Home » ಉದ್ಯೋಗ » ಬೆಂಗಳೂರು ಮೆಟ್ರೋ’ದಿಂದ 150 ಮೇಂಟೆನರ್ ನೇಮಕ: ಐಟಿಐ ಪಾಸಾದವರಿಗೆ.

ಬೆಂಗಳೂರು ಮೆಟ್ರೋ’ದಿಂದ 150 ಮೇಂಟೆನರ್ ನೇಮಕ: ಐಟಿಐ ಪಾಸಾದವರಿಗೆ.

ಬೆಂಗಳೂರು ಮೆಟ್ರೋ : ನೀವು ವಿವಿಧ ಬ್ರ್ಯಾಂಚ್‌ನಲ್ಲಿ ಐಟಿಐ ಶಿಕ್ಷಣವನ್ನು ಪಡೆದಿದ್ದು ಸರ್ಕಾರಿ ಉದ್ಯೋಗ ಪಡೆಯಬೇಕು ಎಂದುಕೊಂಡಿದ್ದಲ್ಲಿ, ಹಾಗೂ ಬೆಂಗಳೂರಲ್ಲಿ ಜಾಬ್‌ ಮಾಡಬೇಕು ಎಂದುಕೊಂಡಿದ್ದಲ್ಲಿ ನಿಮಗಿದೋ ಇಲ್ಲಿದೆ ಭರ್ಜರಿ ಜಾಬ್ ಆಫರ್. ಬರೋಬರಿ 150 ಮೇಂಟೆನರ್ ಹುದ್ದೆಗಳ ಭರ್ತಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹರಿಂದ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ 59,060 ರೂ ವರೆಗೆ ವೇತನ ಶ್ರೇಣಿ ಇದೆ. ಕಂಪ್ಲೀಟ್ ಮಾಹಿತಿ ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

ಬೆಂಗಳೂರು ಮೆಟ್ರೋ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ವಿಶೇಷ ಸಾರಿಗೆ ವ್ಯವಸ್ಥೆ. ಪ್ರಸ್ತುತ ಐಟಿಐ ಪಾಸಾದವರಿಗೆ ಮೆಟ್ರೋ ನಿಗಮವು ಭರ್ಜರಿ ಜಾಬ್‌ ಆಫರ್‌ ಅನ್ನು ನೀಡಿದೆ. ಬಿಎಂಆರ್‌ಸಿಎಲ್‌ ನ ಆಪರೇಷನ್ ಮತ್ತು ನಿರ್ವಹಣೆ ವಲಯದಲ್ಲಿ 150 ಮೇಂಟೆನರ್‌ಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ವೇತನ ಶ್ರೇಣಿ Rs.25,000- 59,060 ಇದ್ದು, ಪ್ರತಿ ವರ್ಷ ಶೇಕಡ.3 ವೇತನ ಹೆಚ್ಚಳವು ಇದೆ. ಆಸಕ್ತರು ಹೆಚ್ಚಿನ ವಿವರಗಳನ್ನು ಕೆಳಗಿನಂತೆ ತಿಳಿದು, ಅರ್ಜಿ ಸಲ್ಲಿಸಿ.

ಬೆಂಗಳೂರು ಮೆಟ್ರೋದಲ್ಲಿ 50 ಟ್ರೈನ್ ಆಪರೇಟರ್ ನೇಮಕಕ್ಕೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಡಿಪ್ಲೊಮ ಪಾಸಾದವರಿಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಟ್ರೈನ್ ಆಪರೇಟರ್ ಹುದ್ದೆಗಳಿಗೆ ವೇತನ ಶ್ರೇಣಿ Rs.35000 ರಿಂದ 82660 ನಿಗದಿಪಡಿಸಲಾಗಿದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 22-05-2025
ಸಹಿಮಾಡಲಾದ ಅರ್ಜಿಗಳ ಪ್ರಿಂಟ್‌ಔಟ್‌ಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 27-05-2025 ರ ಸಂಜೆ 4.00 ಗಂಟೆವರೆಗೆ.

ಅರ್ಜಿ ಸಲ್ಲಿಸುವ ವಿಧಾನ
http://www.bmrc.co.in/ ಗೆ ಭೇಟಿ ನೀಡಿ.
ಓಪನ್ ಆದ ಪೇಜ್‌ನಲ್ಲಿ ‘ವೃತ್ತಿ ಜೀವನ’ ಮೆನು ಆಯ್ಕೆ ಮಾಡಿ ಕ್ಲಿಕ್ ಮಾಡಿ.
150 ಮೇಂಟೆನರ್ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಹಾಕಲು ಈ ವೆಬ್‌ಪುಟದಲ್ಲಿ ‘Click Here To Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ.
ಅಧಿಸೂಚನೆ ಸಂಖ್ಯೆ BMRCL/HR/0006/O&M/2025/ ಆಯ್ಕೆ ಮಾಡಿ, ಹುದ್ದೆ ಆಯ್ಕೆ ಮಾಡಿ, ಮೊಬೈಲ್ ನಂಬರ್ ನೀಡಿ.
ಅರ್ಜಿ ಮುಂದುವರೆಸಿ, ಕೇಳಿದ ಇತರೆ ಡೀಟೇಲ್ಸ್‌ ನೀಡಿ ಅರ್ಜಿ ಹಾಕಿ.
ಅರ್ಜಿ ಪೂರ್ಣಗೊಂಡ ನಂತರ ಪ್ರಿಂಟ್‌ ತೆಗೆದುಕೊಳ್ಳಿ.

ಪ್ರಿಂಟ್ ತೆಗೆದುಕೊಂಡ ಅರ್ಜಿ ಜತೆಗೆ ಶೈಕ್ಷಣಿಕ ಅರ್ಹತೆಗಳು, ರಕ್ಷಣಾ ಸಚಿವಾಲಯದಿಂದ ಬಿಡುಗಡೆಯಾದ ಪ್ರಮಾಣಪತ್ರ, ಜನ್ಮ ದಿನಾಂಕ ಪತ್ರ ಪತ್ರ, ಇತರೆ ಪ್ರಮಾಣಪತ್ರಗಳನ್ನು ಲಗತ್ತಿಸಿ ಕೆಳಗಿನ ವಿಳಾಸಕ್ಕೆ ಸಲ್ಲಿಸುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಜೆನೆರಲ್ ಮ್ಯಾನೇಜರ್ (ಹೆಚ್‌ಆರ್‌), ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್‌, ಕೆ ಹೆಚ್ ರಸ್ತೆ, ಶಾಂತಿನಗರ, ಬೆಂಗಳೂರು – 560027.

ನೇಮಕ ವಿಧಾನ : ಮೆರಿಟ್‌ ಆಧಾರಿತವಾಗಿ ಶಾರ್ಟ್‌ ಲಿಸ್ಟ್‌ ಆದವರಿಗೆ ಲಿಖಿತ ಪರೀಕ್ಷೆಯನ್ನು 100 ಅಂಕಗಳಿಗೆ ನಡೆಸಲಾಗುವುದು. ಹಾಗೂ ಮೆಡಿಕಲ್ ಟೆಸ್ಟ್‌ ಸೇರಿದಂತೆ, ಇತರೆ ಪರೀಕ್ಷೆಗಳನ್ನು ನಡೆಸಿ ಅಂತಿಮವಾಗಿ ಆಯ್ಕೆ ಮಾಡಲಾಗುವುದು

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This