ಬೆಂಗಳೂರು:
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು 2026–27ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಬಯಸುವ ಸಂಸ್ಥೆಗಳಿಗಾಗಿ ಅಧಿಕೃತ ಸುತ್ತೋಲೆಯನ್ನು ಪ್ರಕಟಿಸಿದೆ. ಹೊಸ ಶಾಲೆಗಳಿಗೆ ಡೈಸ್ ಕೋಡ್ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹ ಸಂಸ್ಥೆಗಳು
ಹೊಸ ಶಾಲೆ ಆರಂಭಿಸಲು ಕೆಳಕಂಡ ಕಾಯ್ದೆಗಳಡಿ ನೋಂದಾಯಿತವಾಗಿರುವ ಸಂಸ್ಥೆಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ:
ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಕಾಯ್ದೆ–1960 ರಡಿ ನೋಂದಾಯಿತ ಸಂಘಗಳು
ಭಾರತೀಯ ಟ್ರಸ್ಟ್ ಕಾಯ್ದೆ–1882 ರಡಿ ನೋಂದಾಯಿತ ಧರ್ಮದಾಯ ಟ್ರಸ್ಟ್‌ಗಳು
ಕಂಪನಿ ಕಾಯ್ದೆ–2013 ರ ಸೆಕ್ಷನ್ 8 ರಡಿ ನೋಂದಾಯಿತ ಕಂಪನಿಗಳು
ಲಾಭರಹಿತ ಉದ್ದೇಶದ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (LLP) ಸಂಸ್ಥೆಗಳು
ಭೂಮಿ ಮತ್ತು ಮೂಲಭೂತ ಸೌಕರ್ಯ ಮಾನದಂಡ
ಶಾಲೆ ಸ್ಥಾಪಿಸಲು ಉದ್ದೇಶಿಸಿರುವ ಪ್ರದೇಶಕ್ಕೆ ಅನುಗುಣವಾಗಿ ಭೂಮಿಯ ವಿಸ್ತೀರ್ಣವನ್ನು ನಿಗದಿಪಡಿಸಲಾಗಿದೆ.
ಪೂರ್ವ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ:
ಬಿಬಿಎಂಪಿ ಹಾಗೂ ಇತರ ಮಹಾನಗರ ಪಾಲಿಕೆ ವ್ಯಾಪ್ತಿ: ಕನಿಷ್ಠ 2000 ಚದರ ಮೀಟರ್
ಇತರ ಪ್ರದೇಶಗಳು: ಕನಿಷ್ಠ 4000 ಚದರ ಮೀಟರ್
ಪ್ರಾಥಮಿಕ ಅಥವಾ ಪ್ರೌಢಶಾಲೆ ಮಾತ್ರ:
ಬಿಬಿಎಂಪಿ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿ: 1500 ಚದರ ಮೀಟರ್
ಇತರ ಪ್ರದೇಶಗಳು: 3000 ಚದರ ಮೀಟರ್
ಪ್ರತಿ ತರಗತಿ ಕೊಠಡಿ ಕನಿಷ್ಠ 18 × 20 ಅಡಿ ವಿಸ್ತೀರ್ಣ ಹೊಂದಿರಬೇಕು.
ಪೂರ್ವ ಪ್ರಾಥಮಿಕಕ್ಕೆ ಕನಿಷ್ಠ 2 ಕೊಠಡಿ, ಪ್ರಾಥಮಿಕ ಶಾಲೆಗೆ 5 ರಿಂದ 8 ಕೊಠಡಿಗಳು ಹಾಗೂ ಪ್ರೌಢಶಾಲೆಗೆ ಕನಿಷ್ಠ 2 ತರಗತಿ ಕೊಠಡಿಗಳು ಕಡ್ಡಾಯವಾಗಿವೆ.
ನೋಂದಣಿ ಮತ್ತು ಸಂಸ್ಕರಣಾ ಶುಲ್ಕ
ಪೂರ್ವ ಪ್ರಾಥಮಿಕ ಶಾಲೆ: ₹2,500 ರಿಂದ ₹15,000 (ಪ್ರದೇಶಾನುಸಾರ)
ಪ್ರಾಥಮಿಕ ಶಾಲೆ: ₹50,000
ಪ್ರೌಢಶಾಲೆ: ₹1,00,000
ಪೂರ್ವ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ (ಬಿಬಿಎಂಪಿ ವ್ಯಾಪ್ತಿ): ₹1,65,000
ಅರ್ಜಿ ಸಲ್ಲಿಸುವ ವಿಧಾನ ಮತ್ತು ದಿನಾಂಕಗಳು
ಆಸಕ್ತ ಸಂಸ್ಥೆಗಳು ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್
schooleducation.karnataka.gov.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ನಗದು ಪಾವತಿ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-03-2026
ಆನ್‌ಲೈನ್ ಪಾವತಿ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-04-2026
ಅರ್ಜಿಯೊಂದಿಗೆ ಶಾಲಾ ಕಟ್ಟಡದ ಫೋಟೋ ಹಾಗೂ ವೀಡಿಯೋಗಳನ್ನು ಜಿಯೋ ಟ್ಯಾಗ್ ಮಾಡಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.
ಸುರಕ್ಷತಾ ಪ್ರಮಾಣಪತ್ರ ಕಡ್ಡಾಯ
ಹೊಸ ಶಾಲೆಗಳು ಪಿಡಬ್ಲ್ಯೂಡಿ ಇಲಾಖೆಯಿಂದ ಕಟ್ಟಡ ಸುರಕ್ಷತಾ ಪ್ರಮಾಣಪತ್ರ ಹಾಗೂ ಅಗ್ನಿಶಾಮಕ ಇಲಾಖೆಯಿಂದ ಅಗ್ನಿ ಸುರಕ್ಷತಾ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಅಥವಾ ಉಪನಿರ್ದೇಶಕರ (DDPI) ಕಚೇರಿಯನ್ನು ಸಂಪರ್ಕಿಸುವಂತೆ ಶಾಲಾ ಶಿಕ್ಷಣ ಇಲಾಖೆ ಮನವಿ ಮಾಡಿದೆ.







