ವಿದ್ಯಾರ್ಥಿಗಳ ಉದ್ಯೋಗ ನೇಮಕಾತಿ.
ಔರಾದ (ಬಾ) ಪಟ್ಟಣದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಪ್ರಭುಚರಣ, ಕು.ಮುಸ್ಕಾನ್, ಕು. ಸಂಧ್ಯಾರಾಣಿ ಅವರು ಬೀದರ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2024-25ನೆ ಸಾಲಿಗಾಗಿ ಏರ್ಪಡಿಸಿದ್ದ ಕ್ಯಾಂಪಸ್ ಸಂದರ್ಶನದಲ್ಲಿ ಕಲ್ಪತರು ಪ್ರೈವೇಟ್ ಲಿಮಿಟೆಡ್ ಗೆ ಆಯ್ಕೆಯಾಗಿದ್ದು, ಪ್ರಾಂಶುಪಾಲರು ಡಾll ಸಂಜೀವಕುಮಾರ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಂಶುಪಾಲರು ಗ್ರಾಮೀಣ ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜು ಭವಿಷ್ಯ ರೂಪಿಸಿಕೊಳ್ಳಲು ಸಹಾಯಕವಾಗಿದ್ದು ಗ್ರಾಮೀಣ ವಿದ್ಯಾರ್ಥಿಗಳು ಕಾಲೇಜಿನ ಸದುಪಯೋಗ ಪಡಿಸಿಕೊಂಡು 10ನೆ ತರಗತಿ ಮುಗಿಸಿದ ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಲು ತಾಂತ್ರಿಕ ಶಿಕ್ಷಣ ಅಗತ್ಯವಾಗಿದೆ, ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕರಿಸುತ್ತಿರುವ ಎಲ್ಲ ಸಿಬ್ಬಂದಿಗಳನ್ನು ಸ್ಲಾಘಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಿವಿಲ್ ಇಂಜಿನೀರಿಂಗ್ ವಿಭಾಗಾಧಿಕಾರಿಗಳಾದ ಶ್ರೀ ಕಾಳೆ ಹಣಮಂತ, ಶ್ರೀ ವಿಜಯಶೆಟ್ಟಿ ಹಾಗೂ ಉಪನ್ಯಾಸಕರುಗಳಾದ ಸಂದೀಪ್ ಕುಲಕರ್ಣಿ,ಆಶಿಷ್ ಕುಮಾರ್ ಶೇಳಕೆ, ಸುಮಿತಾ ಜೆ, ಅಂಬಿಕಾ ಎಂ. ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.







