Home » ಉದ್ಯೋಗ » ವಿಜಯಪುರ ಸೈನಿಕ್ ಶಾಲೆಯಲ್ಲಿ ವಿವಿಧ ಹುದ್ದೆಗಳ ಭರ್ತಿ

ವಿಜಯಪುರ ಸೈನಿಕ್ ಶಾಲೆಯಲ್ಲಿ ವಿವಿಧ ಹುದ್ದೆಗಳ ಭರ್ತಿ

ವಿಜಯಪುರ:
ಮನೆಯಲ್ಲಿ ಕೆಲಸವಿಲ್ಲದೆ ಕುಳಿತಿರುವ ಪದವೀಧರರು ಹಾಗೂ 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಪ್ರತಿಷ್ಠಿತ ಸೈನಿಕ್ ಶಾಲೆಯಲ್ಲಿ ಉದ್ಯೋಗ ಪಡೆಯುವ ಸುವರ್ಣಾವಕಾಶ ದೊರೆತಿದೆ. ವಿಜಯಪುರ ಸೈನಿಕ್ ಶಾಲೆಯು ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ನೇಮಕಾತಿಯಲ್ಲಿ ಶಿಕ್ಷಕ ಹುದ್ದೆಗಳ ಜೊತೆಗೆ ಇತರೆ ಸೇವಾ ವಿಭಾಗಗಳಿಗೂ ಆದ್ಯತೆ ನೀಡಲಾಗಿದೆ. PGT ಮತ್ತು TGT ಶಿಕ್ಷಕರು, ಸಂಗೀತ ಶಿಕ್ಷಕರು, ಕೌನ್ಸಿಲರ್, ವಾರ್ಡ್ ಬಾಯ್ಸ್ ಹಾಗೂ ಮಹಿಳಾ ಅಭ್ಯರ್ಥಿಗಳಿಗಾಗಿ ನರ್ಸಿಂಗ್ ಸಿಸ್ಟರ್ ಹುದ್ದೆಗಳು ಲಭ್ಯವಿವೆ.
ವಿದ್ಯಾರ್ಹತೆ:
ಶಿಕ್ಷಕ ಹುದ್ದೆಗಳು: ಸಂಬಂಧಪಟ್ಟ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಜೊತೆಗೆ B.Ed ಮತ್ತು CTET/STET ಪಾಸಾಗಿರಬೇಕು.
ವಾರ್ಡ್ ಬಾಯ್ಸ್: ಕನಿಷ್ಠ 10ನೇ ತರಗತಿ ಪಾಸಾದರೆ ಸಾಕು.
ನರ್ಸಿಂಗ್ ಸಿಸ್ಟರ್: ನರ್ಸಿಂಗ್‌ನಲ್ಲಿ ಡಿಪ್ಲೊಮಾ ಅಥವಾ ಬಿ.ಎಸ್ಸಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಶಿಕ್ಷಕ ಹುದ್ದೆಗಳು: 21 ರಿಂದ 40 ವರ್ಷ
ವಾರ್ಡ್ ಬಾಯ್ಸ್ ಹಾಗೂ ನರ್ಸಿಂಗ್ ಸಿಸ್ಟರ್: ಗರಿಷ್ಠ 50 ವರ್ಷ
ಅರ್ಜಿ ಸಲ್ಲಿಸುವ ವಿಧಾನ:
ಈ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅಭ್ಯರ್ಥಿಗಳು www.ssbj.in ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು.
ಅರ್ಜಿಯೊಂದಿಗೆ “Principal, Sainik School Bijapur” ಹೆಸರಿನಲ್ಲಿ ₹500 ಡಿಮ್ಯಾಂಡ್ ಡ್ರಾಫ್ಟ್ (DD) ಅನ್ನು ಸಂಲಗ್ನಗೊಳಿಸುವುದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
16-01-2026
ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸೈನಿಕ್ ಶಾಲೆ ಆಡಳಿತ ಮಂಡಳಿ ಮನವಿ ಮಾಡಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This