Home » ರಾಜ್ಯ » ರಾಜ್ಯದ ಪಡಿತರ ಚೀಟಿ ತಿದ್ದುಪಡಿ ಮಾಡುವ ದಿನಾಂಕ ವಿಸ್ತರಣೆ

ರಾಜ್ಯದ ಪಡಿತರ ಚೀಟಿ ತಿದ್ದುಪಡಿ ಮಾಡುವ ದಿನಾಂಕ ವಿಸ್ತರಣೆ

ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಈಗಾಗಲೇ ರಾಜ್ಯದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಆದರೆ, ಕಾರ್ಡ್‌ ತಿದ್ದುಪಡಿ ದಿನಾಂಕವನ್ನು ಮಾತ್ರ ವಿಸ್ತರಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲಿವರೆಗೂ ಹಾಗೂ ಯಾವೆಲ್ಲಾ ದಾಖಲೆಗಳು ಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ರಾಜ್ಯದಲ್ಲಿ ಪಡಿತರ ಚೀಟಿದಾರರು, ತಮ್ಮ ಕಾರರ್ಡ್‌ಗೆ ಹೊಸದಾಗಿ ಸದಸ್ಯರ ಹೆಸರು ಸೇರ್ಪಡೆ, ತೆಗೆದು ಹಾಕುವುದಕ್ಕೆ, ಹೆಸರು ತಿದ್ದುಪಡಿ ಮಾಡುವುದಕ್ಕೆ ಆಹಾರ ಇಲಾಖೆಯಿಂದ ಮಾರ್ಚ್ 31ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾದ್ರೆ ತಿದ್ದುಪಡಿಗೆ ಯಾವೆಲ್ಲಾ ಪ್ರಮುಖ ದಾಖಲೆಗಳು ಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ತಿದ್ದುಪಡಿ ಸಮಯಗಳ ವಿವರ: ಪಡಿತರ ಚೀಟಿಗೆ ಹೊಸ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಮಾರ್ಚ್ 31ರ ವರೆಗೆ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ತಿದ್ದುಪಡಿಗೆ ಅವಕಾಶವಿದೆ. ಪಡಿತರ ಚೀಟಿದಾರರು ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ತೆಗೆಯುವುದಕ್ಕೆ ಅವಕಾಶ ನೀಡಲಾಗಿದೆ.

ತಿದ್ದುಪಡಿಗೆ ಎಲ್ಲೆಲ್ಲಿ ಅವಕಾಶ?: ಬೆಂಗಳೂರು ಒನ್, ಸೈಬರ್ ಸೆಂಟರ್‌ಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಕೆ ಮಾಡಬಹುದು. ಒಟ್ಟಿನಲ್ಲಿ ಸ್ವಯಂ ಆಗಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರೆ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗುವುದು. https://ahara.kar.nic.in ವೆಬ್‌ ಸೈಟ್‌ಗೆ ಭೇಡಿ ನೀಡಬಹುದಾಗಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This