Home » ಉದ್ಯೋಗ » UPSC ನೇಮಕಾತಿ 2025: ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

UPSC ನೇಮಕಾತಿ 2025: ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

ಬೆಂಗಳೂರು;ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ ಒದಗಿ ಬಂದಿದೆ. ಕೇಂದ್ರ ಲೋಕಸೇವಾ ಆಯೋಗ (UPSC) ಹಿರಿಯ ಪಶುವೈದ್ಯಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದ್ದು, ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಕೂಡಲೇ UPSC ವೆಬ್‌ಸೈಟ್ https://www.upsc.gov.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.ಈ ನೇಮಕಾತಿಯಡಿಯಲ್ಲಿ UPSC ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025ರ ಮೇ 15 ಎಂದು ನಿಗದಿಪಡಿಸಲಾಗಿದೆ. ಅಂತಿಮ ದಿನದವರೆಗೆ ಕಾಯದೇ, ಶೀಘ್ರದಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.ಈ ನೇಮಕಾತಿ ಅಭಿಯಾನದಲ್ಲಿ UPSC ಒಟ್ಟು 40 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದ್ದು, ಪ್ರಕಟಿತ ಹುದ್ದೆಗಳಲ್ಲಿ ಹಿರಿಯ ಪಶುವೈದ್ಯಾಧಿಕಾರಿ, ವಿಜ್ಞಾನಿ-ಬಿ, ವೈಜ್ಞಾನಿಕ ಅಧಿಕಾರಿ, ಎಂಜಿನಿಯರ್ ಮತ್ತಿತರ ಹುದ್ದೆಗಳು ಸೇರಿವೆ.ಇದರಲ್ಲಿ ವಿದ್ಯಾರ್ಹತೆ, ವಯೋಮಿತಿ, ಖಾಲಿ ಹುದ್ದೆಗಳ ಸಂಖ್ಯೆ ಮತ್ತು ಇತರ ಮಾಹಿತಿಗೆ UPSC ವೆಬ್‌ಸೈಟ್ ಭೇಟಿನೀಡಿ.

ನೇಮಕಾತಿ ಪೂರ್ಣ ವಿವರ ನೇಮಕಾತಿ ಸಂಸ್ಥೆ:ಕೇಂದ್ರ ಲೋಕಸೇವಾ ಆಯೋಗ (UPSC)

ಹುದ್ದೆಗಳ ಹೆಸರು: ಹಿರಿಯ ಪಶು ವೈಧ್ಯಾಧಿಕಾರಿ ಮತ್ತು ಇತರ

ಒಟ್ಟು ಹುದ್ದೆಗಳ ಸಂಖ್ಯೆ: 40

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಅರ್ಜಿ ಸಲ್ಲಿಕೆ

ವಿಳಾಸ: https://www.upsc.gov.in

ಅರ್ಜಿ ಸಲ್ಲಿಕೆ ಕೊನೆ ದಿನ: ಮೇ 15

ಮಾಸಿಕ ವೇತನ: ನಿಯಮಾನುಸಾರ

ಗರಿಷ್ಠ ವಯೋಮಿತಿ: ಹುದ್ದೆಗೆ ಅನುಗುಣವಾಗಿ 30 ರಿಂದ 38

ಅರ್ಜಿ ಶುಲ್ಕ

ಮಹಿಳಾ ಅಭ್ಯರ್ಥಿಗಳು, ಎಸ್‌ಸಿ/ಎಸ್‌ಟಿ ವರ್ಗದವರು ಮತ್ತು ಬೆಂಚ್‌ಮಾರ್ಕ್ ಅಂಗವಿಕಲರು ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿಯಿದ್ದಾರೆ.

ಇತರ ವರ್ಗದ ಅಭ್ಯರ್ಥಿಗಳಿಗೆ ರೂ.25/- ಅರ್ಜಿ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ.

ಪಾವತಿಸುವ ವಿಧಾನಗಳು

ಎಸ್‌ಬಿಐನ ಯಾವುದೇ ಶಾಖೆಯಲ್ಲಿ ನಗದು ಠೇವಣಿ

ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಸೌಲಭ್ಯ

ವೀಸಾ/ಮಾಸ್ಟರ್/ರುಪೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ

ಯುಪಿಐ (UPI) ಪಾವತಿ

ಪ್ರಮುಖ ದಿನಾಂಕ

ಅರ್ಜಿಯ ಆರಂಭ ದಿನಾಂಕ: ಈಗಾಗಲೇ ಪ್ರಾರಂಭವಾಗಿದೆ

ಅರ್ಜಿಯ ಕೊನೆ ದಿನಾಂಕ: 2025 ಮೇ 15

UPSC ಗೆ ಅರ್ಜಿ ಸಲ್ಲಿಸುವ ವಿಧಾನ:

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ upsc.gov.in

‘Recruitments’ ವಿಭಾಗವನ್ನು ಆಯ್ಕೆಮಾಡಿ ಹಾಗೂ ಸಂಬಂಧಿತ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹುದ್ದೆಯನ್ನು ಆಯ್ಕೆಮಾಡಿ ಮತ್ತು ಅರ್ಜಿ ನಮೂನೆಯನ್ನು ಶ್ರದ್ಧೆಯಿಂದ ಭರ್ತಿ ಮಾಡಿ.

ಅಗತ್ಯ ದಾಖಲೆಗಳನ್ನು ಸಕಾಲದಲ್ಲಿ ಸ್ಕ್ಯಾನ್ ಮಾಡಿ ಹಾಗೂ ಅಪ್ಲೋಡ್ ಮಾಡಿ.

ಅರ್ಜಿ ಶುಲ್ಕವನ್ನು ಪಾವತಿಸಿ, ನಂತರ ಫೈನಲ್ ಸಬ್ಮಿಷನ್ ಮಾಡಿ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This