Home » ಉದ್ಯೋಗ » 21,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆ ಭರ್ತಿ ಶಿಫಾರಸು

21,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆ ಭರ್ತಿ ಶಿಫಾರಸು

ಬೆಳಗಾವಿ, ಡಿಸೆಂಬರ್ 17:ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿಯು ಸಲ್ಲಿಸಿರುವ ಸಮಗ್ರ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ 17,274 ಹುದ್ದೆಗಳು (38.2%) ಮತ್ತು ಪ್ರೌಢಶಾಲಾ ಶಿಕ್ಷಕರ 4,107 ಹುದ್ದೆಗಳು (34.8%) ಖಾಲಿ ಇರುವುದನ್ನು ಸರ್ಕಾರ ಗಮನಿಸಿದ್ದು, ಈ ಹುದ್ದೆಗಳ ಭರ್ತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು. ಶಿಕ್ಷಕರ ಕೊರತೆಯಿಂದಾಗಿ ಪ್ರಾಥಮಿಕ ಹಂತದಲ್ಲೇ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆಯಾಗುತ್ತಿದೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ

ಶೈಕ್ಷಣಿಕ ಸ್ಥಿತಿ – ಆತಂಕಕಾರಿ ಅಂಕಿಅಂಶಗಳು

ಕಲ್ಯಾಣ ಕರ್ನಾಟಕ ಪ್ರದೇಶದ ಒಟ್ಟು ಶಾಲೆಗಳಲ್ಲಿಃ

ಸರ್ಕಾರಿ ಶಾಲೆಗಳು – 57.35%

ಖಾಸಗಿ ಶಾಲೆಗಳು – 33.42%


7ನೇ ತರಗತಿಯ ನಂತರ ವಿದ್ಯಾರ್ಥಿಗಳ ಮುಂದುವರಿಕೆ ಪ್ರಮಾಣ ನಿರಂತರವಾಗಿ ಕುಸಿತ

9ರಿಂದ 10ನೇ ತರಗತಿಗೆ ಶೇ.12 ವಿದ್ಯಾರ್ಥಿಗಳು ತೇರ್ಗಡೆಯಾಗಲು ವಿಫಲ

ಮೊದಲ ಹಂತದ ಎಸ್‌ಎಸ್‌ಎಲ್ಸಿ ಫಲಿತಾಂಶ:
ಕಲ್ಯಾಣ ಕರ್ನಾಟಕ – 53.40%
ರಾಜ್ಯ ಸರಾಸರಿ – 66.14%


ಕಲಬುರಗಿ ಜಿಲ್ಲೆಯಲ್ಲಿ ಅತಿ ಕಡಿಮೆ ಫಲಿತಾಂಶ – 42.43%
ರಾಜ್ಯದ ಮೂರು ಪರೀಕ್ಷೆಗಳ ಸರಾಸರಿ – 79.97%
ವಿಜಯನಗರ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳು ರಾಜ್ಯ ಸರಾಸರಿಗಿಂತ ಕಡಿಮೆ ಫಲಿತಾಂಶ


❗ ಕಡಿಮೆ ಸಾಧನೆಗೆ ಪ್ರಮುಖ ಕಾರಣಗಳು
ವಿಷಯ ಶಿಕ್ಷಕರನ್ನೂ ಒಳಗೊಂಡಂತೆ ತೀವ್ರ ಶಿಕ್ಷಕರ ಕೊರತೆ,
ಬೋಧನಾ ವಿಧಾನಗಳಲ್ಲಿ ಸಾಮರ್ಥ್ಯ ವೃದ್ಧಿಯ ಕೊರತೆ,
ತರಬೇತಿ ಇಲ್ಲದ ಅತಿಥಿ ಶಿಕ್ಷಕರ ಅವಲಂಬನೆ

DIET ಸಂಸ್ಥೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯ ಕೊರತೆ,
BRC/CRCಗಳಿಂದ ಸಮರ್ಪಕ ಶೈಕ್ಷಣಿಕ ಮಾರ್ಗದರ್ಶನದ ಅಭಾವ,ಶಾಲಾ ಮೇಲ್ವಿಚಾರಣೆ ಮತ್ತು ಪರಿಶೀಲನೆಯಲ್ಲಿ ದುರ್ಬಲತೆ

Guest Teachers Recruitment

ಶಿಕ್ಷಣ ಸಚಿವರು 5,000 ಅತಿಥಿ ಶಿಕ್ಷಕರ ನೇಮಕಾತಿ ಕುರಿತು ಮಹತ್ವದ ಮಾಹಿತಿ ನೀಡಿದ್ದು, ತಾತ್ಕಾಲಿಕವಾಗಿ ಶಿಕ್ಷಕರ ಕೊರತೆ ನೀಗಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.


ತಜ್ಞರ ಸಮಿತಿಯ ಪ್ರಮುಖ ಶಿಫಾರಸ್ಸುಗಳು

ತರಬೇತಿ ಪಡೆದ ಶಿಕ್ಷಕರ ಲಭ್ಯತೆ ಖಚಿತಪಡಿಸಲು ವರ್ಗಾವಣೆ ನೀತಿ ಪರಿಶೀಲನೆ

ಮೂಲಭೂತ ಸಾಕ್ಷರತೆ ಮತ್ತು ಗಣಿತಜ್ಞತೆ ಕಾರ್ಯಕ್ರಮವನ್ನು ಫಲಿತಾಂಶಾಧಾರಿತವಾಗಿ ಜಾರಿ

ಅಗತ್ಯವಿರುವ ಕಡೆ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿಕೆ

1–3ನೇ ತರಗತಿಗಳಲ್ಲಿ ಮೂಲ ಕೌಶಲ್ಯ ಅಭಿವೃದ್ಧಿ, 4ನೇ ತರಗತಿಯಿಂದ ಮಧ್ಯವರ್ತಿ ಕಲಿಕಾ ವಿಧಾನ

ನಿಧಾನ ಕಲಿಯುವ ವಿದ್ಯಾರ್ಥಿಗಳಿಗೆ ವೈಯಕ್ತಿಕ ಬೆಂಬಲ

ಶಾಲೆಗಳಿಗೆ ಕಲಿಕಾ ಫಲಿತಾಂಶ ಗುರಿಗಳೊಂದಿಗೆ ಸ್ವಾಯತ್ತತೆ ಮತ್ತು ಜವಾಬ್ದಾರಿ


ಆರಂಭಿಕ ಬಾಲ್ಯ ಶಿಕ್ಷಣ

ಇಂಗ್ಲಿಷ್ ಮಾಧ್ಯಮ/ಇಂಗ್ಲಿಷ್ ಜ್ಞಾನ ಹೊಂದಿದ ಶಿಕ್ಷಕರ ನಿಯೋಜನೆ ಆರಂಭಿಕ ಬಾಲ್ಯ ಶಿಕ್ಷಣವನ್ನು ICDS ಜೊತೆಗೆ ಸಂಯೋಜನೆನಲಿ-ಕಲಿ ಕಾರ್ಯಕ್ರಮದ ಮೂಲಸೌಕರ್ಯ ಮತ್ತು ಸಂಪನ್ಮೂಲ ಸುಧಾರಣೆ

ಕರ್ನಾಟಕ ಪಬ್ಲಿಕ್ ಶಾಲೆಗಳು (KPS)

ಶಾಲೆ ಬಿಟ್ಟುಹೋಗುವ ಪ್ರಮಾಣ ಕಡಿಮೆ ಮಾಡಲು KPS ಪ್ರಮುಖ ಪಾತ್ರ ಮುಂದಿನ 5 ವರ್ಷಗಳಲ್ಲಿ 350 KPS ಸ್ಥಾಪನೆ ಶಿಫಾರಸುಇದರಲ್ಲಿ 200 ಶಾಲೆಗಳು ಮಂಡಳಿಯಡಿಯಲ್ಲಿ


ಇತರೆ ಪ್ರಮುಖ ಶಿಫಾರಸ್ಸುಗಳು

ವಿಜಯನಗರ ಜಿಲ್ಲೆಯಲ್ಲಿ DIET ಸ್ಥಾಪನೆ ಹೆಚ್ಚಿನ ದಾಖಲಾತಿಯ ಹೊಸ ತಾಲ್ಲೂಕುಗಳಲ್ಲಿ 14 BEO ಕಚೇರಿಗಳು,ಶಾಲೆ ಬಿಡುವಿಕೆ, ಗೈರುಹಾಜರಿ, ಬಾಲ್ಯ ವಿವಾಹ ತಡೆಗೆ ಸಮುದಾಯದ ಭಾಗವಹಿಸುವಿಕೆ, ಎರಡು ವರ್ಷಕ್ಕೊಮ್ಮೆ ಎಲ್ಲಾ ಶಿಕ್ಷಣ ಕಾರ್ಯಕ್ರಮಗಳ ಗುಣಮಟ್ಟ ಪರಿಶೀಲನೆಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಖಾತರಿ ಕಾರ್ಯಕ್ರಮ ಜಾರಿಉತ್ತಮ ಸಾಧನೆ ಮಾಡಿದ ಶಾಲೆ, ಶಿಕ್ಷಕರು, ಮುಖ್ಯಶಿಕ್ಷಕರಿಗೆ ಪ್ರಶಸ್ತಿ ಮತ್ತು ಗೌರವ

ಬಜೆಟ್ ಮತ್ತು ಸಮಿತಿ ವಿವರ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ತನ್ನ ಒಟ್ಟು ಬಜೆಟ್‌ನ 25% ಶಿಕ್ಷಣಕ್ಕೆ ಮೀಸಲು ಫೆಬ್ರವರಿ 2025ರಲ್ಲಿ ಶಿಕ್ಷಣ ತಜ್ಞರಾದ ಡಾ. ಛಾಯಾ ದೇಗಾಂವಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಏಳು ಜಿಲ್ಲೆಗಳ 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಕ್ಷೇತ್ರ ಭೇಟಿಯಿಂದ ಸಮಗ್ರ ಅಧ್ಯಯನ ಈ ವರದಿ ಕಲ್ಯಾಣ ಕರ್ನಾಟಕದಲ್ಲಿ ಗುಣಮಟ್ಟದ ಮತ್ತು ಸಮಗ್ರ ಶಿಕ್ಷಣ ಅಭಿವೃದ್ಧಿಗೆ ದಿಕ್ಕುಸೂಚಿ ಆಗಲಿದೆ
ಶಿಕ್ಷಣ ಸಚಿವರ ಸಂದೇಶ
ರಾಜ್ಯದ 1ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶೀಘ್ರದಲ್ಲೇ ಇನ್ನಷ್ಟು ಮಹತ್ವದ ನಿರ್ಣಯಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This