ಫೇಡರಲ್ ಬ್ಯಾಂಕ್ ತನ್ನ ಮಾರಾಟ ವಿಭಾಗದ ಅಸೋಸಿಯೇಟ್ ಆಫೀಸರ್ (ಸೇಲ್ಸ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು ಖಾಸಗಿ ಬ್ಯಾಂಕಿಂಗ್ ವಲಯದಲ್ಲಿ ಉತ್ತಮ ವೃತ್ತಿಭದ್ರತೆ, ಸ್ಪರ್ಧಾತ್ಮಕ ವೇತನ ಹಾಗೂ ವೃದ್ಧಿ ಅವಕಾಶಗಳನ್ನು ಹೊಂದಿವೆ.
ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯದ ನಿವಾಸಿಗಳಿಗಷ್ಟೇ ಈ ಅವಕಾಶ ಲಭ್ಯ.ಆಸಕ್ತರು https://www.federalbank.co.in ವೆಬ್ಸೈಟ್ನಲ್ಲಿ 2025 ಜೂನ್ 22ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಲು ಉತ್ಸುಕರಾಗಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಒದಗಿಸುತ್ತವೆ.ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಜೂನ್ ಎಂದು ನಿಗದಿಪಡಿಸಲಾಗಿದೆ. ಅರ್ಜಿ ಲಿಂಕ್ ಜೊತೆಗೆ ಅಧಿಸೂಚನೆಯು ಅಧಿಕೃತ ವೆಬ್ಸೈಟ್ federalbank.co.in ನಲ್ಲಿ ಲಭ್ಯವಿದೆ.ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಉದ್ಯೋಗ ವಿವರಗಳು
ಇಲಾಖೆ ಹೆಸರು ಫೆಡರಲ್ ಬ್ಯಾಂಕ್
ಹುದ್ದೆಗಳ ಹೆಸರು ಅಸೋಸಿಯೇಟ್ ಆಫೀಸರ್ (ಸೇಲ್ಸ್)
ಒಟ್ಟು ಹುದ್ದೆಗಳು ತಿಳಿಸಿಲ್ಲ
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online)
ಉದ್ಯೋಗ ಸ್ಥಳ – ಭಾರತಾದ್ಯಂತ
ವಿದ್ಯಾರ್ಹತೆ
ಅಸೋಸಿಯೇಟ್ ಆಫೀಸರ್ಸ್ (ಸೇಲ್ಸ್) ಹುದ್ದೆ ಇದಾಗಿದ್ದು, ದೇಶದ ಯಾವುದೇ ವಿಶ್ವ ವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಗಮನಿಸಿ, ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಮತ್ತು ಪದವಿಯಲ್ಲಿ ಶೇ. 50ಕ್ಕಿಂತ ಅಧಿಕ ಅಂಕ ಪಡೆದಿರಬೇಕು. ಜತೆಗೆ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು
ವಯೋಮಿತಿ
•ಅಭ್ಯರ್ಥಿಯು 27 ವರ್ಷ ಮೀರಿರಬಾರದು (01-06-1998 ಅಥವಾ ನಂತರ ಜನಿಸಿದ್ದವರಾಗಿರಬೇಕು)
•ಕೇವಲ ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಿವಾಸಿಗಳೇ ಅರ್ಜಿ ಸಲ್ಲಿಸಬಹುದು
•ಕೇವಲ ಭಾರತೀಯ ನಾಗರಿಕರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ
ಅರ್ಜಿ ಶುಲ್ಕ
ಆಯ್ಕೆ ವಿಧಾನ
ಪರೀಕ್ಷಾ ವಿಭಾಗಗಳು
ಪರೀಕ್ಷಾ ಕೇಂದ್ರಗಳು
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 10 ಜೂನ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಜೂನ್ 2025
ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್ಸೈಟ್ https://www.federalbank.co.in ಗೆ ಭೇಟಿ ನೀಡಿ.
“Careers” ವಿಭಾಗದಲ್ಲಿ Associate Officer Recruitment 2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹೊಸ ಪುಟದಲ್ಲಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ನಮೂದಿಸಿ.
ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಅರ್ಜಿ ಶುಲ್ಕ ₹350 ಪಾವತಿಸಿ.
ಅರ್ಜಿ ಯಶಸ್ವಿಯಾಗಿ ಸಲ್ಲಿಸಿದ ನಂತರ ಅದರ ಪ್ರಿಂಟ್ಔಟ್ ತೆಗೆದುಕೊಳ್ಳಿ, ಭವಿಷ್ಯದಲ್ಲಿ ಬಳಸಲು ಸಹಾಯಕವಾಗಿರಬಹುದು.







