Home » ಅಂತಾರಾಷ್ಟ್ರೀಯ » ಕೆನಡಾದ ಹೊಸ ಪ್ರಧಾನಿಯಾಗಿ ಮಾರ್ಕ್‌ ಕಾರ್ನಿ

ಕೆನಡಾದ ಹೊಸ ಪ್ರಧಾನಿಯಾಗಿ ಮಾರ್ಕ್‌ ಕಾರ್ನಿ

ಟೊರೊಂಟೊ: ಕೆನಡಾದ ಆಡಳಿತಾರೂಢ ಲಿಬರಲ್‌ ಪಕ್ಷವು ತಮ್ಮ ನಾಯಕರಾಗಿ ಕೇಂದ್ರ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮಾರ್ಕ್‌ ಕಾರ್ನಿ ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಅವರು ಕೆನಡಾದ ಮುಂದಿನ ಪ್ರಧಾನಿಯಾಗಲಿದ್ದಾರೆ.

ಮಾರ್ಕ್ ಕಾರ್ನಿ ಅವರು, ಭಾರತದ ಜೊತೆಗೆ  ಸಂಬಂಧವನ್ನು ಮರು ಸ್ಥಾಪಿಸುವ ಬಗ್ಗೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದ್ದಾರೆ, ಇದು ಒಂದು ಒಳ್ಳೆಯ ವಿಚಾರವನ್ನು ಮಂಡಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ವ್ಯಾಪಾರ ಯುದ್ಧ ಮತ್ತು ದೇಶವನ್ನು ವಶಪಡಿಸಿಕೊಳ್ಳುವ ಬೆದರಿಕೆಯನ್ನು ಎದುರಿಸುತ್ತಿರುವ ಮತ್ತು ಫೆಡರಲ್‌ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನೂತನ ಪ್ರಧಾನಿ ಆಯ್ಕೆ ಮಹತ್ವ ಪಡೆದುಕೊಂಡಿದೆ ಎಂದು ವರದಿ ತಿಳಿಸಿದೆ.

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಜನವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದರು. ಬ್ಯಾಂಕ್‌ ಆಫ್‌ ಕೆನಡಾದ ಅಧ್ಯಕ್ಷರಾಗಿದ್ದ ಕಾರ್ನಿ ಹಣಕಾಸು ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

2008ರ ಆರ್ಥಿಕ ಬಿಕ್ಕಟ್ಟಿನಿಂದ ಕೆನಡಾ ಇತರ ಹಲವು ದೇಶಗಳಿಗಿಂತ ವೇಗವಾಗಿ ಚೇತರಿಸಿಕೊಂಡ ನಂತರ ಅವರ ನೇಮಕಾತಿ ಪ್ರಶಂಸೆಗೆ ಪಾತ್ರವಾಗಿತ್ತು. ನಿಜ್ಜರ್‌ ಹತ್ಯೆಗೆ ಸಂಬಂಧೀಸಿದಂತೆ ಭಾರತ ಮತ್ತು ಕೆನಡಾದ ನಡುವಿನ ರಾಜತಾಂತ್ರಿಕ ಸಂಬಂಧ ಹಾಳಾಗಿತ್ತು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This