ಭೋಪಾಲ್ : ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಬಾಗೇಶ್ವರ ಧಾಮದಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಭಷ್ಟಾಚಾರ ಹಾಗೂ ಲಂಚ ತೆಗೆದುಕೊಳ್ಳುವವರಿಗೆ ಎಚ್ಚರಿಕೆ ನೀಡಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ಯಾರಾದರೂ ಸಾರ್ವಜನಿಕರಿಂದ ಹಣ ಕೇಳಿದರೆ, ಅವರು ನೇರವಾಗಿ ನನಗೆ ಪತ್ರ ಬರೆಯಬೇಕು, ಉಳಿದ ಕೆಲಸವನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ
ಈಗ ಎಲ್ಲಾ ಬಡವರು, ಶ್ರೀಮಂತರು ಮತ್ತು ಮಧ್ಯಮ ವರ್ಗದವರಿಗೆ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಕುಟುಂಬದ ಎಲ್ಲಾ ಹಿರಿಯರಿಗೆ ಉಚಿತ ಚಿಕಿತ್ಸೆಗಾಗಿ ಆಯುಷ್ಮಾನ್ ಕಾರ್ಡ್ಗಳನ್ನು ಮಾಡಲಾಗುತ್ತಿದೆ. ಈ ಕಾರ್ಡ್ಗಳನ್ನು ಆನ್ಲೈನ್ನಲ್ಲಿಯೂ ಮಾಡಲಾಗುವುದು. ಇದಕ್ಕಾಗಿ ಯಾರಿಗೂ ಎಲ್ಲಿಯೂ ಹಣ ನೀಡುವ ಅಗತ್ಯವಿಲ್ಲ ಮತ್ತು ಯಾರಾದರೂ ಹಣ ಕೇಳಿದರೆ ನನಗೆ ನೇರವಾಗಿ ಪತ್ರ ಬರೆಯಿರಿ. ಉಳಿದ ಕೆಲಸ ನಾನು ಮಾಡುತ್ತೇನೆ ಎಂದರು.
ಇದೇ ವೇಳೆ ಸಂತರು ಮತ್ತು ಋಷಿಮುನಿಗಳು ಆಯುಷ್ಮಾನ್ ಕಾರ್ಡ್ ಅನ್ನು ನಿರ್ವಹಿಸುವಂತೆ ಮೋದಿ ವಿನಂತಿಸಿದರು. ಇದರಿಂದ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಅವರಿಗೆ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ. ಸಂತರು ಮತ್ತು ಋಷಿಗಳು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ಒಂದು ವೇಳೆ ಅವರು ಅನಾರೋಗ್ಯಕ್ಕೆ ಒಳಗಾದರೆ, ಅದರ ಲಾಭವನ್ನು ಪಡೆಯಬಹುದು ಎಂದು ಪ್ರಧಾನಿ ಮೋದಿ ತಿಳಿ ಹೇಳಿದರು.
Source : Navasamaj. Com







