ಮೈಸೂರು: ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ (ಎಚ್‌ಡಿ ಕೋಟೆ) ತಾಲೂಕಿನ ಸೊಳ್ಳೆಪುರ ಗ್ರಾಮದಲ್ಲಿ ಭಾರತ ಸರ್ಕಾರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ವತಿಯಿಂದ ಏಕಲವ್ಯ ಮಾದರಿ ವಸತಿ ಶಾಲೆ ನಿರ್ವಹಿಸಲಾಗುತ್ತಿದೆ. ಈ ಶಾಲೆಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರು, ಉಪನ್ಯಾಸಕರು, ಭೋದಕೇತರ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ
ಅರ್ಹ ಆಸಕ್ತರು ಈ ಕೂಡಲೇ ಅರ್ಜಿಗಳನ್ನು ಸಲ್ಲಿಸಬೇಕಿದೆ.
ಏಕಲವ್ಯ ಮಾದರಿ ವಸತಿ ಶಾಲೆಯು ಕರ್ನಾಟಕ ಪರಿಶಿಷ್ಟ ಪಂಗಡಗಳ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಕಾರ್ಯ ನಿರ್ವಹಿಸಲಾಗುತ್ತಿದೆ. ಇಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಕೆಳಗಿನ ವಿದ್ಯಾರ್ಹತೆ ಹೊಂದಿರುವವರು ಕೂಡಲೇ ಅರ್ಜಿ ಹಾಕಬೇಕು.
ನೇಮಕಾತಿ ವಿವರ
ನೇಮಕಾತಿ ಸಂಸ್ಥೆ: ಏಕಲವ್ಯ ಮಾದರಿ ವಸತಿ ಶಾಲೆ
ಹುದ್ದೆಗಳು ಹೆಸರು: ಶಿಕ್ಷಕ, ಉಪನ್ಯಾಸಕ, ಬೋಧಕೇತರ ಹುದ್ದೆ
ಮಾಸಿಕ ವೇತನ: ಗರಿಷ್ಠ 42000 ರೂ.
ಅರ್ಜಿ ಸಲ್ಲಿಕೆ ಕೊನೆ ದಿನ: ಏಪ್ರಿಲ್ 25
ಸ್ಥಳ: ಎಚ್‌ಡಿ ಕೋಟಿ ತಾಲೂಕು, ಮೈಸೂರು
ವಿದ್ಯಾರ್ಹತೆ
ಅಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಈ ವಿಷಯದ ಮೇಲೆ ತರಬೇತಿ ಪಡೆದ ಪದವೀಧರ ಶಿಕ್ಷಕರು (TGT) ಆಗಿರಬೇಕು. ಕನ್ನಡ ,ಇಂಗ್ಲೀಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಸಂಬಂಧಿಸಿದ ವಿಷಯದಲ್ಲಿ ಪದವಿ ಪಡೆದಿರಬೇಕು. ಬಿ.ಇಡಿ , ಸಿಟಿಐಟಿ ಕಡ್ಡಾಯಗೊಳಿಸಲಾಗಿದೆ. ಸಂಗೀತ ವಿಷಯದಲ್ಲಿ ಪದವಿ ಪಡೆದವರು, ದೈಹಿಕ ಶಿಕ್ಷಣ ಶಿಕ್ಷಕರು (ಮಹಿಳೆ) ಅರ್ಜಿ ಸಲ್ಲಿಸಬೇಕು. ಈ ಮಹಿಳಾ ಶಿಕ್ಷಕಿ ದೈಹಿಕ ಶಿಕ್ಷಣ ವಿಷಯದಲ್ಲಿ ಪದವಿ ಪಡೆದಿರುವುದು ಕಡ್ಡಾಯ ಎಂದು ಶಾಲೆ ತಿಳಿಸಿದೆ.
ಯಾವ ಶಿಕ್ಷಕರ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸುತ್ತೀರೋ ಆ ವಿಷಯದಲ್ಲಿ ಪದವಿ ಪಡದಿರಬೇಕು. ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಸಹ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ವಿಜ್ಞಾನ, ಎಂಎಸ್ಸಿ ಕಂಪ್ಯೂಟರ್ ವಿಜ್ಞಾನ ಅಥವಾ ಎಂಟೆಕ್ ಪದವಿ ಹೊಂದಿರಬೇಕು ಎಂದು ತಿಳಿಸಲಾಗಿದೆ.
ವೇತನ ಹೇಗೆ?
ಅರ್ಜಿ ಸಲ್ಲಿಕೆಗೆ ಏಪ್ರಿಲ್ 25 ಕೊನೆಯ ದಿನವಾಗಿದೆ. ನೀವು ಇಂದೇ ಅರ್ಜಿ ಸಲ್ಲಿಸಬಹುದು. ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಪ್ರತಿ ಗಂಟೆಗೆ ಅಥವಾ ಒಂದು ಗಂಟೆಯ ತರಗತಿ ತೆಗೆದುಕೊಂಡು ಅವರಿಗೆ 300 ರೂಪಾಯಿಯಂತೆ ವೇತನ ನೀಡಲಾಗುತ್ತದೆ. ಅದೇ ರೀತಿ ಉಪನ್ಯಾಸಕರಿಗೆ ಪ್ರತಿ ಗಂಟೆಗೆ 320 ರೂಪಾಯಿಯಂತೆ ಗರಿಷ್ಠ 42,000 ರೂಪಾಯಿವರೆಗೆ ವೇತನ ನೀಡಲಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ವಿಶೇಷ ತರಗತಿ ಸಹ ತೆಗೆದುಕೊಳ್ಳಬಹುದಾಗಿದೆ.
ಕೊನೆಯ ದಿನದಂದು ಬೆಳಗ್ಗೆ 9 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಈ ಕುರಿತು ಮಾಹಿತಿಗಾಗಿ ಮೊಬೈಲ್ 8088098700, 7206793200 ಸಂಖ್ಯೆಗೆ ಸಂಪರ್ಕಿಸುವಂತೆ ಶಾಲಾ ಪ್ರಾಂಶುಪಾಲರು ತಿಳಿಸಿದ್ದಾರೆ.







