 5ವರ್ಷ ಜೈಲು ಶಿಕ್ಷೆ ಮತ್ತು ಪಂಚಾಯಿತಿ ಮಾಜಿ ಅಧ್ಯಕ್ಷೆ ಶೇಷಾಬಾಯಿಗೆ ಗರಿಷ್ಠ 2 ವರ್ಷ ಗರಿಷ್ಠ ಜೈಲು ಶಿಕ್ಷೆ ವಿಧಿಸಿ ಮೇ 9ರಂದು ಆದೇಶ ನೀಡಿದ್ದಾರೆ.

ಗ್ರಾಮ ಸ್ವರಾಜ ಯೋಜನೆಯಡಿ ರಾಜ್ಯ ಸರ್ಕಾರವು ₹5.19 ಲಕ್ಷ ಅನುದಾನ ಭಂಡಾರ ಕುಮಟಾ ಗ್ರಾಮ ಪಂಚಾಯಿತಿ ಖಾತೆಗೆ ಜಮೆ ಮಾಡಿತ್ತು. ಇದರಲ್ಲಿ ₹3.25 ಲಕ್ಷ ದುರ್ಬಳಕೆ ಮಾಡಿಕೊಂಡು

ಸರ್ಕಾರವನ್ನು ವಂಚಿಸಿದ್ದರು. 2014ರ ಜುಲೈ 8ರಂದು ಘಟನೆ ನಡೆದಿತ್ತು. ಅಂದಿನ ಬೀದರ್ ಜಿಲ್ಲಾ ಪಂಚಾಯಿತಿ ಸಿಇಒ ತನಿಖೆ ಕೈಗೊಂಡಿದ್ದರು. ಬಳಿಕ ಇಬ್ಬರ ವಿರುದ್ಧ ಠಾಣೆಗೆ ದೂರು ಕೊಡಲಾಗಿತ್ತು. ಬಳಿಕ ಭಾಲ್ಕಿ ಡಿವೈಎಸ್ಪಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

* 409, 13(1), 13(2), 120ಬಿ ಅಡಿ ₹ 6 ಲಕ್ಷ ದಂಡ ಹಾಗೂ ದಂಡ ಕಟ್ಟಲು ಆಗದಿದ್ದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಬೇಕು. ಶೇಷಾಬಾಯಿಗೆ ₹3 ಲಕ್ಷ ದಂಡ ಹಾಗೂ ಒಂದು ವೇಳೆ ದಂಡ ಕಟ್ಟಲಾಗದಿದ್ದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This