Home » ರಾಜ್ಯ » ಹಿಂದುಳಿದ–ದಲಿತ ಸಮುದಾಯದ 22 ಮಠಗಳಿಗೆ ಭೂಮಿ ಮಂಜೂರುಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಮಹತ್ವದ ತೀರ್ಮಾನ

ಹಿಂದುಳಿದ–ದಲಿತ ಸಮುದಾಯದ 22 ಮಠಗಳಿಗೆ ಭೂಮಿ ಮಂಜೂರುಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಮಹತ್ವದ ತೀರ್ಮಾನ

ಬೆಂಗಳೂರು, ಜ.23:
ರಾಜ್ಯದ ಹಿಂದುಳಿದ ಹಾಗೂ ದಲಿತ ಸಮುದಾಯಗಳ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬಲ ನೀಡುವ ಉದ್ದೇಶದಿಂದ 22 ಮಠಗಳಿಗೆ ಭೂಮಿ ಮಂಜೂರು ಮಾಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಅನುಮೋದನೆ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲೆ, ಉತ್ತರ ತಾಲೂಕಿನ ದಾಸನಪುರ ಹೋಬಳಿ, ರಾವುತ್ತನಹಳ್ಳಿ ಗ್ರಾಮದ ಸರ್ವೇ ನಂ. 57 ಮತ್ತು 58 ರಲ್ಲಿರುವ ಸರ್ಕಾರಿ ಜಮೀನನ್ನು ವಿವಿಧ ಮಠಗಳಿಗೆ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ.
ಈ ನಿರ್ಧಾರದಿಂದ ಹಿಂದುಳಿದ ಹಾಗೂ ದಲಿತ ಸಮುದಾಯಗಳ ಮಠಗಳಿಗೆ ಶಾಶ್ವತ ಮೂಲಸೌಕರ್ಯ ಕಲ್ಪಿಸಲು ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.
ಯಾವ ಮಠಗಳಿಗೆ ಎಷ್ಟು ಜಾಗ?
ಸರ್ವೇ ನಂ. 58ರಲ್ಲಿ:
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ, ಹಾವೇರಿ – 1 ಎಕರೆ
ಶ್ರೀ ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ, ಹೊಸದುರ್ಗ – 1 ಎಕರೆ
ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠ – 1 ಎಕರೆ
ಸರ್ವೇ ನಂ. 57ರಲ್ಲಿ: 4. ಶಿವಶರಣ ಮಾದರ ಚೆನ್ನಯ್ಯ ಗುರುಪೀಠ ಟ್ರಸ್ಟ್ – 1 ಎಕರೆ
5. ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ, ಹರಿಹರ – 1 ಎಕರೆ
6. ಉಪವೀರ ಜಗದ್ಗುರು ವಿದ್ಯಾ ಸಂಸ್ಥೆ, ಹೊಸದುರ್ಗ – 1 ಎಕರೆ
7. ಗೊಲ್ಲಗಿರಿಯ ಅಖಿಲ ಭಾರತ ಶ್ರೀ ಕೃಷ್ಣ ಯಾದವ ಮಹಾಸಂಸ್ಥಾನ – 31 ಗುಂಟೆ
8. ಕಾಳಿದಾಸ–ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯ ಹಳೆ ವಿದ್ಯಾರ್ಥಿಗಳ ಸಂಘ – 1 ಎಕರೆ
9. ಶ್ರೀ ನಾರಾಯಣ ಗುರು ಮಹಾಸಂಸ್ಥಾನ, ನಿಟ್ಟೂರು – 31.08 ಗುಂಟೆ
10. ಮಾಚಿದೇವ ಜಗದ್ಗುರು ಮಹಾಸಂಸ್ಥಾನ (ಮಡಿವಾಳ ಗುರುಪೀಠ) – 32 ಗುಂಟೆ
11. ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ – 32 ಗುಂಟೆ
12. ಹಡಪದ ಅಪ್ಪಣ್ಣ ಮಹಾಸಂಸ್ಥಾನ ಟ್ರಸ್ಟ್ – 31 ಗುಂಟೆ
13. ಶ್ರೀ ಕುಂಬಾರ ಗುಂಡಯ್ಯ ಮಹಾಸಂಸ್ಥಾನ – 31 ಗುಂಟೆ
14. ಶ್ರೀ ಸವಿತಾ ಪೀಠ ಚಾರಿಟೇಬಲ್ ಟ್ರಸ್ಟ್ – 30 ಗುಂಟೆ
15. ಹೇಮಾ ವೇಮಾ ಸದ್ಭಾವನ ಗುರುಪೀಠ – 23.12 ಗುಂಟೆ
16. ನಿಕೇತನ ಎಜುಕೇಶನ್ ಟ್ರಸ್ಟ್, ಬೆಂಗಳೂರು – 1 ಎಕರೆ
17. ಎಸ್.ವಿ.ಎಸ್. ಊರುಗೊಲು ವೃದ್ಧಾಶ್ರಮ ಚಾರಿಟೇಬಲ್ ಟ್ರಸ್ಟ್ – 35.08 ಗುಂಟೆ
18. ಹಿಂದುಳಿದ ದಲಿತ ಮಠಾಧೀಶ್ವರರ ಒಕ್ಕೂಟ, ಬೆಂಗಳೂರು – 35 ಗುಂಟೆ
19. ಕರ್ನಾಟಕ ರಾಜ್ಯ ಅಹಲ್ಯಬಾಯಿ ಹೋಲ್ಕರ್ ಮಹಿಳಾ ಸಂಘ – 1 ಎಕರೆ
20. ಚಲವಾದಿ ಗುರುಪೀಠ, ಚಿತ್ರದುರ್ಗ – 32 ಗುಂಟೆ
21. ಅಖಿಲ ಕರ್ನಾಟಕ ಶ್ರೀಗುರು ಮೇದರ ಕೇತೇಶ್ವರ ಟ್ರಸ್ಟ್ – 30 ಗುಂಟೆ
22. ಹಠಯೋಗಿ ಕಾಳಪ್ಪ ಸ್ವಾಮಿಗಳ ಮಠದ ಸೇವಾ ಟ್ರಸ್ಟ್ – 32 ಗುಂಟೆ
ಸಾಮಾಜಿಕ ನ್ಯಾಯದತ್ತ ಮತ್ತೊಂದು ಹೆಜ್ಜೆ
ಈ ತೀರ್ಮಾನವು ಹಿಂದುಳಿದ ಹಾಗೂ ದಲಿತ ಸಮುದಾಯಗಳ ಧಾರ್ಮಿಕ ಗುರುಪೀಠಗಳಿಗೆ ಶಾಶ್ವತ ನೆಲೆ ಕಲ್ಪಿಸುವುದರ ಜೊತೆಗೆ ಶಿಕ್ಷಣ, ವಸತಿ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯತ್ತ ರಾಜ್ಯ ಸರ್ಕಾರ ಬದ್ಧವಾಗಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ಎಂದು ಸಚಿವ ಸಂಪುಟ ಮೂಲಗಳು ತಿಳಿಸಿವೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This