Home » ಬೀದರ ಜಿಲ್ಲೆ » 25ನೇ ಮೇ ರಂದು ಬೀದರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ.

25ನೇ ಮೇ ರಂದು ಬೀದರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ  ಸದಸ್ಯ ಸ್ಥಾನಗಳಿಗೆ ಉಪಚುನಾವಣೆ.

ಬೀದರ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಗ್ರಾಮ ಪಂಚಾಯತಿಯಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಗೆ ದಿನಾಂಕ: 25-05-2025 ರಂದು ಮತದಾನ ನಡೆಯಲಿದ್ದು, ಸದರಿ ಉಪಚುನಾವಣೆ ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಹಾಗೂ ಚುನಾವಣೆ ಸಮಯದಲ್ಲಿ ಯಾವುದೇ ರೀತಿಯಾದಂತಹ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮಗಳು ಕೈಗೊಳ್ಳಬೇಕಾಗಿರುವುದರಿಂದ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ 10(ಬಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2020ರ ಕಲಂ 308 (ಎಸಿ) ರಂತೆ ಚುನಾವಣೆ ನಡೆಯಲಿರುವ ಕೆಳಕಂಡ ಗ್ರಾಮ ಪಂಚಾಯತಿಗಳ ಸಂಪೂರ್ಣ ವ್ಯಾಪ್ತಿ ದಿನಾಂಕ: 23-05-2025 ರ ಸಂಜೆ 5:00 ಗಂಟೆಯಿಂದ ದಿನಾಂಕ: 25-05-2025 ರ ಮಧ್ಯರಾತ್ರಿ 12:00 ಗಂಟೆಯವರೆಗೆ ಎಲ್ಲಾ ವಿಧದ ಅಬಕಾರಿ ಸನ್ನದುಗಳನ್ನು ಮುಚ್ಚಲು ಹಾಗೂ ಮಧ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ಮಾಡುವುದನ್ನು ನಿಷೇಧಿಸಿ ‘ಶುಷ್ಕ ದಿನ” ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಆದೇಶಿಸಿರುತ್ತಾರೆ.

ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತ ವಿವರ: ಬೀದರ ತಾಲ್ಲೂಕಿನ ಮರಕುಂದಾ ಗ್ರಾಮ ಪಂಚಾಯತ (01), ನಾಗೋರಾ ಗ್ರಾಮ ಪಂಚಾಯತ (01), ಬಗದಲ್ ಗ್ರಾಮ ಪಂಚಾಯತ (01), ಅಲಿಯಾಬಾದ.ಜೆ ಗ್ರಾಮ ಪಂಚಾಯತ (01), ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಗ್ರಾಮ ಪಂಚಾಯತ (01), ಭಾಲ್ಕಿ ತಾಲ್ಲೂಕಿನ ಮೇಹಕರ ಗ್ರಾಮ ಪಂಚಾಯತ (01), ಕುರುಬಖೇಳಗಿ ಗ್ರಾಮ ಪಂಚಾಯತ (01), ಔರಾದ ತಾಲ್ಲೂಕಿನ ಹೆಡಗಾಪೂರ ಗ್ರಾಮ ಪಂಚಾಯತ (01), ಏಕಂಬಾ ಗ್ರಾಮ ಪಂಚಾಯತ (04) ಹಾಗೂ ಹುಮನಾಬಾದ ತಾಲ್ಲೂಕಿನ ಮದರಗಾಂವ ಗ್ರಾಮ ಪಂಚಾಯತ (01), ನಂದಗಾಂವ ಗ್ರಾಮ ಪಂಚಾಯತ (07) ಸೇಟಿ ಒಟ್ಟು 11 ಗ್ರಾಮ ಪಂಚಾಯತಗಳಲ್ಲಿ 20 | ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This