ಬಸವಕಲ್ಯಾಣ (ಹುಲಸೂರು) ಇತ್ತೀಚಿನ ವೈಜ್ಞಾನಿಕ ಪ್ರಭಾವದಿಂದ ಯುವ ಜನಾಂಗ ನಮ್ಮ ಸಂಸ್ಕೃತಿ, ಪರಂಪರೆ ಮರೆ ಯುತ್ತಿರುವುದು ವಿಷಾದನೀಯ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ಗುರುಬಸವೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವಕೇಂದ್ರ, ಬಸವೇಶ್ವರ ಅಭಿವೃದ್ಧಿ ಟ್ರಸ್ಟ್, ಬಸವ ಉತ್ಸವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಸಾಂಸ್ಕೃ ತಿಕ ನಾಯಕ ವಿಶ್ವ ಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ವಚನ ಗೀತೆ ಅಳವಡಿಸಿ ಪ್ರಸಾರ ಮಾಡುವುದು ಇಲ್ಲವೇ, ಡಿಜೆ ಅಳವಡಿಕೆ ತಗುಲುವ ವೆಚ್ಚದಲ್ಲಿ ಹಸಿ ದವರಿಗೆ ಪ್ರಸಾದ, ಅಸಹಾಯಕ ಜನರಿಗೆ ನೆರವು ನೀಡುವ ಸಂಸ್ಕೃತಿ ಬರಬೇಕು. ಬಸವತತ್ತ್ವ ಹಳ್ಳಿಹಳ್ಳಿಗಳಿಗೆಮುಟ್ಟಬೇಕು. ಅದಕ್ಕೆ ಯುವ ಜನತೆ ಜಾಗೃತ ರಾಗಬೇಕೆಂದರು.
ಬಸವ ಕೇಂದ್ರ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿದರು. ಗುರು ಬಸವೇಶ್ವರಸಂಸ್ಥಾನಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮೀಜಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರೊ.ಮೀನಾಕ್ಷಿ ಬಿರಾದಾರ ವಿಶೇಷ ಉಪನ್ಯಾಸ ನೀಡಿದರು. ಬಸವ ಕೇಂದ್ರ ತಾಲೂಕು ಅಧ್ಯಕ್ಷ ಆಕಾಶ ಖಂಡಾಳೆ, ಶ್ವೇತಾ ಭೂಜಂಗೆ ಮಾತನಾಡಿದರು. ಗ್ರಾಪಂ ಅಧ್ಯಕ್ಷ ದೀಪಾ ರಾಣಿ ಬೋಸ್ಟ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಸುಧೀರಕಾಡಾದಿ, ಮಾಜಿಸದಸ್ಯ ಮಲ್ಲಪ್ಪ ಧಬಾಲೆ, ಗ್ಯಾರಂಟಿ ಯೋಜನೆಗಳಜಿಲ್ಲಾ
ಉಪಾಧ್ಯಕ್ಷೆ ಲತಾ ಹಾರಕೂಡ, ಶಬ್ಬಿರ್ ಸಾಬ್ ಮುಜಾವರ್, ದತ್ತು ರಾಮ, ಸತೀಶ ಸ್ವಾಮಿ, ಬಸವರಾಜ ಕಾಡಾದಿ, ಶಿವಕುಮಾರ ಕೌಟೆ, ಮಹಾದೇವ ಮಹಾಜನ, ರೇಖಾ ಕಾಡಾದಿ, ಬಬಿತಾ ಬಡುರ ಇತರರಿದ್ದರು. ರಾಜಕುಮಾರ ತೊಂಡಾರ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು.
ಬಸವ ಜಯಂತಿ ನಿಮಿತ್ತ ಅದ್ದೂರಿ ಮೆರವಣಿಗೆಗೆ ಗ್ರಾಪಂ ಅಧ್ಯಕ್ಷೆ ದೀಪಾ ರಾಣಿ ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಗುರು ಬಸವೇಶ್ವರ ಸಂಸ್ಥಾನ ಮಠದಪೀಠಾಧಿಪತಿ ಶಿವಾನಂದಸ್ವಾಮೀ ನೇತೃತ್ವ ವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭೆಯ ತಾಲೂಕು ಅಧ್ಯಕ್ಷ ಪ್ರವೀಣ ಕಾಡಾದಿ, ಬಸವಕೇಂದ್ರ ತಾ. ಅಧ್ಯಕ್ಷ ಆಕಾಶ ಖಂಡಾಳೆ ಇದ್ದರು.







