ಗಡಿ ಜಿಲ್ಲೆ ಬೀದರನಲ್ಲಿ 1,504 ಹುದ್ದೆಗಳು ಖಾಲಿ ಶಿಕ್ಷಣ ಗುಣಮಟ್ಟ ಕುಸಿತ, ಮಕ್ಕಳ ಭವಿಷ್ಯಕ್ಕೆ ಪೆಟ್ಟು
ಬೀದರ: ವರ್ಷದಿಂದ ವರ್ಷಕ್ಕೆ ಬೀದರ ಜಿಲ್ಲೆ ಎಸ್ಸೆಸ್ಸೆಲ್ಸಿ
ಪರೀಕ್ಷೆಯಲ್ಲಿ ಕನಿಷ್ಟ ಫಲಿತಾಂಶಕ್ಕೆ ಕುಸಿಯುತ್ತಿದ್ದು, ಇದಕ್ಕೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯೇ ಕಾರಣವಾಗಿದೆ. ಗಡಿನಾಡಲ್ಲಿ ಪ್ರಾಥಮಿಕ-ಪ್ರೌಢಶಾಲೆ ಸೇರಿ ಶೇ.20ಕ್ಕಿಂತ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುತ್ತಿದೆ. ಬೀದರ ಸೇರಿದಂತೆ ವಿಶೇಷ ಸ್ಥಾನ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಸರಕಾರ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಪಠ್ಯ ಬೋಧನೆಗೆ ಅತಿಥಿ ಶಿಕ್ಷಕರ ಮೇಲೆ ಅವಲಂಬನೆ ಆಗಬೇಕಾದ ಸ್ಥಿತಿ ಇದೆ. ಜಿಲ್ಲೆಯಲ್ಲಿ ಪ್ರಾಥಮಿಕ- ಪ್ರೌಢಶಾಲೆ ಒಳಗೊಂಡು ಒಟ್ಟು 7,457 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 5,953 ಶಿಕ್ಷಕರ ನೇಮಕಾತಿ ಆಗಿದೆ. ಇನ್ನುಳಿದ 1,504 ಹುದ್ದೆಗಳು ಖಾಲಿ ಇವೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ರಾಜ್ಯ ಸರ್ಕಾರ ಕೆಕೆಆರ್ ಡಿಬಿ ಮೂಲಕ “ಅಕ್ಷರ ಆವಿಷ್ಕಾರ’ ಯೋಜನೆಯಡಿ ಕೋಟ್ಯಂ ತರ ರೂ. ವೆಚ್ಚ ಮಾಡಲಾ ಗುತ್ತಿದೆ. ಆದರೆ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬಲು ಮಾತ್ರ ಇಚ್ಛಾಶಕ್ತಿ ತೋರುತ್ತಿಲ್ಲ.
ಅದಕ್ಕೆ ಪೂರಕವಾಗಿ ಜಿಲ್ಲೆಯ ಸಚಿವರು, ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ಮುಂದಾಗುತ್ತಿಲ್ಲ.
ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ 5,789
ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡ ಲಾಗಿದ್ದು, ಅದರಲ್ಲಿ 4,710 ಶಿಕ್ಷಕರ ನೇಮಕಾತಿಯಾಗಿದ್ದು, 1,079 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಪ್ರೌಢಶಾಲಾ ವಿಭಾಗದಲ್ಲಿ 1,668 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 1,243 ಶಿಕ್ಷಕರ ನೇಮಕಾತಿ ಆಗಿದೆ. ಇನ್ನೂ 425 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಎರಡು ವಿಭಾಗ ಸೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಸವಕಲ್ಯಾಣ ತಾಲೂಕಿನಲ್ಲಿ 455, ಔರಾದನಲ್ಲಿ 342 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಭಾಲ್ಕಿ 262, ಬೀದರ 134, ಹುಮನಾಬಾದ್ 320 ಹುದ್ದೆಗಳು ಖಾಲಿ ಇವೆ.
ಪ್ರಾಥಮಿಕ ಶಾಲಾ ವಿಭಾಗ
ತಾಲೂಕು ಹುದ್ದೆ ಭರ್ತಿ ಖಾಲಿ
ಔರಾದ 1267 1020 247
ಬಸವಕಲ್ಯಾಣ 1223 897 326
ಭಾಲ್ಕಿ 1009 819 190
ಬೀದರ 1262 1158 104
ಹುಮನಾಬಾದ್ 1028 816 212
ಒಟ್ಟು 5789 4710 1079
ಜಿಲ್ಲೆಯಲ್ಲಿ ವಿಶೇಷವಾಗಿ ವಿಜ್ಞಾನ, ಗಣಿತ, ಇಂಗ್ಲಿಷ್ ವಿಷಯಗಳ ಶಿಕ್ಷಕರ ಅಭಾವ ಹೆಚ್ಚಿದೆ. ಇದರಿಂದ ಈ ವಿಷಯಗಳಲ್ಲಿ ವಿದ್ಯಾರ್ಥಿಗಳು ಕಡಿಮೆ ಸಾಧನೆ ಮಾಡುವುದು ಕಂಡು ಬಂದಿದೆ. ಈ ವಿಷಯಗಳಲ್ಲೇ ಹೆಚ್ಚಿನ ವೈಫಲ್ಯ ಕಾಣುತ್ತಿದ್ದೇವೆ. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. ಆದರೆ
ಅತಿಥಿ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. ಆದರೆ ಕಳೆದ ಎರಡೂರು ವರ್ಷಗಳಿಂದ ಅವರ ವೇತನ ಪರಿಷ್ಕರಿಸಿಲ್ಲ. ಇದು ಮಕ್ಕಳ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರ ಎಚ್ಚೆತ್ತುಕೊಂಡು ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಮುಂದಾಗಬೇಕಿದೆ.
ಪ್ರೌಢಶಾಲಾ ವಿಭಾಗ
ತಾಲೂಕು ಹುದ್ದೆ ಭರ್ತಿ ಖಾಲಿ
ಔರಾದ 310 215 95
ಬಸವಕಲ್ಯಾಣ 388 268 120
ಭಾಲ್ಕಿ 291 219 72
ಬೀದರ 325 295 30
ಹುಮನಾಬಾದ್ 354 246 108
ಒಟ್ಟು 1668 1243 425
ಬೀದರ ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸರ್ಕಾರದ ಆದೇಶ ಬಂದ ನಂತರ ಅತಿಥಿ ಶಿಕ್ಷಕರನ್ನು ನೇಮಿಸಲಾಗುವುದು. ಕಾಯಂ ಹುದ್ದೆಗಳ ಭರ್ತಿ ಮಾಡುವುದು ಸರ್ಕಾರದ ಮಟ್ಟದಲ್ಲಿ ನಡೆಯಲಿದೆ.
ಡಿಡಿಪಿಐ, ಬೀದರ







