Home » ರಾಜ್ಯ » ರೈತರಿಗೆ ಸೌಲಭ್ಯ: ಗ್ರಾಮ ಪಂಚಾಯ್ತಿಯಲ್ಲೇ 11ಇ, ಪೋಡಿ, ಹದ್ದು ಬಸ್ತು

ರೈತರಿಗೆ ಸೌಲಭ್ಯ: ಗ್ರಾಮ ಪಂಚಾಯ್ತಿಯಲ್ಲೇ 11ಇ, ಪೋಡಿ, ಹದ್ದು ಬಸ್ತು

ಬೆಂಗಳೂರು:ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರದಿಂದ ಮಹತ್ವದ ಸೌಲಭ್ಯ ಒದಗಿಸಲಾಗಿದೆ. ಇನ್ನುಮುಂದೆ ಗ್ರಾಮ ಪಂಚಾಯ್ತಿಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲೇ 11ಇ ಸೇರಿದಂತೆ ಹಲವು ಭೂ ದಾಖಲೆಗಳು ಲಭ್ಯವಾಗಲಿವೆ. ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯ ಅಡಿಯಲ್ಲಿನ ಸೇವೆಗಳನ್ನು ಗ್ರಾಮ ಪಂಚಾಯ್ತಿ ಮಟ್ಟಕ್ಕೂ ಸರ್ಕಾರ ವಿಸ್ತರಿಸಿರುವುದರಿಂದ, ರೈತರು ಹಾಗೂ ಗ್ರಾಮೀಣ ನಾಗರಿಕರು ತಾಲೂಕು ಕೇಂದ್ರಗಳಿಗೆ ತೆರಳದೆ ತಮ್ಮ ಗ್ರಾಮದ ಪಂಚಾಯ್ತಿಯಲ್ಲೇ ಭೂ ದಾಖಲೆಗಳನ್ನು ಪಡೆಯಬಹುದಾಗಿದೆ.
ಈ ಹೊಸ ವ್ಯವಸ್ಥೆಯಿಂದಾಗಿ ಜನರ ಸಮಯ ಹಾಗೂ ಹಣದ ಉಳಿತಾಯವಾಗಲಿದ್ದು, ಆಡಳಿತಾತ್ಮಕ ಪ್ರಕ್ರಿಯೆಗಳು ಇನ್ನಷ್ಟು ಸುಲಭ ಹಾಗೂ ವೇಗವಾಗಲಿವೆ ಎಂದು ಇಲಾಖೆ ತಿಳಿಸಿದೆ.
ಬಾಪೂಜಿ ಸೇವಾ ಕೇಂದ್ರಗಳಲ್ಲಿ ಲಭ್ಯವಾಗುವ ಭೂ ದಾಖಲೆಗಳು
11ಇ ನಕ್ಷೆ
ಭೂ ಪರಿವರ್ತನೆಗಾಗಿ ಅರ್ಜಿ
ತತ್ಕಾಲ್ ಪೋಡಿ
ಹದ್ದು ಬಸ್ತು
ಅರ್ಜಿ ಶುಲ್ಕ ವಿವರ
11ಇ ನಕ್ಷೆ: 2ಎಕರೆವರೆಗೆ ರೂ.1,500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. 2 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ ರೂ.400 ಹೆಚ್ಚುವರಿ ಶುಲ್ಕ ಪಾವತಿಸಬೇಕು. ಜೊತೆಗೆ ಗ್ರಾಮ ಪಂಚಾಯ್ತಿ ಸೇವಾ ಶುಲ್ಕ ರೂ.25 ಪಾವತಿಸಬೇಕಾಗಿದೆ.
ಭೂ ಪರಿವರ್ತನೆ:
2 ಎಕರೆವರೆಗೆ ರೂ.1,500, ಅದಕ್ಕಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ ರೂ.400 ಹೆಚ್ಚುವರಿ ಶುಲ್ಕ ಹಾಗೂ ಗ್ರಾಮ ಪಂಚಾಯ್ತಿ ಸೇವಾ ಶುಲ್ಕ ರೂ.25 ಪಾವತಿಸಬೇಕಿದೆ.
ತತ್ಕಾಲ್ ಪೋಡಿ:
2 ಎಕರೆವರೆಗೆ ರೂ.1,500, ಹೆಚ್ಚಿನ ವಿಸ್ತೀರ್ಣಕ್ಕೆ ಪ್ರತಿ ಎಕರೆಗೆ ರೂ.400 ಜೊತೆಗೆ ಸೇವಾ ಶುಲ್ಕ ರೂ.25 ನಿಗದಿಯಾಗಿದೆ.
ಹದ್ದು ಬಸ್ತು:
2 ಎಕರೆವರೆಗೆ ರೂ.1,500, 2 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ ರೂ.300, ಜೊತೆಗೆ ನೋಟೀಸ್ ಶುಲ್ಕ ರೂ.25 ಹಾಗೂ ಸೇವಾ ಶುಲ್ಕ ರೂ.25 ಪಾವತಿಸಬೇಕಾಗಿದೆ.
ಈ ಕ್ರಮದಿಂದಾಗಿ ಭೂ ದಾಖಲೆ ಸೇವೆಗಳು ಗ್ರಾಮ ಮಟ್ಟದಲ್ಲೇ ಲಭ್ಯವಾಗಲಿದ್ದು, ಗ್ರಾಮೀಣ ಜನತೆಗೆ ಇದು ದೊಡ್ಡ ಅನುಕೂಲವಾಗಲಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This