ಔರಾದ : ನಿನ್ನೆ ಶನಿವಾರ 10 ಮೇ ರಂದು ಔರಾದ ಪಟ್ಟನದಲ್ಲಿ ಜನರಿಗೆ ಓಳ ಮೀಸಲಾತಿ ಬಗ್ಗೆ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ (ರಿ) ನಂ. 12, 1ನೇ ಮಹಡಿ, ಮಾರುತಿ ನಿಲಯ, ಆರ್.ವಿ. ಲೇಔಟ್, ಕುಮಾರಕೃಪಾ ಪಶ್ಚಿಮ, ಬೆಂಗಳೂರು. ಇವರು ಹೊರಡಿಸಿದ “ಜಾಗ್ರತಿ ಪತ್ರಿಕೆ” ನೀಡುವ ಮುಖಾಂತರ ಔರಾದನಲ್ಲಿ ಮಾಹಿತಿಯನ್ನು ನೀಡಿದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ, ಈಗಾಗಲೇ ಕರ್ನಾಟಕ ಸರ್ಕಾರವು ಒಳ ಮೀಸಲಾತಿ ಜಾರಿಗೊಳಿಸಲು ಕಾರ್ಯಪ್ರವೃತ್ತವಾಗಿದೆ. ಆದರೆ, ಒಳಮೀಸಲಾತಿ ಹಂಚಿಕೆ ವಿಚಾರವಾಗಿ ಸರಿಯಾದ ಅಂಕಿ ಅಂಶಗಳನ್ನು ಕಲೆ ಹಾಕಿ ಮೀಸಲಾತಿ ಹಂಚಿಕೆ ಮಾಡುವಲ್ಲಿ ಹಲವು ಸಮಸ್ಯೆಗಳು ಉಂಟಾಗಿರುವುದರಿಂದ, ದಲಿತ ಸಮುದಾಯದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ರಾಜ್ಯ ಸರ್ಕಾರವು ಮುಂದಾಗಿದ್ದು, ಈ ದಿಕ್ಕಿನಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ ದಾಸ್ರವರ, ಏಕ ಸದಸ್ಯ ಆಯೋಗವನ್ನು ನೇಮಿಸಲಾಗಿದೆ. ಸದರಿ ಆಯೋಗವು ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳಿಗೆ ಸಮರ್ಪಕವಾಗಿ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲು ಅವಕಾಶವಾಗುವಂತೆ ಆಯೋಗಕ್ಕೆ ಸರಿಯಾದ ಮಾಹಿತಿಯನ್ನು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಆದ್ದರಿಂದ ಆಯೋಗವು ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಕೋರುವ ಮಾಹಿತಿಯನ್ನು ಹೇಗೆ ನೀಡಬೇಕು ಎಂಬ ಬಗ್ಗೆ ಈ ಮೂಲಕ ಸಮುದಾಯದ ಕುಲಬಾಂಧವರಿಗೆ ತಿಳಿಪಡಿಸಲಾಗುತ್ತಿದೆ. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳ ಪೈಕಿ ಈ ಕೆಳಗಿನ ಜಾತಿಗಳು ಹೊಲೆಯ/ಬಲಗೈ/ಛಲವಾದಿ/ಮಹರ್/ಪರಯ್ಯ/ಮಾಲಾ ಗುಂಪಿಗೆ ಸಂಬಂಧಿಸಿದ ಸಮಾನಾಂತರ ಜಾತಿಗಳಾಗಿರುತ್ತವೆ.
ಕರ್ನಾಟಕ ಸರ್ಕಾರದಿಂದ ಜಾತಿ ಸಮೀಕ್ಷೆ ಮಾಡಲು ನೇಮಿಸಲಾಗುವ ಗಣತಿದಾರರು ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರ ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ಮಾಡುವವರಿದ್ದಾರೆ. ಈ ಸಂದರ್ಭದಲ್ಲಿ ಜಾತಿ ಸಮೀಕ್ಷೆಯ ನಮೂನೆಯಲ್ಲಿ ‘ಜಾತಿ’ ಮತ್ತು ‘ಮೂಲ ಜಾತಿ/ಉಪ ಜಾತಿ’ ಗಳನ್ನು ಕಡ್ಡಾಯವಾಗಿ ನಮೂದಿಸಲು ಕೋರುತ್ತಾರೆ. ಇವುಗಳನ್ನು ಯಾರ್ಯಾರು ಹೇಗೆ-ಹೇಗೆ ನಮೂದಿಸಬೇಕೆಂಬುದನ್ನ ವಿವರವಾಗಿ ವಿವರಿಸಲಾಗಿದೆ.
“ಚಲವಾದಿ ಮಹಾಸಭಾ ಸಮನ್ವಯ ಸಮಿತಿ ಔರಾದ ಘಟಕ”
ಔರಾದ ಪಟ್ಟಣದ ಎಲ್ಲ ಬಡಾವಣೆಯಲ್ಲಿ ಬಲಗೈ ಸಮುದಾಯದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಒಳ ಮೀಸಲಾತಿ ಜಾತಿವಾರು ಜನಗಣತಿಯ ಸರ್ವೆಯಲ್ಲಿ ಪರಿಶಿಷ್ಟ ಹೊಲಿಯಾ ಜಾತಿ ಎಂದು ಸ್ಪಷ್ಟವಾಗಿ ನೋಂದಾಯಿಸಬೇಕು ಎಂದು ಪ್ರತಿ ಮನೆಗೆ ತೆರಳಿ ಕರಪತ್ರ ವಿತರಿಸಿ ಜಾಗೃತಿ ಮೂಡಿಸಲಾಯಿತು.
ತಾಲೂಕ ಅಧ್ಯಕ್ಷರು ಶ್ರೀ ಸಂತೋಷ್ ಕೆ ಶಿಂದೆ. ಅನಿಲ್ ಬುಜಂಗೆ, ಬಸವರಾಜ್ ಕಾಂಬಳೆ. ಪ್ರವೀಣ್ ಕಾರಂಜೆ ಚಲವಾದಿ ಮಹಾಸಭಾ ಸಮನ್ವಯ ಸಮಿತಿಯ ಔರಾದ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.







