ಔರಾದ ಪಟ್ಟಣದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಸಭೆ ನಡಿದಿದ್ದು ಸರಕಾರಿ ಕಾಲೇಜಿನಲ್ಲಿ ಪಾಠ ಪ್ರವಚನ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸಮಸ್ಯೆ, ಸಂಘದ ಬಲವರ್ಧನೆ ಬಗ್ಗೆ ಚರ್ಚಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷರಾದ ಪ್ರವೀಣ ಮೀರಾಗಂಜಕರ್ ಅವರು ಮಾತನಾಡಿ ನಮ್ಮ ಸಮಸ್ಯೆಗಳ ಪರಿಹಾರ ಹಾಗೂ ಹಕ್ಕುಗಳನ್ನು ಪಡೆಯಲು ಎಲ್ಲ ಅತಿಥಿ ಉಪನ್ಯಾಸಕರು ಸಂಘಟಿತರಾಗಬೇಕು ಎಂದು ನುಡಿದರು.
ಇದೇ ಸಮಯದಲ್ಲಿ ಔರಾದ ತಾಲೂಕಿನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷರು,ಜಿಲ್ಲಾ ಜಂಟಿ ಕಾರ್ಯದರ್ಶಿ ಸಂತೋಷ್, ಸಂಘಟನಾ ಕಾರ್ಯದರ್ಶಿ ಕೀರ್ತಿ,ಜಿಲ್ಲಾ ಕೋಶಾಧ್ಯಕ್ಷ ಅಶ್ವಿನಿ ಸುನೀಲ್ ಅವರ ನೇತೃತ್ವದಲ್ಲಿ ನಡೆಯಿತು, ನೂತನ ಅಧ್ಯಕ್ಷರಾಗಿ ಆಶಿಷ್ ಕುಮಾರ್ ಶೇಳಕೆ, ಉಪಾಧ್ಯಕ್ಷರಾಗಿ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪರಾಜ ಖರಾತ್, ಜಂಟಿ ಕಾರ್ಯದರ್ಶಿಯಾಗಿ ಶಿವಕುಮಾರ್, ಪೂರ್ಣಿಮಾ, ಸಂಘಟನಾ ಕಾರ್ಯದರ್ಶಿಯಾಗಿ ಅನಿಲ, ಲೂಸಿ, ಸುಮಿತಾ, ತಾಲೂಕು ಕೋಶಾಧ್ಯಕ್ಷರಾಗಿ ಅಭಿಷೇಕ್, ಸಲಹೆಗಾರರಾಗಿ ಸಂದೀಪ ಕುಲಕರ್ಣಿ, ಬಾಲಾಜಿ, ಅಶ್ವಿನಿ ಲಕ್ಕ, ರಾಣಿ, ಸದಸ್ಯರಾಗಿ ಸಂತೋಷಿ, ರಾಣಿ, ಅಂಬಿಕಾ ಅವರನ್ನು ಆಯ್ಕೆ ಮಾಡಲಾಯಿತು .







