Home » ಉದ್ಯೋಗ » ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2025

ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2025

Recruitment 2025 : ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಅಗತ್ಯವಿರುವ ಕೀಟ ಸಂಗ್ರಾಹಕ ಹಾಗೂ ಸ್ವಯಂಸೇವಕರು ಹುದ್ದೆಯ ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಕರೆಯಲಾಗಿದೆ.

ಹುದ್ದೆ : ಕೀಟ ಸಂಗ್ರಾಹಕ, ಸ್ವಯಂಸೇವಕರು

ಕರ್ತವ್ಯ ಸ್ಥಳ : ಯಾದಗಿರಿ ಜಿಲ್ಲೆ, ಕರ್ನಾಟಕ

ಖಾಲಿಯಿರುವ ಹುದ್ದೆಗಳ ಸಂಖ್ಯೆ : 21

ಹುದ್ದೆ ಹುದ್ದೆಗಳ ಸಂಖ್ಯೆ

ಕೀಟ ಸಂಗ್ರಾಹಕ 1

ಸ್ವಯಂಸೇವಕರು 20

ಶೈಕ್ಷಣಿಕ ಅರ್ಹತೆ :

• ಕೀಟ ಸಂಗ್ರಾಹಕ – ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣ ಹೊಂದಿರಬೇಕು.

• ಸ್ವಯಂಸೇವಕರು – ಕನಿಷ್ಠ ಎಸ್.ಎಸ್.ಎಲ್.ಸಿ ಮಟ್ಟದ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಾನ : ಕೀಟ ಸಂಗ್ರಾಹಕ ಹುದ್ದೆಗೆ ಅಭ್ಯರ್ಥಿಗೆ ನೇರ ಸಂದರ್ಶನ ಸಮಯದಲ್ಲಿ 40 ವರ್ಷ ಮೀರಿರಬಾರದು.

ಹುದ್ದೆ ವೇತನ
ಕೀಟ ಸಂಗ್ರಾಹಕ ಮಾಸಿಕ ರೂ. 15,114
ಸ್ವಯಂಸೇವಕರು ಪ್ರತಿ ದಿನ ರೂ. 400

ಆಯ್ಕೆ ವಿಧಾನ : ಮೆರಿಟ್ ಆಧಾರದ ಮೇಲೆ ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಸಂದರ್ಶನ ಸ್ಥಳ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣ, ಯಾದಗಿರಿ.

ಸಂದರ್ಶನ ನಡೆಯುವ ದಿನಾಂಕದ ವಿವರ :

ಕೀಟ ಸಂಗ್ರಾಹಕ ಹುದ್ದೆಗೆ ನೇರ ಸಂದರ್ಶನ ನಡೆಯುವ ದಿನಾಂಕ : ಜೂನ್ 09, 2025 ರಂದು ಬೆಳಿಗ್ಗೆ 10.00 ಗಂಟೆಗೆ

ಸ್ವಯಂಸೇವಕರು ಹುದ್ದೆಗೆ ನೇರ ಸಂದರ್ಶನ ನಡೆಯುವ ದಿನಾಂಕ : ಜೂನ್ 04, 2025 ರಂದು ಬೆಳಿಗ್ಗೆ 10.00 ಗಂಟೆಗೆ

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This