Home » ಬೀದರ ಜಿಲ್ಲೆ » ಔರಾದ( ಬಿ): ಸಾರ್ವಜನಿಕರ ಕಡೆಗೆ ಗಮನ ಕೂಡಲಾಗದ ಪಟ್ಟಣ ಪಂಚಾಯತ ಅಧಿಕಾರಿ, ತಹಸೀಲ್ದಾರರಿಗೆ ಮನವಿ.

ಔರಾದ( ಬಿ): ಸಾರ್ವಜನಿಕರ ಕಡೆಗೆ ಗಮನ ಕೂಡಲಾಗದ ಪಟ್ಟಣ ಪಂಚಾಯತ ಅಧಿಕಾರಿ, ತಹಸೀಲ್ದಾರರಿಗೆ ಮನವಿ.

ಔರಾದ (ಬಿ)ಪಟ್ಟಣದ ವಾರ್ಡ ನಂ 20 ತಾರೆ ಲೇಔಟ್‌ನಲ್ಲಿ ಮೋರಾರ್ಜಿ ವಸತಿ ಶಾಲೆ ಹತ್ತಿರ ಶೌಚಾಲಯದ ನೀರು ರಸ್ತೆ ಮೇಲೆ ಬರುತ್ತಿದ್ದು. ಇದರಿಂದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಾಂಕ್ರಾಮೀಕ ರೋಗ ಹರಡುವ ಸಂಭವವಿದ್ದು, ಸದರಿ ಚರಂಡಿ ಶೌಚಾಲಯದ ನೀರನ್ನು ಬೇರೆಕಡೆಗೆ ಹೋಗುವಂತೆ ಸೂಕ್ತ ವ್ಯವಸ್ಥೆ ಮಾಡಿಕೊಡುವ

ಉಲ್ಲೇಖ : 1)ಸದರಿ ವಿಷಯದ ಬಗ್ಗೆ ಮುಖ್ಯಾಧಿಕಾರಿಗಳು ಪಟ್ಟಣದ ಪಂಚಾಯತ ಔರಾದ (ಬಿ) ಯವರಿಗೆ ಮನವಿ ಪತ್ರ ಸಲ್ಲಿಸಿದ ದಿನಾಂಕ: 06/02/2024 ಮತ್ತು 29/07/-2024 ಹಾಗೂ 18/09/2024 ಮನವಿ ಸಲ್ಲಿಸಿದರು ಇದುವರೆಗೆ ಯಾವುದೇ ಕ್ರಮ ಕೈಕೊಂಡಿಲ್ಲ.

ಈ ಉಲ್ಲೇಖಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ನಾನು ಲಕ್ಷ್ಮಣ ತಂದೆ ಸುಭಾಷ ದೇವಕತ್ತೆ ಗ್ರಾಮ ಔರಾದ (ಬಿ) ವಿನಂತಿಸಿಕೊಳ್ಳುವುದೇನೆಂದರೆ ಔರಾದ (ಬಿ) ಪಟ್ಟಣದ ವಾರ್ಡ ನಂ 20 ತಾರೆ’ ಲೇಔಟ್‌ನಲ್ಲಿ ಮೋರಾರ್ಜಿ ವಸತಿ ಶಾಲೆ ಹತ್ತಿರ ಶೌಚಾಲಯದ ನೀರು ರಸ್ತೆ ಮೇಲೆ ಬರುತ್ತಿದ್ದು, ಇದರಿಂದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಾಂಕ್ರಾಮೀಕ ರೋಗ ಹರಡುವ ಸಂಭವವಿದ್ದು. ಇದರ ಬಗ್ಗೆ ಉಲ್ಲೇಖ 1 ರನ್ವಯ ಮನವಿ ಪತ್ರದ ಮುಖಾಂತರ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ ಔರಾದ (ಬಿ) ಯವರಿಗೆ ಗಮನ ಹರಿಸಿದರು ಕೊಡ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಆದುದ್ದರಿಂದ ತಕ್ಷಣ ಬೇಡಿಕೆ ಇಡೇರದಿದ್ದಲ್ಲಿ ದಿನಾಂಕ : 21/04/2025 ರಂದು ಮುಂಜಾನೆ 10:00 ಗಂಟೆ ಯಿಂದ 01:00 ಗಂಟೆಯ ವರೆಗೆ ಔರಾದ (ಬಿ) ಪಟ್ಟಣ ಪಂಚಾಯತಿ ಕಾರ್ಯಾಲಯಕ್ಕೆ ಬೀಗ್ ಚಡೇದು ಬೇಡಿಕೆ ಮಂಡಿಸಲಾಗುವುದು. ದಯಾಮಾಡಿ ಕ್ರಮ ಕೈಗೊಳ್ಳಬೇಕಾಗಿ ತಾಸೀಲ್ದಾರರಿಗೆ ಪತ್ರದ ಮುಖಾಂತರ ಮನವಿ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This