Home » ಉದ್ಯೋಗ » ಸಮಗ್ರ ಶಿಕ್ಷಣ ಅಭಿಯಾನದಡಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸಮಗ್ರ ಶಿಕ್ಷಣ ಅಭಿಯಾನದಡಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬಳ್ಳಾರಿ : ಸಮಗ್ರ ಶಿಕ್ಷಣ – ಕರ್ನಾಟಕ ಬಳ್ಳಾರಿ ಸಮನ್ವಯ ಶಿಕ್ಷಣ ವಿಭಾಗದಡಿ 2025-26ನೇ ಶೈಕ್ಷಣಿಕ ಸಾಲಿಗೆ ಖಾಲಿ ಇರುವ ಬಿಐಇಆರ್‌ಟಿ ಪ್ರಾಥಮಿಕ ವಿವಿಧ ತಾತ್ಕಾಲಿಕ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಗ್ರ ಶಿಕ್ಷಣ ಅಭಿಯಾನದ ಉಪನಿರ್ದೇಶಕರು ತಿಳಿಸಿದ್ದಾರೆ.

ಪ್ರಾಥಮಿಕ (1 ರಿಂದ 5) ಡಿ.ಇಡಿ ವಿಶೇಷ ಶಿಕ್ಷಣ(ಆರ್‌ಸಿಐ ಸಿಆರ್‌ಆರ್ ಸಂಖ್ಯೆಯೊAದಿಗೆ), ಪ್ರೌಢ (6 ರಿಂದ ಬಿ.ಇಡಿ ವಿಶೇಷ ಶಿಕ್ಷಣ(ಆರ್‌ಸಿಐ ಸಿಆರ್‌ಆರ್ ಸಂಖ್ಯೆಯೊAದಿಗೆ) ಮತ್ತು ಪ್ರೌಢ (9 ರಿಂದ 12) ಬಿ.ಇಡಿ ವಿಶೇಷ ಶಿಕ್ಷಣ(ಆರ್‌ಸಿಐ ಸಿಆರ್‌ಆರ್ ಸಂಖ್ಯೆಯೊAದಿಗೆ) ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇರಗುತ್ತಿಗೆ ಅಡಿ ಅರ್ಜಿ ಆಹ್ವಾನಿಸಲಾಗಿದೆ.

ಈ ಹಿಂದೆ ಈ ಇಲಾಖೆಯಲ್ಲಿ ಬಿಐಇಆರ್‌ಟಿಯಾಗಿ ಕಾರ್ಯನಿರ್ವಹಿಸಿರುವÀ ಅಭ್ಯರ್ಥಿಗಳಿಗೆ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು.

ಅರ್ಜಿಗಳನ್ನು ಜೂ.17 ರೊಳಗಾಗಿ ಉಪನಿರ್ದೇಶಕರು ಮತ್ತು ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ – ಕರ್ನಾಟಕ, ಕೋಟೆ, ಬಳ್ಳಾರಿ ಇವರಿಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This