ರಾಜ್ಯದ ಗಡಿಜಿಲ್ಲೆ ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದ ಹೊರ ವಲಯದಲ್ಲಿ ಬಸ್ನಲ್ಲಿ ಶಕ್ತಿ ಯೋಜನೆಯಡಿ ಪ್ರಯಾಣ ಮಾಡುತ್ತಿದ್ದ ಯುವತಿಗೆ ಆಧಾರ್ ಕಾರ್ಡ್ ತೋರಿಸುವಂತೆ ಕನ್ನಡದಲ್ಲಿ ಕೇಳಿದ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡ ಹಲ್ಲೆ ಮಾಡಿದ್ದಾರೆ. ನೀವು ಮರಾಠಿಯಲ್ಲಿ ಮಾತನಾಡಬೇಕು ಎಂದು ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ್ದು, ಕಂಡಕ್ಟರ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.








