Home » ದೇಶ » ಮಾರ್ಚ್‌ 13 ರಿಂದ 16 ವರೆಗೆ ಬ್ಯಾಂಕ್‌ಗಳಿಗೆ ರಜೆ: ಎಲ್ಲೆಲ್ಲಿ ತಿಳಿಯಿರಿ

ಮಾರ್ಚ್‌ 13 ರಿಂದ 16 ವರೆಗೆ ಬ್ಯಾಂಕ್‌ಗಳಿಗೆ ರಜೆ: ಎಲ್ಲೆಲ್ಲಿ ತಿಳಿಯಿರಿ

Bank Holiday: ಈ ವರ್ಷದ ಆರಂಭದಿಂದಲೂ ಇಲ್ಲಿವರೆಗೂ ಬ್ಯಾಂಕ್‌ ಉದ್ಯೋಗಿಗಳಿಗೆ ರಜೆಗಳ ಸರಮಾಲೆಯೇ ಸಿಕ್ಕಿವೆ. ಹಾಗೆಯೇ ಇದೀಗ ಇಂದು ಅಂದರೆ 13, 14, 15, 16ರಂದು ಈ ಭಾಗಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹಾಗಾದ್ರೆ ಎಲ್ಲೆಲ್ಲಿ ಹಾಗೂ ಯಾಕೆ ಎನ್ನುವ ಸಂಪೂರ್ಭ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಇದೇ ತಿಂಗಳು ಬರುವ ಹೋಳಿ ಹಬ್ಬಕ್ಕೆ ದೇಶದ ಹಲವು ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳು ಸೇರಿದಂತೆ ಬ್ಯಾಂಕ್‌ಗಳಿಗೂ ರಜೆ ಘೋಷಣ ಮಾಡಲಾಗಿದೆ. ಆದರೆ, ಆಯಾ ರಾಜ್ಯದ ಸಂಪ್ರದಾಯಗಳು ಮತ್ತು ನಿಯಮಗಳ ಪ್ರಕಾರ ಬ್ಯಾಂಕ್ ರಜೆಯ ದಿನಾಂಕಗಳು ಬದಲಾವಣೆ ಆಗಬಹುದು.

ಆರ್‌ಬಿಐ ಪ್ರಕಾರ, ಬ್ಯಾಂಕ್ ರಜಾದಿನಗಳನ್ನು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ನಿರ್ಧಾರ ಮಾಡಲಾಗುತ್ತದೆ. ಹೋಳಿ ಹಬ್ಬ ಮಾರ್ಚ್ 13 ಮತ್ತು 14ರಂದು ಬರುತ್ತದೆ. ಈ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಈ ಎರಡು ದಿನಗಳು ಬ್ಯಾಂಕ್‌ಗಳುಗೆ ರಜೆ ನೀಡಲಾಗುತ್ತದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This