ಧಾರವಾಡ : ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡು ಮಂಜೂರಾಗದೇ ಬಾಕಿ ಉಳಿದಿರುವ ಸನ್ನದುಗಳನ್ನು ಭಾರತ ಸರ್ಕಾರದ ಸ್ವಾಮ್ಯದ ಸಂಸ್ಥೆಯಾದ ಎಮ್ಎಸ್ಟಿಸಿ ಲಿಮಿಟೆಡ್ನ ಇ-ಪೋರ್ಟಲ್ ಮೂಲಕ ಇ-ಹರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಎಮ್ಎಸ್ಟಿಸಿ (https://www.mstcecommerce.com) ವೆಬ್ಸೈಟ್ನಲ್ಲಿ ಬಿಡ್ಡುಗಳನ್ನು ಆಹ್ವಾನಿಸಲಾಗಿದೆ.
ಹರಾಜು ನಡೆಯುವ ಹಾಗೂ ಅಂಗೀಕಾರ ಪತ್ರ (ಎಲ್ಓಎ) ನೀಡುವ ವರ್ಷವನ್ನೂ ಒಳಗೊಂಡಂತೆ ಈ ಸನ್ನದುಗಳು ಐದು ಅಬಕಾರಿ ವರ್ಷಗಳ ಅವಧಿಗೆ ಅನ್ವಯವಾಗಲಿವೆ. ಕರ್ನಾಟಕ ರಾಜ್ಯದ್ಯಾಂತ ಒಟ್ಟು 569 ಅಬಕಾರಿ ಸನ್ನದುಗಳನ್ನು ಇ-ಹರಾಜು ಮಾಡಲು ಉದ್ದೇಶಿಸಲಾಗಿದೆ.
ಇದರಲ್ಲೂ ಧಾರವಾಡ ಜಿಲ್ಲೆಗೆ ಒಟ್ಟು 15 ಸಿಎಲ್-2ಎ ಸನ್ನದುಗಳು (ಎಸ್ಸಿ-ಎ-1, ಎಸ್ಸಿ-ಬಿ-1, ಎಸ್ಸಿ-ಸಿ-1, ಎಸ್ಟಿ-1 ಹಾಗೂ ಜನರಲ್-11) ಮತ್ತು 4 ಸಿಎಲ್-9 ಸನ್ನದುಗಳನ್ನು ಜನರಲ್ ಕೆಟಗರಿಯಲ್ಲಿ ಹಂಚಿಕೆ ಮಾಡಲಾಗಿದೆ.
ಬಿಡ್ಡುದಾರರ ನೋಂದಣಿ ಪ್ರಕ್ರಿಯೆಯನ್ನು ಡಿಸೆಂಬರ್ 22, 2025ರಿಂದ ಆನ್ಲೈನ್ ಮೂಲಕ ಪ್ರಾರಂಭಿಸಲಾಗಿದ್ದು, ಆಸಕ್ತರು ನಿಗದಿತ ಅವಧಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಹಾಗೂ ಇ-ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಜನೆವರಿ 05, 2026ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡದ ರಾಯಾಪೂರದಲ್ಲಿರುವ ಕೆ.ಎಂ.ಎಫ್ ತರಬೇತಿ ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ರಮೇಶ್ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಬಕಾರಿ ನಿಯಮಾವಳಿಯಂತೆ ಸಿಎಲ್-2 ಸನ್ನದು ವೈನ್ ಶಾಪ್ಗಳಿಗೆ ಹಾಗೂ ಸಿಎಲ್-9 ಸನ್ನದು ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ







