ಎಸ್‌ಎಸ್‌ಎಲ್‌ಸಿ (SSLC)ಉತ್ತೀರ್ಣರಾಗಿದ್ದು ಸರಕಾರಿ ಕೆಲಸದಲ್ಲಿ ಆಸಕ್ತಿ ಇರುವವರಿಗಾಗಿ ಭಾರತೀಯ ಅಂಚೆ ಇಲಾಖೆ (Indian Postal Department) ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಅಂಚೆ ಇಲಾಖೆಯಲ್ಲಿ ಖಾಲಿ ಇರುವ 138 ಪೋಸ್ಟಲ್ ಅಸಿಸ್ಟೆಂಟ್ ಹಾಗೂ ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದಾದ್ಯಂತ ಕೆಲಸ ಮಾಡೋದಕ್ಕೆ ಸಿದ್ದರಿರಬೇಕು. ಒಟ್ಟು 138 ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ. ಪೋಸ್ಟಲ್ ಅಸಿಸ್ಟೆಂಟ್ ( ಸರ್ಕಲ್ ಆಫೀಸ್ & ಪ್ರಾದೇಶಿಕ ಕಚೇರಿ) ಒಟ್ಟು 07 ಹುದ್ದೆ, ಪೋಸ್ಟಲ್ ಅಸಿಸ್ಟೆಂಟ್ 120 ಹುದ್ದೆ, ಸಾರ್ಟಿಂಗ್ ಅಸಿಸ್ಟೆಂಟ್ ( ರೈಲ್ವೇ ಮೇಲ್ ಸರ್ವಿಸ್ ಹಾಗೂ ಮೇಲ್ ಮೋಟಾರ್ ಸರ್ವಿಸ್) ಒಟ್ಟು 11 ಹುದ್ದೆಗಳಿವೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಚೆ ಇಲಾಖೆ ತಿಳಿಸಿರುವ ಬೋರ್ಡ್ ಅಥವಾ ಮಂಡಳಿಯಿಂದ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿರಬೇಕು. ಎಸ್‌ಎಸ್‌ಎಲ್‌ಸಿ (10ನೇ ತರಗತಿ) ವಿದ್ಯಾಭ್ಯಾಸವನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವವರಿಗೆ 18 ವರ್ಷ ವಯಸ್ಸಾಗಿರಬೇಕು ಅಲ್ಲದೇ 35 ವರ್ಷ ಮೀರಿರಬಾರದು.
ಎಸ್‌ಸಿ/ಎಸ್‌ಟಿ/ಪ್ರವರ್ಗ 1/ ಒಬಿಸಿ/ ವಿಕಲಚೇತನರು ಹಾಗೂ ವಿಧವೆಯರಿಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಅಲ್ಲದೇ ನಿವೃತ್ತ ಯೋಧರು, ಎಸ್‌ಸಿ/ಎಸ್‌ಟಿ/ಪ್ರವರ್ಗ 1/ ಒಬಿಸಿ/ ವಿಕಲಚೇತನರು ಹಾಗೂ ವಿಧವೆಯರಿಗೆ ಪ್ರವೇಶ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.
ಆಸಕ್ತ ಅಭ್ಯರ್ಥಿಗಳು 10ನೇ ತರಗತಿಯ ಅಂಕಪಟ್ಟಿ, 12ನೇ ತರಗತಿ ಅಂಕಪಟ್ಟಿ, ಜನನ ಪ್ರಮಾಣ ಪತ್ರ, ಕಂಪ್ಯೂಟರ್ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತ್ತೀಚಿನ ಭಾವ ಚಿತ್ರ, ಸಹಿಯ ಜೊತೆಗೆ ವಿಕಲಚೇತನರು ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ದಾಖಲೆಗಳನ್ನು ಸಂದರ್ಶನ ಅಥವಾ ವೆರಿಫಿಕೇಷನ್ ವೇಳೆಯಲ್ಲಿ ನೀಡಬೇಕಾಗುತ್ತದೆ.
Post Office Recruitment 2025
ವೇತನ ಶ್ರೇಣಿ : 1000 – 29380 ರೂಪಾಯಿ
ಅರ್ಜಿ ಸಲ್ಲಿಸಲು ಆರಂಭ : ಜೂನ್ 11 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನ : ಜುಲೈ 2, 2025
ಪ್ರವೇಶ ಪರೀಕ್ಷೆಯ ದಿನಾಂಕ : ಜುಲೈ 20 2025
ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ ನಿಂದ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯ ಜೊತೆಗೆ ಮೇಲೆ ಕೇಳಿರುವ ಎಲ್ಲಾ ದಾಖಲೆಯ ನಕಲು ಪ್ರತಿಯನ್ನು ಅಂಚೆ ಇಲಾಖೆಯ ಕೆಳಕಂಡ ವಿಳಾಸಕ್ಕೆ ಸಲ್ಲಿಕೆ ಮಾಡಬಹುದಾಗಿದೆ.
ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಅಭ್ಯರ್ಥಿಗಳು ಲಕೋಟೆಯ ಮೇಲೆ Karnataka Post Office (indian Post Office) Postal Assistant and Sorting Assistant Application Form ಎಂದು ನಮೂದಿಸುವುದು ಕಡ್ಡಾಯ. ಭರ್ತಿ ಮಾಡಿದ ಅರ್ಜಿಗಳನ್ನು ಪೋಸ್ಟ್ ಮಾಸ್ಟರ್ ಜನರಲ್, ಬೆಂಗಳೂರು ಮುಖ್ಯ ಪ್ರಾದೇಶಿಕ ಕಚೇರಿ ಬೆಂಗಳೂರು -560001 ಈ ವಿಳಾಸಕ್ಕೆ ಕಳುಹಿಸಿ ಕೊಡಬಹುದಾಗಿದೆ.







