Home » ಶಿಕ್ಷಣ » *ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

*ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಆರೂರು: 2026–27ನೇ ಶೈಕ್ಷಣಿಕ ಸಾಲಿಗೆ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಮೂಲಕ ಅರ್ಜಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

ಅಭ್ಯರ್ಥಿಗಳು ಅಥವಾ ಪೋಷಕರು ಇದೇ ತಿಂಗಳ 10ರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದ ಅಧಿಕೃತ ವೆಬ್‌ಸೈಟ್‌ನಿಂದ ಘೋಷಣಾ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಘೋಷಣಾ ಪತ್ರವನ್ನು ಇದೇ 25ರ ಸಂಜೆ 4 ಗಂಟೆಯೊಳಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವಸತಿ ಶಾಲೆಗೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು.

ಅರ್ಜಿಯನ್ನು ನೇರವಾಗಿ ವಸತಿ ಶಾಲೆಗಳಲ್ಲಿಯೇ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲಾಗುತ್ತದೆ. ಈ ವೇಳೆ ಅಭ್ಯರ್ಥಿಯ ಸ್ಯಾಟ್ಸ್ (SATS) ಸಂಖ್ಯೆ, ಭಾವಚಿತ್ರ, ಆಧಾರ್ ಸಂಖ್ಯೆ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರದ RD ಸಂಖ್ಯೆ, ಹಾಗೂ ಸಂಬಂಧಿತ ಇತರೆ ಮೀಸಲಾತಿ ಪ್ರಮಾಣಪತ್ರಗಳು ಕಡ್ಡಾಯವಾಗಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಯ ಮಿತಿ ವಿವರ:

ಪರಿಶಿಷ್ಟ ಜಾತಿ (SC) / ಪರಿಶಿಷ್ಟ ವರ್ಗ (ST): ಕುಟುಂಬದ ವಾರ್ಷಿಕ ಆದಾಯ ₹2.50 ಲಕ್ಷ

ಹಿಂದುಳಿದ ವರ್ಗ (ಪ್ರವರ್ಗ–1): ಕುಟುಂಬದ ವಾರ್ಷಿಕ ಆದಾಯ ₹1 ಲಕ್ಷ

ಹಿಂದುಳಿದ ವರ್ಗ (ಸಾಮಾನ್ಯ): ಕುಟುಂಬದ ವಾರ್ಷಿಕ ಆದಾಯ ₹2.50 ಲಕ್ಷ

2ಎ, 2ಬಿ, 3ಎ, 3ಬಿ ವರ್ಗಗಳು: ಕುಟುಂಬದ ವಾರ್ಷಿಕ ಆದಾಯ ₹1 ಲಕ್ಷ


ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪಠ್ಯೇತರ ಚಟುವಟಿಕೆಗಳೊಂದಿಗೆ ಸಮಗ್ರ ಬೆಳವಣಿಗೆ ಒದಗಿಸುವ ಉದ್ದೇಶದಿಂದ ಈ ಪ್ರವೇಶ ಪ್ರಕ್ರಿಯೆಯನ್ನು ಜಾರಿಗೆ ತರಲಾಗಿದೆ. ಆಸಕ್ತ ಮತ್ತು ಅರ್ಹ ಪೋಷಕರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
???? 8277894672 ???? 9964873918

ಲಿಂಕಿ : https://cetonline.karnataka.gov.in/kea/kreis2026

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This